ಮಂಜೊಟ್ಟಿ: ನೀರಿಗೆ ಬಿದ್ದು ಯುವಕ ಸಾವು

ನಡ: ನಡ ಗ್ರಾಮದ ಮಂಜೊಟ್ಟಿ ಎಂಬಲ್ಲಿ ಯುವಕನೊಬ್ಬ ನೀರಿಗೆ ಬಿದ್ದು ಮೃತಪಟ್ಟ ಘಟನೆ ಅ.28 ರಂದು ನಡೆದಿದೆ.
ಬಂಟ್ವಾಳ ತಾಲೂಕಿನ ಕುಕ್ಕಾಜೆ ಸೈಟ್ ಹೌಸ್ ನಿವಾಸಿ ಅಬ್ಬಾಸ್ ರವರ ಪುತ್ರ ಫೈಝಲ್ (18.ವ) ಮೃತಪಟ್ಟ ದುರ್ದೈವಿ. ಪೈಝಲ್‌ರವರು ತನ್ನ ಮೂವರು ಸಂಬಧಿಕರೊಂದಿಗೆ ಗಡಾಯಿಕಲ್ಲು ವೀಕ್ಷಣೆಗೆ ತೆರಳಿದ್ದರು. ಅಲ್ಲಿಂದ ಸಂಜೆ ವಾಪಾಸಾಗುತ್ತಿದ್ದ ಸಂದರ್ಭದಲ್ಲಿ ಮಂಜೊಟ್ಟಿಯ ಸಮೀಪ ಮುಖ ತೊಳೆಯುವುದಕ್ಕಾಗಿ ನದಿಯ ಬದಿಗೆ ಬಂದಿದ್ದು, ಕಾಲುಜಾರಿ ನೀರಿಗೆ ಬಿದ್ದರು. ಸಂಬಂಧಿಕರು ಹಾಗೂ ಸ್ಥಳೀಯರು ಅವರನ್ನು ರಕ್ಷಿಸಿ ತಕ್ಷಣ ಬೆಳ್ತಂಗಡಿ ಆಸ್ಪತ್ರೆಗೆ ಕರೆತಂದರೂ ಏನೂ ಪ್ರಯೋಜನವಾಗಲಿಲ್ಲ. ಅಬ್ಬಾಸ್‌ರವರ 9ಮಂದಿ ಮಕ್ಕಳಲ್ಲಿ ಫೈಝಲ್ 8ನೆಯವರಾಗಿದ್ದು, ಇವರು ಮಂಗಳೂರಿನಲ್ಲಿ ಕೂಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದರು. ಈ ಘಟನೆಗೆ  ಸಂಬಂಧಿಸಿದಂತೆ ಬೆಳ್ತಂಗಡಿ ಪೊಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.