HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

ಪ್ರಧಾನಮಂತ್ರಿ ಉಜ್ವಲಾ ಯೋಜನೆಯಡಿ ನಡ ಗ್ರಾಮದ 100 ಕುಟುಂಬಗಳಿಗೆ ಉಚಿತ ಅನಿಲ ಸಂಪರ್ಕ

ನಡ: ಪ್ರಧಾನಮಂತ್ರಿ ಉಜ್ವಲಾ ಯೋಜನೆಯಡಿ ಲಾಯಿಲ ಜಿ.ಪಂ ಸದಸ್ಯೆ ಸೌಮ್ಯಲತಾ ಜಯಂತ ಗೌಡ ಅವರ ಮುತುವರ್ಜಿಯಿಂದ ತಮ್ಮ ಕಾರ್ಯವ್ಯಾಪ್ತಿಯ ಸುಮಾರು 100 ಜನರಲ್ ವಿಭಾಗದ ಕುಟುಂಬಗಳಿಗೆ ಉಚಿತ ಅನಿಲ ಸಂಪರ್ಕ, ಸಾಧನ ಸಲಕರಣೆಗಳ ವಿತರಣೆ ನ. 4 ರಂದು ನಡ ಗ್ರಾಮದ ಗುರಿಪಳ್ಳದಲ್ಲಿ ನಡೆಯಿತು.
ಶಾಸಕ ಹರೀಶ್ ಪೂಂಜ ಎಲ್ಲಾ ಫಲಾನುಭವಿಗಳಿಗೆ ಉಚಿತ ಅಡುಗೆ ಅನಿಲ ಸಂಪರ್ಕದ ಕಿಟ್ಟನ್ನು ಹಸ್ತಾಂತರಿಸಿದರು. ಈ ಸಮಾರಂಭವನ್ನು ಸೌಮ್ಯಲತಾ ಜಯಂತ ಗೌಡ ಅವರು ಆಯೋಜಿಸಿದ್ದು, ಫಲಾನುಭವಿಗಳು ಮಂಜು ಇಂಡೇನ್ ಗ್ಯಾಸ್ ಕಂಪೆನಿಯಿಂದ ಒಂದು ಅನಿಲ ಜಾಡಿ, ರೆಗ್ಯುಲೇಟರ್ ಮತ್ತು ಸಾಧನಗಳನ್ನು ಪಡೆದುಕೊಂಡರು.
ಈ ಕಾರ್ಯಕ್ರಮದಲ್ಲಿ ಬಿಜೆಪಿ ಪ್ರ. ಕಾರ್ಯದರ್ಶಿ ಸೀತಾರಾಮ ಬೆಳಾಲು, ಉದ್ಯಮಿ ಜಯಂತ ಗೌಡ, ನಡ ಬಿಜೆಪಿ ಗ್ರಾಮ ಸಮಿತಿ ಅಧ್ಯಕ್ಷ ಅಜಿತ್ ಆರಿಗಾ, ಗ್ರಾ.ಪಂ ಸದಸ್ಯರಾದ ನಾರಾಯಣ ಗೌಡ, ರೇಣುಕಾ, ರಾಮಣ್ಣ ಕುಂಬಾರ, ನಳಿನಿ, ಸಚಿನ್ ಮಾಳಿಗೆಮನೆ, ಊರವರಾದ ಎಂ ಸಂಜೀವ ಗೌಡ ಮಾಲಿಗೆ ಮನೆ, ರಘುನಾಥ ಪೂಜಾರಿ, ಬಾಲಕೃಷ್ಣ ಗೌಡ ಕುಶಾಲಪ್ಪ ಗೌಡ, ವಿನಯ ಬರಾಯ, ರಾಜೇಶ್ ಶೆಟ್ಟಿ ಹೊಸಮನೆ, ಪಕೀರ ಬಡೆಕೊಟ್ಟು, ಚನನ ಗೌಡ, ಧರ್ಣಪ್ಪ ಪೂಜಾರಿ, ರವಿ ಪೂಜಾರಿ ಮೊದಲಾದರು ಉಪಸ್ಥಿತರಿದ್ದರು.

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.