HomePage_Banner_
HomePage_Banner_

ಶ್ರೀ ಕ್ಷೇತ್ರ ಎರ್ನೋಡಿ: ಉಚಿತ ದಂತ ಚಿಕಿತ್ಸಾ ಶಿಬಿರ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಉಜಿರೆ: ಶ್ರೀ ಆದಿನಾಗಬ್ರಹ್ಮ ಮೊಗೇರ್ಕಳ ದೈವಸ್ಥಾನ ಶ್ರೀ ಕ್ಷೇತ್ರ ಎರ್ನೋಡಿ, ಬೆಳ್ತಂಗಡಿ ತಾಲೂಕು ಶ್ರೀ ಮೊಗೇರ ಸಮಾಜ ಸೇವಾ ಸಮಿತಿ ಎರ್ನೋಡಿ, ಸರಕಾರಿ ಪ್ರೌಢ ಶಾಲೆ ಹಳೆಪೇಟೆ ಹಾಗೂ ರೋಟರಿ ಕ್ಲಬ್ ಬೆಳ್ತಂಗಡಿ ಮತ್ತು ಕೆ.ವಿ.ಜಿ ದಂತ ಮಹಾವಿದ್ಯಾಲಯ ಸುಳ್ಯ ಇವರ ನೇತೃತ್ವದಲ್ಲಿ `ಉಚಿತ ದಂತ ಚಿಕಿತ್ಸಾ ಶಿಬಿರ’ ಅ.28 ರಂದು ಶ್ರೀ ಕ್ಷೇತ್ರ ಎರ್ನೋಡಿ ಸಭಾ ಭವನದಲ್ಲಿ ಜರುಗಿತು.
ಕಾರ್ಯಕ್ರಮವನ್ನು ಉಜಿರೆ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಯು. ವಿಜಯರಾಘವ ಪಡ್ವೆಟ್ನಾಯ ದೀಪ ಬೆಳಗಿಸಿ ಉದ್ಘಾಟಿಸಿ, ಇಂತಹ ವೈದ್ಯಕೀಯ ಶಿಬಿರ ನಡೆಸುವುದರಿಂದ ಜನರಿಗೆ ತುಂಬಾ ಪ್ರಯೋಜನವಾಗುತ್ತದೆ. ಇಂತಹ ಸೇವಾ ಮನೋಭಾವದ ಸಂಘಟನೆಗಳು ಇನ್ನಷ್ಟು ಬೆಳೆಯಬೇಕು ಎಂದು ಆಶಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ದಂತ ವೈದ್ಯ ಹಾಗೂ ಪ್ರೊಫೆಸರ್ ಕೆವಿಜಿ ದಂತ ಮಹಾವಿದ್ಯಾಲಯ ಸುಳ್ಯ ಡಾ| ದಯಾಕರ್ ವಹಿಸಿ, ನಾವು ಸೇವಿಸುವ ಆಹಾರ ಉತ್ತಮವಾಗಿದ್ದರೆ ಆರೋಗ್ಯ ಒಳ್ಳೆಯದಿರುತ್ತದೆ. ಇಂದು ಆಹಾರದಲ್ಲಿ ಕಲಬೆರಕೆ ಮಾಡುವ ಕೃತ್ಯ ನಡೆಯುತ್ತಿದ್ದು, ಇದು ಸಮಾಜಕ್ಕೆ ಅಪಾಯ ಇಂತವರಿಗೆ ಶಿಕ್ಷೆಯಾಗಬೇಕು. ಜನರಲ್ಲಿ ಜಾಗೃತಿ ಆಂದೋಲನವಾಗಬೇಕು ಎಂದರು.
ಮೊಗೇರ ಸಮಾಜ ಸೇವಾ ಸಮಿತಿಯ ಅಧ್ಯಕ್ಷ ಯು. ಬಾಬು ಮೊಗೇರ ಎರ್ನೋಡಿ ಸ್ವಾಗತಿಸಿ, ಕಾರ್ಯಕ್ರಮದ ಉದ್ದೇಶ ತಿಳಿಸಿದರು. ವೇದಿಕೆಯಲ್ಲಿ ಪ್ರೌಢ ಶಾಲಾ ಮುಖ್ಯೋಪಾಧ್ಯಾಯ ತಾರಾಕೇಸರಿ, ರೋಟರಿ ಅಧ್ಯಕ್ಷ ಜಗದೀಶ್ ಪ್ರಸಾದ್, ಸ್ನೇಹಾ ಎಕೌಂಟ್ಸ್ ಸರ್ವೀಸಸ್‌ನ ತೆರಿಗೆ ಸಲಹಾಗಾರ ಟಿ.ಜೆ ಮೊರಾಸ್, ಎಸ್‌ಎಸ್‌ಎಫ್ ಉಜಿರೆ ಸೆಕ್ಟರ್ ಅಧ್ಯಕ್ಷ ಆಶ್ರಫ್, ಸಿದ್ಧಿ ವಿನಾಯಕ ಭಜನಾ ಮಂಡಳಿ ರಾಘವೇಂದ್ರ ಗೌಡ, ಸರಸ್ವತಿ ಭಜನಾ ಮಂಡಳಿ ಅಧ್ಯಕ್ಷ ಜನಾರ್ದನ, ಮೊಗೇರ ಯುವಕ ಮಂಡಲ ಅಧ್ಯಕ್ಷ ಮೋಹನ್ ಕನ್ಯಾಡಿ, ಜಯಂತ ಶೆಟ್ಟಿ ಕುಂಟಿನಿ, ರಾಜೇಂದ್ರ ಕಾಮತ್, ಬಿ.ಕೆ ಗೋವಿಂದ, ಗೋಪಾಲ ಮಾಸ್ತರ್, ನೋಣಯ್ಯ ಪೂಂಜಾಲಕಟ್ಟೆ, ಸುಂದರ ಕಕ್ಕರಬೆಟ್ಟು, ವಿಶ್ವನಾಥ ಶೆಟ್ಟಿ, ಎಂ.ಬಿ ಕರಿಯ, ಆನಂದ ಕಕ್ಕಿಂಜೆ, ಭಾರತ್ ಎಂಟರ್‌ಪ್ರೈಸಸ್‌ನ ಮಾಲಕ ಪಾಂಡುರಂಗ ಬಾಳಿಗ ಉಪಸ್ಥಿತರಿದ್ದರು. ಕರಿಯ ಮುಂಡ್ರುಪಾಡಿ ಧನ್ಯವಾದವಿತ್ತರು

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.