HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

ಇಂದು ಸಂಜೆ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಧರ್ಮಸ್ಥಳ ಭೇಟಿ

ಉಜಿರೆ: ಕೇಂದ್ರ ಸರ್ಕಾರದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಇಂದು(ಅ.29) ಸಂಜೆ ಧರ್ಮಸ್ಥಳಕ್ಕೆ ಆಗಮಿಸಲಿದ್ದಾರೆ.
ಇಂದು ಬೆಳಿಗ್ಗೆ ಗಂಟೆ 8.10 ಕ್ಕೆ ದೆಹಲಿಂದ ಹೊರಟು ವಿಮಾನ ಮೂಲಕ 11.00 ಗಂಟೆಗೆ ಬೆಂಗಳೂರು ತಲುಪುವರು. 12 ಗಂಟೆಗೆ ಬೆಂಗಳೂರಿನಿಂದ ಹೊರಟು ವಿಮಾನದಲ್ಲಿ 12.45 ಕ್ಕೆ ಮಂಗಳೂರು ತಲುಪುವರು. ಹೋಟೆಲ್ ಓಶಿಯನ್ ಪರ್ಲ್‌ನಲ್ಲಿ ತಂಗುವರು. ಅಪರಾಹ್ನ ಗಂಟೆ2.30 ಕ್ಕೆ ಮಂಗಳೂರಿನಿಂದ ಹೊರಟು ರಸ್ತೆ ಮೂಲಕ 2.45 ಕ್ಕೆ ಧರ್ಮಸ್ಥಳ ತಲುಪುವರು.
ಸಂಜೆ ಗಂಟೆ 4.00 ರಿಂದ 5.30 ರ ವರೆಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ “ಪ್ರಗತಿ ರಕ್ಷಾ ಕವಚ” ಚಾಲನೆ ಕಾರ್ಯಕ್ರಮದಲ್ಲಿ ಭಾಗವಹಿಸಿ 6.30 ಕ್ಕೆ ದೇವರ ದರ್ಶನದ ಬಳಿಕ 7.15ಕ್ಕೆ ಧರ್ಮಸ್ಥಳದಿಂದ ಹೊರಟು 8.30 ಕ್ಕೆ ಮಂಗಳೂರು ತಲುಪುವರು. ಮಂಗಳವಾರ ಬೆಳಿಗ್ಗೆ 7.25 ಕ್ಕೆ ವಿಮಾನ ಮೂಲಕ ಮಂಗಳೂರಿನಿಂದ ದೆಹಲಿಗೆ ಹೋಗುವರು ಎಂದು ಅಧಿಕೃತ ಮೂಲಗಳಿಂದ ತಿಳಿದುಬಂದಿದೆ.

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.