ಧ್ವನಿವರ್ಧಕ ಮತ್ತು ದೀಪಾಲಂಕರ ಸಮಿತಿಯಿಂದ ಶಾಸಕರಿಗೆ ಅಭಿನಂದನಾ ಕಾರ್ಯಕ್ರಮ

ಬೆಳ್ತಂಗಡಿ : ಬೆಳ್ತಂಗಡಿ ತಾಲೂಕು ಧ್ವನಿವದಕ ಹಾಗೂ ದೀಪಾಲಂಕಾರ ಸಮಿತಿಯಿಂದ ಶಾಸಕರಾದ ಹರೀಶ್ ಪೂಂಜ ಇವರಿಗೆ ಅಭಿನಂದನಾ ಕಾರ್ಯಕ್ರಮವು ಅ. 28ರಂದು ಉಜಿರೆ ಶಾರದಾ ಮಂಟಪದಲ್ಲಿ ಜರುಗಿತು. ಶಾಸಕರಿಗೆ ಶಾಲು ಹೊದಿಸಿ ಸನ್ಮಾನ ಮಾಡಲಾಯಿತು.
ಸಮ್ಮಾನಕ್ಕೆ ಉತ್ತರಿಸುತ್ತ ಮಾತನಾಡುತ್ತ ಅವರು ಯಾವುದೇ ಒಂದು ಸರಕಾರಿ ಸಭೆ ಸಮಾರಂಭಗಳು ಯಶಸ್ವಿಯಾಗಬೇಕೆಂದರೆ ಅದಕ್ಕೆ ಧ್ವನಿವರ್ಧಕ ಹಾಗೂ ದೀಪಾಲಂಕರ ಇವರು ಮುಖ್ಯ ಕಾರಣ ಎಂದರು.
ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ರೋಹಿತ್ ಕುಮಾರ್ ಇವರು ಮಾತನಾಡಿ ಸಂಘದಲ್ಲಿ ಪ್ರತಿಯೊಬ್ಬರು ತೊಡಗಿಸಿಕೊಳ್ಳಬೇಕು. ಹಾಗೂ ಪ್ರತಿಯೊಬ್ಬ ಸದಸ್ಯರ ಸುರಕ್ಷತಾ ದೃಷ್ಟಿಯಿಂದ ಮುಂದಿನ ದಿನಗಳಲ್ಲಿ ಎಲ್ಲ ಸದಸ್ಯರಿಗೂ ಸಂಘದ ಐಡಿಕಾರ್ಡ್ ಮಾಡಿಕೊಡಲಾಗುವುದು ಎಂದರು.
ದ.ಕ.ಜಿ.ಸಂ.ಅಧ್ಯಕ್ಷರಾದ ರಾಜೇಶ್ ವಿಟ್ಲ, ಸಂಘದ ಸ್ಥಾಪಕಧ್ಯಕ್ಷರಾದ ಪುರಂದರ, ಮಾತನಾಡಿದರು. ಸಂಘದ ಕೋಶಾಧಿಕಾರಿ ರಾಮ್‌ಕುಮಾರ್ ಸ್ವಾಗತಿಸಿ, ಕಾರ್ಯದರ್ಶಿ ಹರೀಶ್ ಕುಮಾರ್ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.