ನಡ: ಇತ್ತೀಚೆಗೆ ಕರ್ನಾಟಕ ಸರಕಾರದ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾದ ಕೆ. ಹರೀಶ್ ಕುಮಾರ್ ರವರಿಗೆ ನಡ/ಕನ್ಯಾಡಿ ಅಭಿಮಾನಿಗಳು ಹಾಗೂ ಹಿತೈಷಿಗಳ ವತಿಯಿಂದ ಸನ್ಮಾನ ಕಾರ್ಯಕ್ರಮವು ನ.5 ರಂದು ನಡ ಸಮಾಜ ಮಂದಿರದಲ್ಲಿ ಜರುಗಿತು.
ನಡಗುತ್ತು ಧನಂಜಯ ಅಜ್ರಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಸುರ್ಯ ಸದಾಶಿವ ರುದ್ರ ದೇವಸ್ಥಾನದ ಆಡಳಿತ ಮೊಕ್ತೇಸರ ಸುಭಾಶ್ಚಂದ್ರ ಸುರ್ಯಗುತ್ತು ಸನ್ಮಾನ ಕಾರ್ಯ ನೆರವೇರಿಸಿದರು. ನಾವೂರು ಆರೋಗ್ಯ ಕ್ಲಿನಿಕ್ ಡಾ| ಪ್ರದೀಪ್ ಅಭಿನಂದನಾ ಭಾಷಣಗೈದರು. ಕಾರ್ಯಕ್ರಮದಲ್ಲಿ ಮಂಜೊಟ್ಟಿ ಸ್ಟಾರ್ಲೈನ್ ಆಂಗ್ಲ ಮಾಧ್ಯಮ ಶಾಲೆ ಅಧ್ಯಕ್ಷ ಸೈಯದ್ ಹಬೀಬ್ ಸಾಹೇಬ್, ಪ್ರಗತಿಪರ ಕೃಷಿಕ ವಾಸುದೇವ ರೈ, ನಿವೃತ್ತ ಸೇನಾಯೊಧ ಉಮೇಶ್ ಬಂಗೇರ, ಮಂಜೊಟ್ಟಿ ಹೋಲಿ ಕ್ರಾಸ್ ಚರ್ಚ್ ಉಪಾಧ್ಯಕ್ಷ ವಲೇರಿಯನ್ ಮೋನಿಸ್ ಗೌರವ ಉಪಸ್ಥಿತರಿದ್ದರು. ನಡ ಹಾಗೂ ಕನ್ಯಾಡಿ ಗ್ರಾಮಸ್ಥರು, ಹಿತೈಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.