HomePage_Banner_
HomePage_Banner_

ಲಾಯಿಲ: ನೀರಿನಲ್ಲಿ ಮುಳುಗಿ ಯುವಕ ಸಾವು

ಸ್ಟೀವನ್ ರೋಡ್ರಿಗಸ್

ಲಾಯಿಲ: ಇಲ್ಲಿಯ ಕನ್ನಾಜೆ ಎಂಬಲ್ಲಿಯ ಯುವಕನೊಬ್ಬ ಗೆಳೆಯರೊಂದಿಗೆ ನದಿ ನೀರಿನಲ್ಲಿ ಸ್ನಾನ ಮಾಡುತ್ತಿದ್ದ ಸಂದರ್ಭದಲ್ಲಿ ಆಕಸ್ಮಿಕವಾಗಿ ಮುಳುಗಿ ಮೃತಪಟ್ಟ ಘಟನೆ  ನ.4 ರಂದು ಸಂಜೆ ನಡೆದಿದೆ. ಕನ್ನಾಜೆ ನಿವಾಸಿ ಲಾರೆನ್ಸ್ ರೊಡ್ರಿಗಸ್ ರವರ ಪುತ್ರ  ಸ್ಟೀವನ್ ರೊಡ್ರಿಗಸ್ (24.ವ ) ಮೃತಪಟ್ಟ ದುರ್ದೈವಿ.

ಲಾಯಿಲ ಗ್ರಾಮದ ಪಡ್ಲಾಡಿ ಸಮೀಪದ ಕುರ್ತೆಕಟ್ಟದಲ್ಲಿ ಗೆಳೆಯರ ಜೊತೆ ನದಿಯಲ್ಲಿ ಸ್ನಾನ ಮಾಡುತ್ತಿದ್ದ ಸಂದರ್ಭ ಈ ದುರ್ಘಟನೆ ಸಂಭವಿಸಿದೆ.  ಲಾರೆನ್ಸ್ ರವರ ಇಬ್ಬರು ಪುತ್ರರಲ್ಲಿ ಕಿರಿಯವರಾಗಿದ್ದ ಸ್ಟೀವನ್ ಪೈಂಟಿಂಗ್ ಕೆಲಸ ಮಾಡುತ್ತಿದ್ದರು.
ಮೃತದೇಹವನ್ನು ಮುಳುಗುತಜ್ಞ ಇಸ್ಮಾಯಿಲ್ ಸಂಜಯನಗರ ಇವರು ಮೇಲಕ್ಕೆತ್ತಿದ್ದಾರೆ. ಮರಣೋತ್ತರ ಪರೀಕ್ಷೆಯನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ನಡೆಸಲಾಯಿತು. ಈ ಸಂಬಂಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.