ಯಂತ್ರದ ಮೂಲಕ ಭತ್ತದ ಕಟಾವು ಶಾಲಾ ಮಕ್ಕಳಿಗೆ ಪ್ರಾತ್ಯಕ್ಷಿಕೆ

ಪುದುವೆಟ್ಟು : ಶ್ರೀ.ಧ.ಮಂ.ಆ.ಹಿ.ಪ್ರಾ.ಶಾಲೆ ಪುದುವೆಟ್ಟು ಇಲ್ಲಿನ ಮಕ್ಕಳಿಗೆ ಯಂತ್ರದ ಮೂಲಕ ಭತ್ತ ಖಟಾವು ಮಾಡುವ ಪ್ರಕ್ರಿಯೆಯನ್ನು ಪ್ರಗತಿಪರ ಕೃಷಿಕ ಚಿತ್ತರಂಜನ್ ಜೈನ್‌ರವರ ಗದ್ದೆಯಲ್ಲಿ ಅ. 31 ರಂದು ಪ್ರಾಯೋಗಿಕವಾಗಿ ತಿಳಿಸಿಕೊಡಲಾಯಿತು.
ಯಂತ್ರದ ಮೂಲಕ ಭತ್ತ ಖಟಾವು ಮಾಡುವ ಕ್ರಿಯೆಯನ್ನು ಶಾಲೆಯ ವಿದ್ಯಾರ್ಥಿಗಳು ಎಲ್ಲಾ ಶಿಕ್ಷಕರ ಸಹಕಾರದಿಂದ ವೀಕ್ಷಣೆಯನ್ನು ಮಾಡಿದರು. ಚಿತ್ತರಂಜನ್ ರವರು ತಮ್ಮ ಕೃಷಿಯಿಂದ ಕಂಡುಕೊಂಡ ಅನುಭವವನ್ನು ಮಕ್ಕಳೊಂದಿಗೆ ಹಂಚಿಕೊಂಡರು. ಶಾಲೆಯ ಮುಖ್ಯ ಶಿಕ್ಷಕ ಡಿ.ವಸಂತ್ ಭಟ್ ಭತ್ತ ಕೃಷಿಯ ಬಗ್ಗೆ ಜನರಲ್ಲಿ ಇನ್ನೂ ಒಲವು ಮೂಡಿಸುವಂತ ಯಂತ್ರೋಪಕರಣಗಳು ಮಾರುಕಟ್ಟೆಗೆ ಬರುವಂತಾಗಲಿ ಎಂದು ಈ ಸಂದರ್ಭದಲ್ಲಿ ತಿಳಿಸಿಕೊಟ್ಟರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.