ಬೆಳ್ತಂಗಡಿ: ಪಟ್ಟಣ ಪಂಚಾಯತ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ೪ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದು ಆ ಹಿನ್ನೆಲೆಯಲ್ಲಿ ಇಲ್ಲಿನ ಮೂರುಮಾರ್ಗದ ಬಳಿಯ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಪಕ್ಷದ ಕಾರ್ಯಕರ್ತರು ಮತ್ತು ನಾಯಕರಿಂದ ವಿಜಯೋತ್ಸವ ನಡೆಯಿತು.
ವಿಜೇತ ಅಭ್ಯರ್ಥಿಗಳು ಪ್ರಮಾಣಪತ್ರದೊಂದಿಗೆ ಮತ ಎಣಿಕೆ ಕೇಂದ್ರದಿಂದ ಹೊರಬುರುತ್ತಿದ್ದಂತೆ ಅವರನ್ನು ಅಪ್ಪಿಕೊಂಡು ಸಂಭ್ರಮಪಟ್ಟ ಕಾರ್ಯಕರ್ತರು ಬಳಿಕ ಎಲ್ಲರೂ ಸೇರಿ ಮೂರುಮಾರ್ಗದ ಬಳಿ ಪಟಾಕಿ ಸಿಡಿಸಿ ಗೆಲುವಿನ ಖುಷಿ ಹಂಚಿಕೊಂಡರು.
ವಿಜೇತರಾದ ರಾಜಶ್ರೀರಮಣ್, ಜನಾರ್ದನ ಕುಲಾಲ್, ಮುಸ್ತಾರ್ಜಾನ್ ಮೆಹಬೂಬ್ ಮತ್ತು ಜಗದೀಶ್ ಡಿ ಇವರಿಗೆ ಹೂಮಾಲೆ ತೊಡಿಸಿದ ಕಾರ್ಯಕರ್ತರು ಮತ್ತು ನಾಯಕರು ಸಿಹಿ ತಿನ್ನಿಸಿ ಸಂಭ್ರಮಿಸಿದರು.
ಬ್ಲಾಕ್ ಕಾಂಗ್ರೆಸ್ ನಗರ ಅಧ್ಯಕ್ಷ ರಾಜಶೇಖರ ಅಜ್ರಿ ಬಿ, ತಾ.ಪಂ ಅಧ್ಯಕ್ಷೆ ದಿವ್ಯಜ್ಯೋತಿ,ಮಹಿಳಾ ಕಾಂಗ್ರೆಸ್ ಗ್ರಾಮೀಣ ಅಧ್ಯಕ್ಷೆ ಉಷಾ ಶರತ್, ನಗರ ಅಧ್ಯಕ್ಷೆ ಜಾಹಿರಾಬಾನು, ಜಿ.ಪಂ ಸದಸ್ಯ ಶಾಹುಲ್ ಹಮೀದ್ ಕೆ.ಕೆ, ಮಾಜಿ ಸದಸ್ಯ ಶೈಲೇಶ್ ಕುಮಾರ್ ಕುರ್ತೋಡಿ, ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಅಶ್ರಫ್ ನೆರಿಯ, ಉಪಾಧ್ಯಕ್ಷ ನಝೀರ್ ಶಕ್ತಿನಗರ, ತಾ.ಪಂ ಸದಸ್ಯೆ ಕೇಶವತಿ, ಯುವ ಕಾಂಗ್ರೆಸ್ ಅಧ್ಯಕ್ಷ ಅಭಿನಂದನ್ ಹರೀಶ್ ಕುಮಾರ್, ಉಪಾಧ್ಯಕ್ಷ ಸಲೀಮ್ ಗುರುವಾಯನಕೆರೆ, ಗುರುವಾಯನಕೆರೆ ಸಹಕಾರಿ ಸಂಘದ ನಿರ್ದೇಶಕ ಮೆಹಬೂಬ್, ಎಪಿಎಂಸಿ ಸದಸ್ಯ ಅಬ್ದುಲ್ ಗಫೂರ್, ಪ್ರಮುಖರಾದ ಜೆಸಿಂತಾ ಮೋನಿಸ್, ಖಾಲಿದ್ ಕಕ್ಕ್ಯೇನ, ಅಬ್ದುಲ್ ರಹಿಮಾನ್ ಪಡ್ಪು, ಶ್ರೀನಿವಾಸ ಉಜಿರೆ, ಮುಹಮ್ಮದ್ ರಫಿ, ಮೊದಲಾದವರು ಉಪಸ್ಥಿತರಿದ್ದರು. ಶಾಸಕ ಬಂಗೇರರ ಮನೆಗೆ ತೆರಳಿದ ಎಲ್ಲಾ ವಿಜೇತರನ್ನು ವಸಂತ ಬಂಗೇರ ಮತ್ತು ಸುಜೀತಾ ವಿ ಬಂಗೇರ ಅಭಿನಂದಿಸಿದರು. ಪರಾಭವಗೊಂಡ ಅಭ್ಯರ್ಥಿಗಳನ್ನೂ ಹೂ ನೀಡಿ ಗೌರವಿಸಲಾಯಿತು.