ಗುರುವಾಯನಕೆರೆಯಲ್ಲಿ ಯಕ್ಷಗಾನ ಹಿಮ್ಮೇಳ ತರಬೇತಿ ಶಿಬಿರದ ಉದ್ಘಾಟನೆ

 ಗುರುವಾಯನಕೆರೆ: ಗುರುವಾಯನಕೆರೆಯ ರತ್ನಗಿರಿ ಸಂಸ್ಕೃತಿಯಲ್ಲಿ ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಪ್ರಾಯೋಜನೆಯಲ್ಲಿ ಯಕ್ಷಭಾರತಿ ಕನ್ಯಾಡಿ ಯ ವತಿಯಿಂದ ನಡೆಯುವ ಯಕ್ಷಗಾನ ಹಿಮ್ಮೇಳ ತರಬೇತಿ ಶಿಬಿರವನ್ನು ಸೇವಾ ಭಾರತಿ ಕನ್ಯಾಡಿ ಬೆಳ್ತಂಗಡಿಯ ಕಾರ್ಯದರ್ಶಿ ವಿನಾಯಕ ರಾವ್ ಕನ್ಯಾಡಿ ಉದ್ಘಾಟಿಸಿದರು.

ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿಯ ಸದಸ್ಯರಾದ ಜಬ್ಬಾರ್ ಸಮೋ ಸಂಪಾಜೆ ಮುಖ್ಯ ಅತಿಥಿಯಾಗಿ ಮಾರ್ಗದರ್ಶನ ನೀಡಿದರು. ಯಕ್ಷಗಾನ ಹಿಮ್ಮೇಳ ಗುರುಗಳಾದ ಚಂದ್ರಶೇಖರ್ ಆಚಾರ್ಯ ಗುರುವಾಯನಕೆರೆ ಹಾಗೂ ಸಹಾಯಕ ಗುರುಗಳಾದ ಮಹೇಶ ಕನ್ಯಾಡಿ ಉಪಸ್ಥಿತರಿದ್ದರು. ಕಾರ್ಯದರ್ಶಿ  ದಿವಾಕರ ಆಚಾರ್ಯ ಗೇರುಕಟ್ಟೆ ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.