ಶಿಶಿಲ ಬಸದಿ ಪರಿಸರದಲ್ಲಿ ನಿಧಿ ಶೋಧ: ಆರೋಪಿಗಳು ಪರಾರಿ

ಶಿಶಿಲ: ಇಲ್ಲಿಯ ಕೋಟೆಬಾಗಿಲಿನಲ್ಲಿ ಪಾಳು ಬಿದ್ದಿರುವ ಪುರಾತನ ಬಸದಿಯೊಳಗಡೆ ನಿಧಿಗಾಗಿ ಶೋಧ ನಡೆಸಿರುವ ಪ್ರಕರಣ ನ.3 ರಂದು ತಡರಾತ್ರಿ ಬೆಳಕಿಗೆ ಬಂದಿದ್ದು, ಆರೋಪಿಗಳು ಪರಾರಿಯಾಗಿದ್ದಾರೆ.
ಮತ್ಸ್ಯತೀರ್ಥ ಕ್ಷೇತ್ರವೆಂದೇ ಖ್ಯಾತಿ ಪಡೆದ ಇಲ್ಲಿನ ಬಸದಿ ಪರಿಸರದಲ್ಲಿ ಎರಡು ದಿನಗಳಿಂದ ಕೆಲವು ಅನುಮಾನಾಸ್ಪದ ವ್ಯಕ್ತಿಗಳು ತಿರುಗಾಡುತ್ತಿದ್ದುದನ್ನು ಕಂಡು ಸ್ಥಳೀಯರು ಪ್ರಶ್ನಿಸಿದಾಗ, ಅವರು ತಾವು ಮೀನು ಹಿಡಿಯಲೆಂದು ಹೊಳೆಗೆ ಬಂದವರೆಂದು ತಿಳಿಸಿದ್ದರು. ಅನುಮಾನಗೊಂಡ ಸ್ಥಳೀಯರು ರಾತ್ರಿ ವೇಳೆ ಬಸದಿಗೆ ತೆರಳಿ ಪರಿಶೀಲಿಸಿದಾಗ ಅಲ್ಲಿ ಹಾಸು ಕಲ್ಲುಗಳನ್ನು ಸರಿಸಿ, ಹೊಂಡ ತೋಡಿರುವುದು ಪತ್ತೆಯಾಯಿತು. ಪಕ್ಕದಲ್ಲಿಯೇ ತೆಂಗಿನಕಾಯಿ, ಕುಂಕುಮ, ಲಿಂಬೆಹುಳಿ ಹಾಗೂ ಹೂವುಗಳಿಂದ ಪೂಜೆ ಮಾಡಿದ ಕುರುಹು ಕೂಡ ಕಂಡ ಬಂದಿದೆ.
ಕೂಡಲೇ ಸ್ಥಳೀಯರು ಧರ್ಮಸ್ಥಳ ಪೊಲೀಸರಿಗೆ ವಿಷಯ ತಿಳಿಸಿದ್ದು, ತಡರಾತ್ರಿ ಪೊಲೀಸರು ಆಗಮಿಸಿ ಪರಿಶೀಲಿಸಿದ್ದಾರೆ. ವಿಶಯ ತಿಳಿದ ಆರೋಪಿಗಳು ಪರಾರಿಯಾಗುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಅವರ ವಾಹನದ ನೋಂದಣಿ ಸಂಖ್ಯೆ ಲಭ್ಯವಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.