ಕುಂಡಡ್ಕ ನಾಗರಿಕರಿಂದ ಸ್ವಚ್ಛತಾ ಅಭಿಯಾನ
ಕುಂಡಡ್ಕ: ಬಾರ್ಯ ಗ್ರಾಮದ ಕುಂಡಡ್ಕ ಎಂಬಲ್ಲಿ  ಊರ ನಾಗರಿಕರಿಂದ ಸ್ವಚ್ಚತಾ ಅಭಿಯಾನ ನಡೆಯಿತು.
ಸ್ಥಳೀಯ ಗ್ರಾಮ ಪಂಚಾಯತ್‌ನಲ್ಲಿ ಗ್ರಾಮದ ಸ್ವಚ್ಛತೆಯ ಬಗ್ಗೆ ಮಾತುಕತೆ ನಡೆಸಿ, ಇದರ ನಿರ್ಣಯದ ಪ್ರಕಾರ ಈ ಅಭಿಯಾನ ಕೈಗೊಳ್ಳಲಾಯಿತು.
ಸರಕಾರಿ ಪ್ರಾಥಮಿಕ ಶಾಲೆ ಕೇರ್ಯದಿಂದ ಕುಂಡಡ್ಕ ಶಂಸುಲ್ ಹುದಾ ಜುಮ್ಮಾ ಮಸ್ಜಿದ್‌ನ ದಾರಿಯಲ್ಲಿ ಬರುವ ರಸ್ತೆಯ ಬದಿಯಲ್ಲಿದ್ದ ಹುಲ್ಲು, ಕಸ ಕಡ್ಡಿ, ತ್ಯಾಜ್ಯಗಳನ್ನು ಶ್ರಮಾದಾನದ ಮೂಲಕ ಸರಿಪಡಿಸಲಾಯಿತು. ಸಮೂಹದ ಈ ಕಾರ್ಯವನ್ನು ನಾಗರಿಕರು ಕೊಂಡಾಡಿದರು. ರಾಜಕೀಯ ಮುಂಖಡ ಎಂ. ಕೆ ಅಬ್ದುಸ್ಸಮದ್ ಹಾಗೂ ನಾಗರಿಕ ಸಮಿತಿ ಅಧ್ಯಕ್ಷ ಹಾರಿಸ್ ಹನೀಫಿ, ಎಂ. ಕೆ ರಶೀದ್, ಹನೀಫ್ ಇತರರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.