ಪ್ರಕಾಶ್ ಇಲೆಕ್ಟ್ರಾನಿಕ್ಸ್ ಮೂರು ಮಳಿಗೆಗಳಲ್ಲಿ “ದೀಪಾವಳಿ ಆಫರ್”ಗಳ ಸುರಿಮಳೆ

ಬೆಳ್ತಂಗಡಿ: ಅತ್ಯಂತ ಕನಿಷ್ಠ ವರ್ಷಗಳಲ್ಲೇ ಅತೀ ಹೆಚ್ಚು ಪ್ರಸಿದ್ಧಿ ಪಡೆದಿರುವ ವಿಶಾಲವಾದ ಶೋರೂಮ್ ಪ್ರಕಾಶ್ ಇಲೆಕ್ಟ್ರಾನಿಕ್ಸ್ ಮತ್ತು ಫರ್ನಿಚರ್‍ಸ್ ಮಳಿಗೆ ಬೆಳ್ತಂಗಡಿ- ಉಜಿರೆ- ಗುರುವಾಯನಕೆರೆಯಲ್ಲಿ ದೀಪಾವಳಿ ಪ್ರಯುಕ್ತ ವಿಶೇಷ ಮಾರಾಟ ಮೇಳ ಹಮ್ಮಿಕೊಳ್ಳಳಾಗಿದೆ.
ಜಗತ್ಪ್ರಸಿದ್ದ ಬ್ರಾಂಡ್‌ಗಳ ವಿಶಾಲ ಶ್ರೇಣಿ, ಅತ್ಯುತ್ತಮ ಗುಣಮಟ್ಟ, ವಿನಿಮಯ ಕೊಡುಗೆ, ವಿಶಾಲ ಪಾರ್ಕಿಂಗ್, ಎಲ್ಲಾ ಪ್ರಮುಖ ಕ್ರೆಡಿಟ್ ಕಾರ್ಡ್ ಸೌಲಭ್ಯ, ಎಲ್ಲಾ ಕಂಪೆನಿಯ ಖರೀದಿಯಲ್ಲೂ ಆಫರ್‌ಗಳು ಲಭ್ಯವಿದೆ. ಪ್ರತಿಯೊಂದು ಖರೀದಿಗೂ ಬೆಲೆಬಾಳುವ ಮತ್ತು ಉಪಯೋಗಕಾರಿ ವಸ್ತುಗಳ ಒಂದು ಖಚಿತ ಉಡುಗೊರೆ ಇದೆ. ಪೀಠೋಪಕರಣಗಳ ಮೇಲೆ ವಿಶೇಷ ರಿಯಾಯಿತಿ ಕೂಡ ಇದೆ.
ಪ್ರಕಾಶ್ ಎಲೆಕ್ಟ್ರಾನಿಕ್ಸ್‌ನಲ್ಲಿ ಸುಲಭ ಕಂತುಗಳಲ್ಲಿ 0 ಶೇ. ಪಾವತಿಸಿ ಎಲೆಕ್ಟ್ರಾನಿಕ್ಸ್ ವಸ್ತುಗಳನ್ನು ಖರೀದಿಸಿ ಬಹುಮಾನ ಗೆಲ್ಲುವ ಅವಕಾಶವನ್ನೂ ಗ್ರಾಹಕರಿಗೆ ಕಲ್ಪಿಸಲಾಗಿದೆ. ಬಂಪರ್ ಬಹುಮಾನಗಳಾಗಿ ಬೆಲೆಬಾಳುವ ಹುಂಡೈ ಕಾರು, ಇತರ ಬಹುಮಾನವಾಗಿ 10 ಬಜಾಜ್ ಪಲ್ಸರ್ ಬೈಕ್, 60 ಹೆಚ್ ಪಿ ಲೇಪ್‌ಟಾಪ್, 1008 ಸ್ಯಾಂಸಂಗ್ ಮೊಬೈಲ್ ಫೋನ್‌ಗಳನ್ನು ಗೆಲ್ಲಲು ಹಾಗೂ ದೀಪಾವಳಿ ಹಬ್ಬದೊಂದಿಗೆ ನಿಮ್ಮ ಅದೃಷ್ಟ ಪರೀಕ್ಷೆಗೈಯ್ಯಲು ನಮ್ಮ ಪ್ರಕಾಶ್ ಮಳಿಗೆಗೇ ಭೇಟಿ ನೀಡಿ ಎಂದು ಮಾಲಕರಾದ ಪುಷ್ಪರಾಜ್ ಶೆಟ್ಟಿ ಮತ್ತು ಸುಮನಾ ಪಿ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.