
ಬೆಳಾಲು: ಯುವವಾಹಿನಿ ಬೆಳಾಲು ಸಂಚಾಲನಾ ಸಮಿತಿಯ ಸಭೆಯು ಇತ್ತೀಚೆಗೆ ಅನಂತೋಡಿ ಸಮಾಜ ಮಂದಿರದಲ್ಲಿ ಜರುಗಿತು. ಅಧ್ಯಕ್ಷರಾಗಿ ಶಶಿಧರ ಒಡಿಪ್ರೊಟ್ಟು, ಕಾರ್ಯದರ್ಶಿಯಾಗಿ ಹರೀಶ್ ಪೊಸೊಟ್ಟು ಆಯ್ಕೆಯಾದರು.
ಇತರ ಪದಾಧಿಕಾರಿಗಳಾಗಿ ಉಪಾಧ್ಯಕ್ಷರಾಗಿ ಸುಕೇಶ್ ಎರ್ಮಳ, ಜೊತೆ ಕಾರ್ಯದರ್ಶಿಗಳಾಗಿ ದೀಪಕ್ ಈರೆಂತಾರ್, ಕೃಷ್ಣ ಬನಂದೂರು, ನಿರ್ದೇಶಕರುಗಳಾಗಿ ಗಣೇಶ್ ಕುಕ್ಕೊಟ್ಟು, ಸಂತೋಷ್ ಅರ್ತಿದಡಿ, ಕೇಶವ ಪೂಂಜಕೆರೆ, ಪ್ರಶಾಂತ್ ಹಿಪ್ಪ, ಹರೀಶ್ ಪೂಂಜಕೆರೆ, ವಿಶ್ವನಾಥ ಬಾಯ್ತರಡ್ಡ, ಕಿರಣ್ ಈರೆಂತ್ಯಾರು, ಪ್ರವೀಣ್ ಕಪ್ಪೆಲ್ಲ, ದಯಾನಂದ ದರ್ಖಾಸು, ಅಕ್ಷಯ್ ಮಂಜನೊಟ್ಟು, ದೀಪಕ್ ಈರೆತ್ಯಾರು ಆಯ್ಕೆಯಾದರು.
ಯುವವಾಹಿನಿ ಬೆಳ್ತಂಗಡಿ ಘಟಕದ ಉಪಾಧ್ಯಕ್ಷ ಉಮಾನಾಥ್ ಸ್ವಾಗತಿಸಿ, ಬೆಳಾಲು ಸಂಚಲನಾ ಸಮಿತಿಯ ಗೌರವ ಕಾರ್ಯದರ್ಶಿ ಗಂಗಾಧರ ಸಾಲಿಯಾನ್ ವಂದಿಸಿದರು.