HomePage_Banner_
HomePage_Banner_
HomePage_Banner_

ಬಗರ್‌ಹುಕುಂ ಭೂಮಿ ಮಾರಾಟದ ಅವಧಿ ಇನ್ನು ಮುಂದೆ 25 ವರ್ಷಕ್ಕೆ ಏರಿಕೆ

ಬೆಳ್ತಂಗಡಿ: ರಾಜ್ಯದಲ್ಲಿ ಕೃಷಿಭೂಮಿ ಪ್ರಮಾಣ ದಿನದಿಂದ ದಿನಕ್ಕೆ ಕುಗ್ಗುತ್ತಿರುವ ಗಂಭೀರ ಸಮಸ್ಯೆಯನ್ನು ಮನಗಂಡು ಬಗರ್‌ಹುಕುಂ ನಲ್ಲಿ ಮಂಜೂರಾದ ಜಮೀನು ಪರಭಾರೆಗೆ ಇರುವ ಅವಧಿಯನ್ನು 15 ರಿಂದ 25 ವರ್ಷಕ್ಕೆ ಹೆಚ್ಚಿಸುವ ನಿರ್ಧಾರ ಕೈಗೊಂಡಿದೆ.
2005 ಜನವರಿ 1 ರ ವರೆಗೆ ಬಗರ್‌ಹುಕುಂ ನಲ್ಲಿ ಸಾಗುವಳಿ ಮಾಡಿದವರು 2019 ಮಾ. 16 ರರ ಒಳಗೆ100 ರೂ. ಶುಲ್ಕದೊಂದಿಗೆ ಅರ್ಜಿ ಸಲ್ಲಿಸಬಹುದೆಂದು ಸುತ್ತೋಲೆ ಹೊರಡಿಸಿದ್ದಾರೆ. ಭೂಕಂದಾಯ ಕಾಯ್ದೆಗೆ ತಂದಿರುವ ತಿದ್ದುಪಡಿಯಲ್ಲಿ ಜಾಗದ ಪರಭಾರೆ ಅವಧಿ ವಿಸ್ತರಣೆ ತೀರ್ಮಾನವನ್ನೂ ಪ್ರಕಟಿಸಲಾಗಿದೆ.
25 ವರ್ಷ ಮಿತಿ ಆಗಿರುವ ಭೂಮಿಯನ್ನು ಇನ್ನು ಮುಂದಕ್ಕೆ ವಸತಿ ಯೋಜನೆ ಅನುಷ್ಟಾನ, ಸ್ಮಶಾನ ಮತ್ತು ಇತರ ಅವಕಾಶಗಳಿಗೆ ಸರಕಾರದ ಅಧೀನಕ್ಕೆ ಪಡೆಯುವ ಸಂದರ್ಭ ಎದುರಾದಾಗ ಆ ಭೂಮಿಗೆ ಮಾರ್ಗಸೂಚಿ ಮೊತ್ತ ನೀಡಿ ಖರೀದಿಮಾಡಬೇಕೇ ಹೊರತು ಮನಸೋ ಇಚ್ಚೆ ವಶಪಡಿಸಿಕೊಳ್ಳುವಂತಿಲ್ಲ ಎಂದೂ ನಿರ್ದೇಶನ ಇದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.