ಅಣ್ಣು ನಲಿಕೆ ಮತ್ತು ಪ್ರಶಾಂತ್ ದಿಡುಪೆಗೆ ಒಲಿದ ಪಂಚಶ್ರೀ ಪ್ರಶಸ್ತಿ -2018

ಮಿತ್ತಬಾಗಿಲು: ಪಂಚಶ್ರೀ ಭಜನಾ ಮಂಡಳಿ ಗಣೇಶ ನಗರ ಮಿತ್ತಬಾಗಿಲು ಇವರು ಕೊಡಮಾಡುವ ಪಂಚಶ್ರೀ ಸಾಧನ ಪ್ರಶಸ್ತಿ 2018 ಕ್ಕೆ ಭೂತಕಟ್ಟುವ ಕಲೆಯ ಕಾಯಕದಲ್ಲಿ ತೊಡಗಿಸಿಕೊಂಡ ಹಿರಿಯರಾದ ಅಣ್ಣು ನಲಿಕೆ ಹಾಗೂ ಪಂಚಶ್ರೀ ಯುವ ಸಾಧಕ ಪ್ರಶಸ್ತಿ 2018 ಕ್ಕೆ ಯುವ ಸಾಹಿತಿ, ವಾಗ್ಮಿ ಪ್ರಶಾಂತ್ ದಿಡುಪೆ ಇವರು ಆಯ್ಕೆಯಾಗಿದ್ದಾರೆ.

ಭೂತರಾಧನೆಯ ಪಾತ್ರಧಾರಿಯಾಗಿ ತಾಲೂಕಿನಾದ್ಯಂತ ತನ್ನದೆ ಆದ ಹೆಸರನ್ನು ಪಡೆದಿರುವ ಇವರು ಅತ್ಯಂತ ಅನುಭವಿ ಮತ್ತು ಸರಳಜೀವಿಯಾಗಿದ್ದು ಜನರ ನಡುವೆ ತನ್ನನ್ನು ಗುರಿತಿಸಿಕೊಂಡಿದ್ದಾರೆ. ಪಂಚಶ್ರೀ ಯುವ ಸಾಧಕ ಪ್ರಶಸ್ತಿ2018 ಕ್ಕೆ ಆಯ್ಕೆಯಾಗಿರುವ ಯುವ ಸಾಹಿತಿ, ವಾಗ್ಮಿ ಪ್ರಶಾಂತ್ ದಿಡುಪೆ ಇವರು ಕನ್ನಡ ವಿಶ್ವವಿದ್ಯಾಲಯ ಹಂಪಿ, ಬಳ್ಳಾರಿ ಇಲ್ಲಿನ ದ್ರಾವಿಡ ಸಂಸ್ಕೃತಿ ಅಧ್ಯಯನ ವಿಭಾಗದಲ್ಲಿ ಸಂಶೋಧಕರಾಗಿದ್ದು, ಈಗಾಗಲೆ ಅನೇಕ ಬಹುಮಾನ ಮತ್ತು ಪ್ರಶಸ್ತಿಗಳನ್ನು ಪಡೆದಿದ್ದಾರೆ.

ಅಲ್ಲದೆ ಮಂಡಳಿಯು ಒಟ್ಟು ಮೂರು ಪ್ರಶಸ್ತಿಗಳನ್ನು ಸ್ಥಾಪಿಸಿದ್ದು ಪಂಚಶ್ರೀ ಬಾಲಸಾಹಿತಿ ಪ್ರಶಸ್ತಿಯನ್ನು ಈಗಾಗಲೆ ನಡೆಸಿರುವ ತಾಲೂಕು ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ನೀಡಲಾಗುತ್ತದೆ. ಈ ಪ್ರಶಸ್ತಿಗಳನ್ನು ನ.6 ರಂದು ನಡೆಯಲಿರುವ ಭಜನಾ ಮಂಡಳಿಯ  ವಾರ್ಷಿಕೋತ್ಸವ ಸಮಾರಂಭದಲ್ಲಿ ವಿತರಿಸಲಾಗುವುದು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.