ನ.ಪಂ ಚುನಾವಣೆ: ಶೇ.76.68 ಮತದಾನ

ಬೆಳ್ತಂಗಡಿ: ಪಟ್ಟಣ ಪಂಚಾಯತ್ ಚುನಾವಣೆಯು ಅ.28ರಂದು ಶಾಂತುಯುತವಾಗಿ ನಡೆದಿದ್ದು, ಶೇ.76.68 ಮತದಾನವಾಗಿದೆ. ಬೆಳ್ತಂಗಡಿ ಪಟ್ಟಣ ಪಂಚಾಯತ್ 11 ಗೂ 248 ಮಹಿಳಾಮತದಾರರು ಸೇರಿದಂತೆ ಒಟ್ಟು 4639 ಮಂದಿ ಮತದಾರರು ಮತದಾನದ ಹಕ್ಕು ಚಲಾಯಿಸಿದ್ದಾರೆ. ಮತ ಎಣಿಕೆ ಅ.31 ರಂದು ಪಟ್ಣ ಪಂಚಾಯತ್ ಕಛೇರಿಯಲ್ಲಿ ನಡೆಯಲಿದೆ.
ವಾರ್ಡ್‌ಗಳಲ್ಲಿ ಚಲಾವಣೆಯಾದ ಶೇಕಡಾವಾರು ಮತದಾನ:
1ನೇ ವಾರ್ಡ್( ಹಿಂದುಳಿದ ವರ್ಗ ಎ.ಮಹಿಳೆ)-ಶೇ.74.36, 2ನೇ ವಾರ್ಡ್(ಪ.ಜಾತಿ) ಶೇ.72.19, 3ನೇ ವಾರ್ಡ್ (ಸಾಮಾನ್ಯ): ಶೇ.79.41, 4ನೇ ವಾರ್ಡ್ (ಸಾಮಾನ್ಯ ಮಹಿಳೆ) ಶೇ. 72.76, 5ನೇ ವಾರ್ಡ್ (ಸಾಮಾನ್ಯ) ಶೇ.73.87, 6ನೇ ವಾರ್ಡ್ (ಸಾಮಾನ್ಯ ಮಹಿಳೆ) ಶೇ.74.41, 7ನೇ ವಾರ್ಡ್  (ಪ.ಪಂಗಡ), ಶೆ.69.90 8ನೇ ವಾರ್ಡ್ (ಹಿಂದುಳಿದ ವರ್ಗ ಎ) ಶೇ83.33, 9ನೇ ವಾರ್ಡ್ (ಸಾಮಾನ್ಯ ಮಹಿಳೆ) ಶೇ.80.85 10ನೇ ವಾರ್ಡ್ (ಪರಿಶಿಷ್ಟ ಜಾತಿ ಮಹಿಳೆ) ಶೆ.82.11, 11ನೇ ವಾರ್ಡ್ (ಸಾಮಾನ್ಯ) ಶೇ.78.58.

ಶಾಸಕ ಹರೀಶ್ ಪೂಂಜ, ಮಾಜಿ ಶಾಸಕ ಕೆ ವಸಂತ ಬಂಗೇರ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಂ.ಎಲ್.ಸಿ ಹರೀಶ್ ಕುಮಾರ್. ತಾ.ಪಂ ಅಧ್ಯಕ್ಷೆ ದಿವ್ಯಜ್ಯೋತಿ, ಬಿಜೆಪಿ ವಿಭಾಗ ಸಂ ಕಾರ್ಯದರ್ಶಿ ಪ್ರಸಾದ್ ಕುಮಾರ್, ವಿಭಾಗ ಸಹ ಪ್ರಭಾರಿ ಪ್ರತಾಪ್‌ಸಿಂಹ ನಾಯಕ್, ಮಾಜಿ ಶಾಸಕ ವಸಂತ ಬಂಗೇರ, ಜಿ.ಪಂ ಸದಸ್ಯರು, ತಾ.ಪಂ ಸದಸ್ಯರುಗಳು, ಪಕ್ಷದ ಮುಖಂಡರು ಬೂತುಗಳಿಗೆ ಭೇಟಿ ನೀಡಿ, ತಮ್ಮ ಪಕ್ಷದ ಕಾರ್ಯಕರ್ತರನ್ನು ಹುರಿದುಂಬಿಸುವ ಕೆಲಸ ಮಾಡಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.