ನ.10: ಗುರಿಪಳ್ಳದಲ್ಲಿ ಹೊನಲು ಬೆಳಕಿನ ಕೆಸರುಗದ್ದೆ ಹಗ್ಗಜಗ್ಗಾಟ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಉಜಿರೆ: ಗೆಳೆಯರ ಬಳಗ ಗುರಿಪಳ್ಳ ಇದರ ಆಶ್ರಯದಲ್ಲಿ, ಇಲ್ಲಿನ ಭಾರಧ್ವಾಜ ಸದನದಲ್ಲಿ ನ.10 ರಂದು ಅಂತರ್ ಜಿಲ್ಲಾ ಮಟ್ಟದ ಹೊನಲು ಬೆಳಕಿನ ಕೆಸರುಗದ್ದೆ ಹಗ್ಗಜಗ್ಗಾಟ ಸ್ಪರ್ಧೆಯು ನಡೆಯಲಿದೆ ಎಂದು ಬಳಗದ ಗೌರವಾಧ್ಯಕ್ಷ ಸಚಿನ್ ಕುಮಾರ್ ನೂಜೋಡಿ ಹೇಳಿದರು.
ಅವರು ನ.5 ರಂದು ಪ್ರತಿಕಾಭವನದಲ್ಲಿ ಕರೆಯಲಾದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು. ದೀಪಾವಳಿ ಪ್ರಯುಕ್ತ ನಡೆಯಲಿರುವ ಈ ಸ್ಪರ್ಧೆಯಲ್ಲಿ ದ.ಕ, ಕಾಸರಗೋಡು ಹಾಗೂ ಉಡುಪಿ ಜಿಲ್ಲೆಗಳಿಂದ ಸುಮಾರು 40ಕ್ಕೂ ಅಧಿಕ ತಂಡಗಳು ಭಾಗವಹಿಸಲಿದೆ. ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಖ್ಯಾತ ತುಳುಹಾಸ್ಯ ನಟ ಅರವಿಂದ್ ಬೋಳಾರ್ ಹಾಗೂ ತುಳು ನಾಯಕ ನಟ ಪೃಥ್ವಿ ಅಂಬಾರ್ ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಬಿ.ಎಸ್.ಎಫ್ ಯೋಧ ಅಶೋಕ್ ಗೌಡ ಮಾಲ್ದಂಡ, ನಾಟಿ ವೈದ್ಯ ಚರಣ ಗೌಡ ಬಿಲ್ಲರೋಡಿ, ರಾಷ್ಟ್ರ ಮಟ್ಟದ ಕ್ರೀಡಾಪಟುಗಳಾದ ಕು| ಅರ್ಚನಾ ಗೌಡ, ಐಶ್ವರ್ಯ ಪೂಜಾರಿ ಎನೀರು ಇವರುಗಳಿಗೆ ಸನ್ಮಾನ ನಡೆಯಲಿದೆ ಎಂದರು.
ಪತ್ರಿಕಾಗೋಷಿಯಲ್ಲಿ ಗೆಳೆಯರ ಬಳಗದ ಸದಸ್ಯರಾದ ತಾರಾನಾಥ ಪೂಜಾರಿ ಹಾಗೂ ಗುರುರಾಜ್ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.