HomePage_Banner_
HomePage_Banner_
HomePage_Banner_

ಮಲ್‌ಜಅ “ಮುಹಬ್ಬತೇ ಇಜಿತಿಮಾ” ಮೀಲಾದ್ ಕಾನ್ಫರೆನ್ಸ್ ಬಗ್ಗೆ ಪೂರ್ವಭಾವಿ ಸಭೆ

 

ಉಜಿರೆ: ಮಲ್‌ಜಅ ದಅವಾ ಮತ್ತು ರಿಲೀಫ್ ಸೆಂಟರ್ ಕಾಶಿಬೆಟ್ಟು ಉಜಿರೆ ಇದರ ದಶಮಾನೋತ್ಸವ ಪ್ರಯುಕ್ತ ಈ ಬಾರಿ ನ. 15 ರಂದು ಸಂಸ್ಥೆಯಲ್ಲಿ ನಡೆಯಲಿರುವ ಪ್ರವಾದಿ ಪೈಗಂಬರ್ ಜನ್ಮ ಮಾಸಾಚರಣೆಯ ಪ್ರಯುಕ್ತ ಹಮ್ಮಿಕೊಂಡಿರುವ ಮುಹಬ್ಬತೇ ಇಜಿತಿಮಾ ಕಾರ್ಯಕ್ರಮದಂಗವಾಗಿ ಅ. 29 ರಂದು ಪ್ರತಿನಿಧಿ ಸಮಾವೇಶ ನಡೆಯಿತು.
ಸಂಸ್ಥೆಯ ಶಿಲ್ಪಿ, ಚೇರ್‌ಮೆನ್ ಸಯ್ಯಿದ್ ಅಲವಿ ಜಲಾಲುದ್ದೀನ್ ತಂಙಳ್ ಅಧ್ಯಕ್ಷತೆ ವಹಿಸಿದ್ದು ಕಾರ್ಯಕ್ರಮದ ಸಂಪೂರ್ಣ ರೂಪುರೇಷೆ ತಿಳಿಸಿದರು. ವೇದಿಕೆಯಲ್ಲಿ ಎಸ್ಸೆಸ್ಸೆಫ್ ಡಿವಿಷನ್ ಅಧ್ಯಕ್ಷ ಕಾಸಿಂ ಮುಸ್ಲಿಯಾರ್ ಮಾಚಾರ್, ಸಂಯುಕ್ತ ಜಮಾಅತ್ ಪ್ರ. ಕಾರ್ಯದರ್ಶಿ ಹಾಜಿ ಅಬ್ದುಲ್ ರಝಾಕ್ ಸಖಾಫಿ ಮಡಂತ್ಯಾರು, ಎಸ್‌ಎಂಎ ಪುತ್ತೂರು ಜಿಲ್ಲಾಧ್ಯಕ್ಷ ಎಂ.ಕೆ ಬದ್ರುದ್ದೀನ್ ಪರಪ್ಪು, ಪ್ರ. ಕಾರ್ಯದರ್ಶಿ ಇಬ್ರಾಹಿಂ ಸಖಾಫಿ ಕಬಕ, ಅಶ್ರಫ್ ಸಖಾಫಿ, ಸಲಾಂ ಮದನಿ ಗುಂಡುಕಲ್ಲು ಬೆಳುವಾಯಿ, ಅಬೂಬಕ್ಕರ್ ಮುಗುಳಿ, ಅಬ್ಬೋನು ಮದ್ದಡ್ಕ ಉಪಸ್ಥಿತರಿದ್ದರು.
ಗುರುವಾಯನಕೆರೆ ಖತೀಬ್ ಹಾಮಿದ್ ಸಅದಿ ಉದ್ಘಾಟನೆ ನೆರವೇರಿಸಿದರು. ಸಂಸ್ಥೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಶರೀಫ್ ಬೆರ್ಕಳ ಪ್ರಸ್ತಾಪಿಸಿ ನಿರೂಪಿಸಿದರು. ಹಮೀದ್ ಮುಸ್ಲಿಯಾರ್, ಇಕ್ಬಾಲ್ ಮಾಚಾರ್ ಸಹಕರಿಸಿದರು.

—-
ಗುರುವಾಯನಕೆರೆ ಖತೀಬ್ ಹಾಮಿದ್ ಸಅದಿ ಉದ್ಘಾಟನೆ ನೆರವೇರಿಸಿದರು. ಸಂಸ್ಥೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಶರೀಫ್ ಬೆರ್ಕಳ ಪ್ರಸ್ತಾಪಿಸಿ ನಿರೂಪಿಸಿದರು. ಹಮೀದ್ ಮುಸ್ಲಿಯಾರ್, ಇಕ್ಬಾಲ್ ಮಾಚಾರ್ ಸಹಕರಿಸಿದರು.
ಮುಹಬ್ಬತೇ ಇಜಿತಿಮಾ ಪ್ರಯುಕ್ತ ನ 15 ರಂದು ಅಪರಾಹ್ನ3  ಗಂಟೆಗೆ ಉಜಿರೆ ನಗರದ ಮೂಲಕ ಹಾದು ಬರುವಂತೆ ಬೃಹತ್ ಮೀಲಾದ್ ಸಂದೇಶ ಜಾಥಾ, ಸಂಸ್ಥೆಯ ಆವರಣದಲ್ಲಿ ಹುಬ್ಬುರ್ರಸೂಲ್ ಪ್ರಭಾಷಣ, ಮಗರಿಬ್ ಬಳಿಕ ಬುರ್ದಾ ಮಜ್ಲಿಸ್, 8 ಗಂಟೆಗೆ ಮಾಸಿಕ ದಿಕ್ರ್ ಸ್ವಲಾತ್, ಮೌಲೀದ್ ಪಾಲಾಯಣ, ದುಆ ಸಂಗಮ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಲಿದೆ. ಕಾರ್ಯಕ್ರಮ ನಿರ್ವಹಣೆಯ ಪ್ರಯುಕ್ತ ಜವಾಬ್ಧಾರಿಗಳನ್ನು ಹಂಚಿಕೆ ಮಾಡುವರೇ ಸ್ವಾಗತ ಸಮಿತಿ, ಮತ್ತು ಉಪಸಮಿತಿಗಳನ್ನು ಈ ಸಂದರ್ಭ ಅಸ್ತಿತ್ವಕ್ಕೆ ತರಲಾಯಿತು.
ಸ್ವಾಗತ ಸಮಿತ ಚೇರ್‌ಮೆನ್ ಆಗಿ ಲೆತೀಫ್ ಹಾಜಿ ಗುರುವಾಯನಕೆರೆ, ಕನ್ವೀನರ್ ಆಗಿ ಅಶ್ರಫ್ ಆಲಿಕುಂಞಿ ಮುಂಡಾಜೆ, ಮೊದಲಾದವರನ್ನು ಆರಿಸಲಾಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.