ನ.6: ಕಾಯರ್ತಡ್ಕ ಗೌಡರ ಸಂಘದ ವತಿಯಿಂದ ಕೆಸರ್‌ಡ್ ಒಂಜಿ ದಿನ ಆಟೋಟ ಸ್ಪರ್ಧೆ

Advt_NewsUnder_1
Advt_NewsUnder_1

ಕಾಯರ್ತಡ್ಕ: ಗೌಡರ ಯಾನೆ ಒಕ್ಕಲಿಗರ ಯುವ ಸೇವಾ ಸಂಘ ಗ್ರಾಮ ಸಮಿತಿ ಮತ್ತು ಗೌಡರ ಯಾನೆ ಒಕ್ಕಲಿಗರ ಮಹಿಳಾ ಸಏವಾ ಸಂಘ ಗ್ರಾಮ ಸಮಿತಿ ಕಾಯರ್ತಡ್ಕ, ಕಳೆಂಜ ಇದರ ವತಿಯಿಂದ ಕೆಸರ್‌ಡ್ ಒಂಜಿ ದಿನ ಆಟೋಟ ಸ್ಪರ್ಧೆಯು ಪಾಂಗಾಳ ಕೊರಗಪ್ಪ ಗೌಡರ ಬೈಲಿನಲ್ಲಿ ನ.6ರಂದು ಜರುಗಲಿದೆ.
ಸಂಜೆ ಕಾಯರ್ತಡ್ಕ ಶ್ರೀ ಉಮಾಮಹೇಶ್ವರ ದೇವಸ್ಥಾನದ ಶಿವಪಾರ್ವತಿ ಸಭಾ ವೇದಿಕೆಯಲ್ಲಿ ಸಮಾರೋಪ ಸಮಾರಂಭ ಜರುಗಲಿದ್ದು, ಆಶೀರ್ವಚನವನ್ನು ಮಂಗಳೂರು ಕಾವೂರು ಆದಿಚುಂಚನಗಿರಿ ಶಾಖಾ ಮಠದ ಶ್ರೀ ಧರ್ಮಪಾಲನಾಥ ಸ್ವಾಮೀಜಿ ನೀಡಲಿದ್ದಾರೆ. ಅಧ್ಯಕ್ಷತೆಯನ್ನು ಕಾಯರ್ತಡ್ಕ ಗೌಡರ ಗ್ರಾಮ ಸಮಿತಿಯ ಅಧ್ಯಕ್ಷ ವಿಶ್ವನಾಥ ಗೌಡ ಮರಕ್ಕಡ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಉಡುಪಿ ಮತ್ತು ಚಿಕ್ಕಮಗಳೂರು ಕ್ಷೇತ್ರದ ಲೋಕಸಭಾ ಸದಸ್ಯೆ ಶೋಭಾ ಕರಂದ್ಲಾಜೆ, ಪುತ್ತೂರು ಶಾಸಕರಾದ ಸಂಜೀವ ಮಠಂದೂರು, ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜ ಆಗಮಿಸಲಿದ್ದಾರೆ. ಬೆಳ್ತಂಗಡಿ ಗೌಡರ ಸಂಘದ ಅಧ್ಯಕ್ಷರಾದ ಸೋಮೇ ಗೌಡ ಗೌರವ ಉಪಸ್ಥಿತರಿರುವರು. ಸುಳ್ಯ ನೆಹರೂ ಮೆಮೋರಿಯಲ್ ಕಾಲೇಜಿನ ಕನ್ನಡ ಪ್ರಾಧ್ಯಾಪಕರಾದ ಡಾ| ಪೂವಪ್ಪ ಗೌಡ ಪ್ರಧಾನ ಭಾಷಣಕಾರರಾಗಿ ಹಾಗೂ ಇತರ ಗಣ್ಯರು ಅತಿಥಿಗಳಾಗಿ ಆಗಮಿಸಲಿದ್ದಾರೆ. ಈ ಸಂದರ್ಭ ಸಂತೋಷ್ ಗೌಡ ಬೊಟ್ಟು ಹಾಗೂ ಕು| ಧನ್ಯ ಹಾರಿತ್ತಕಜೆ ಇವರು ಸನ್ಮಾನಗೊಳ್ಳಲಿದ್ದಾರೆ.
ಸಭಾ ಕಾರ್ಯಕ್ರಮದ ನಂತರ ನೃತ್ಯವೈಭವ ಶಿವಂಕಾಂ ಬೆಂಗಳೂರು ಇವರಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರಗಲಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.