ಶಿಶಿಲ: ಯಕ್ಷಗಾನ ನಾಟ್ಯ ತರಬೇತಿ ಶಿಬಿರದ ಉದ್ಘಾಟನೆ

ಶಿಶಿಲ: ಶ್ರೀ ದುರ್ಗಾಪರಮೇಶ್ವರಿ ಯುವಕ ಮಂಡಲ, ವೈಕುಂಠಪುರ ಶಿಶಿಲ ಇದರ ಆಶ್ರಯದಲ್ಲಿ ಮಲೆಕುಡಿಯ ಯುವಕ ಯುವತಿಯರಿಗೆ ಯಕ್ಷಗಾನ ನಾಟ್ಯ ತರಬೇತಿ ಶಿಬಿರದ ಉದ್ಘಾಟನಾ ಕಾರ್ಯಕ್ರಮ ಯುವಕ ಮಂಡಲ ವಠಾರದಲ್ಲಿ ಇತ್ತೀಚೆಗೆ ನಡೆಯಿತು.
ದ.ಕ.ಜಿಲ್ಲಾ ಮಲೆಕುಡಿಯರ ಸಂಘದ ಅಧ್ಯಕ್ಷ  ಶ್ರೀನಿವಾಸ ಉಜಿರೆ ಉದ್ಘಾಟಿಸಿದರು. ಯುವಕ ಮಂಡಲದ ಅಧ್ಯಕ್ಷ ಬಾಲಕೃಷ್ಣ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಶಿಶಿಲೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಾಜಾರಾಮ್,ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವ್ರದ್ದಿ ಯೋಜನೆಯ ಸಮುದಾಯ ಅಭಿವೃದ್ಧಿ ವಿಭಾಗದ ನಿರ್ದೇಶಕ  ಬಿ.ಜಯರಾಮ ನೆಲ್ಲಿತ್ತಾಯ, ಜಿಲ್ಲಾ ಮಲೆಕುಡಿಯರ ಸಂಘದ ಸಂಘಟನಾ ಕಾರ್ಯದರ್ಶಿ  ಜಯೇಂದ್ರ ಎಂ ನಿಡ್ಲೆ, ಶ್ರೀ ದುರ್ಗಾಪರಮೇಶ್ವರಿ ಕೃಪಾಪೋಷಿತ ಯಕ್ಷಗಾನ ಸಂಘ ಭಂಡಿಹೊಳೆ ಇದರ ಕಾರ್ಯದರ್ಶಿ  ಅಂಬರೀಷ್ ದಾಮ್ಲೆ, ಸ್ಥಳೀಯ ಕಲಾವಿದರಾದ  ತಿರುಮಲೇಶ್ವರ ಭಟ್,  ಗಂಗಾಧರ ದಾಮ್ಲೆ,   ಪದ್ಮಯ ಗೌಡ ಮುಚ್ಚಿರಡ್ಕ ಉಪಸ್ಥತರಿದ್ದರು.

 ತೆಂಕು, ಬಡಗು,ಮೂಡಲಪಾಯ ಹೀಗೆ ಬಹುತೇಕ ಯಕ್ಷಕಲೆಗಳ ನಾಟ್ಯಗಳ ಹಿರಿಯ ಗುರುಗಳಾದ  ಕರ್ಗಲ್ಲು ವಿಶ್ವೇಶ್ವರ ಭಟ್ ಇವರು ತರಬೇತಿ ನೀಡಲಿದ್ದು, ಯಕ್ಷಗಾನ ವೈಶಿಷ್ಟ್ಯಗಳನ್ನು ವಿವರಿಸಿದರು. ಕು| ಸೌಮ್ಯ ಪ್ರಾರ್ಥಿಸಿ, ಹರೀಶ್ ಕೊಳಂಬೆ ಸ್ವಾಗತಿಸಿ, ಸುಂದರ ಕೆ.ಶಿಶಿಲ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.