ತೆಂಕಕಾರಂದೂರು ಮಿಲ್ಕ್ ಸೊಸೈಟಿ ಸಭಾಂಗಣದಲ್ಲಿ ರಬ್ಬರ್ ಬೆಳೆಗಾರರ ಸಭೆ

ತೆಂಕಕಾರಂದೂರು: ರಬ್ಬರ್ ಉತ್ಪಾದಕರ ಸೊಸೈಟಿ ಮುಖಾಂತರ ರಬ್ಬರ್ ರೈತರ ಅಭಿವೃದ್ದಿ ಸಾಧ್ಯ. ರಬ್ಬರ್ ಉತ್ಪಾದಕರ ಸೊಸೈಟಿ ಮಾಡಿ ರೈತರಿಗೆ ಅನುಕೂಲವಗುವಂತೆ ಕಾರ್ಯಕ್ರಮ ರೂಪಿಸಿ ಗ್ರಾಮಾಂತರ ಪ್ರದೇಶದ ರೈತರ ಅಭಿವೃದ್ದಿಗಾಗಿ ಶ್ರಮಿಸಬೇಕೆಂದು ಎಂದು ರಬ್ಬರ್ ಮಂಡಳಿಯ ಬೆಳ್ತಂಗಡಿ ಅಭಿವೃದ್ದಿ ಅಧಿಕಾರಿ ಅನಿಲ್ ಕುಮಾರ್ ಹೇಳಿದರು.
ಸಂಗಾತಿ ಎ.ಕೆ.ಜಿ ಬೀಡಿ ಕಾರ್ಮಿಕರ ಗೃಹ ನಿರ್ಮಾಣ ಸೌಹಾರ್ದ ಸಹಕಾರಿ ಸಂಘದ ಸಹಕಾರದೊಂದಿಗೆ ಇತ್ತೀಚೆಗೆ ತೆಂಕಕಾರಂದೂರು ಗ್ರಾಮದ ಪೆರಾಲ್ದರಕಟ್ಟೆ ಹಾಲು ಉತ್ಪಾದಕರ ಸಹಕಾರ ಸಂಘದ ಸಭಾಂಗಣದಲ್ಲಿ ನಡೆದ ರಬ್ಬರ್ ಬೆಳೆಗಾರರಿಗೆ ಸಭೆಯಲ್ಲಿ ಅವರು ಮಾತನಾಡಿದರು.
ರಬ್ಬರ್ ಬೆಳೆಗಾರರು ರಬ್ಬರ್ ಉತ್ಪಾದಕರ ಸೊಸೈಟಿಮಾಡಿದರೆ ರಬ್ಬರ್ ಮಂಡಳಿಯು ಅದಕ್ಕೆ ಪ್ರೋತ್ಸಾಹ ನೀಡಲಿದೆ ಎಂದರು. ಸಂಗಾತಿ ಕಾರ್ಮಿಕರ ಗೃಹ ನಿರ್ಮಾಣ ಸಹಕಾರಿ ಸಂಘದ ಅಧ್ಯಕ್ಷ ಹರಿದಾಸ್ ಎಸ್.ಎಮ್ ಮಾತನಾಡಿ, ತೆಂಕಕಾರಂದೂರು ಪ್ರದೇಶದ ಸುತ್ತಮುತ್ತಲಿನ ಗ್ರಾಮದ ಎಲ್ಲಾ ರೈತರಿಗೆ ಅನುಕೂಲವಾಗುವಂತೆ ರಬ್ಬರ್ ಉತ್ಪಾದಕರ ಸೊಸೈಟಿ ಆರಂಭಿಸಿ ಕೆಲಸ ಮಾಡಬೇಕು ಆ ಮೂಲಕ ರೈತರಿಗೆ ಹೊಸ ಭರವಸೆ ಮೂಡಿಸಬೇಕೆಂದರು.
ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಅರ್ಕಕೀರ್ತಿ ಹೆಗ್ಡೆಯವರು ಸಹಕಾರಿ ಸಂಘದ ಪ್ರಾಮುಖ್ಯತೆ ಹಾಗೂ ಅದರಿಂದ ರೈತರಿಗಾಗುವ ಅನುಕೂಲತೆಗಳ ಬಗ್ಗೆ ವಿವರಿಸಿದರು. ಪ್ರಗತಿಪರ ರೈತ ಶಿವಾನಂದ ಹೆಗ್ಡೆ, ರೈತರ ಬಗ್ಗೆ ಕಾಳಜಿ ಹೊಂದಿದ ಸಾಹಿತಿ ಪಾ.ರಾ.ಶಾಸ್ತ್ರಿ, ಹಾಲು ಉತ್ಪಾದಕರ ಸಂಘದ ಕಾರ್ಯದರ್ಶಿ ವಿದ್ಯಾನಂದ ಉಪಸ್ಥಿತರಿದ್ದರು.
ಆ ಪ್ರದೇಶದ ರಬ್ಬರ್ ಬೆಳೆಗಾರರು ಉತ್ತಮ ಸಲಹೆ ಸೂಚನೆಗಳನ್ನು ನೀಡಿದರು. ಸಹಕಾರಿ ಸಂಘದ ನಿರ್ದೇಶಕಿ ಸುಕನ್ಯಾ ಹಾಗೂ ಇತರರು ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.