ಹೊಸಂಗಡಿ: ದಂಪತಿಗೆ ಅರೆವಳಿಕೆ ದ್ರಾವಣ ಸಿಂಪಡಿಸಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವು

Advt_NewsUnder_1
Advt_NewsUnder_1
Advt_NewsUnder_1

ಹೊಸಂಗಡಿ: ದಂಪತಿಗೆ ಅರೆವಳಿಕೆ ದ್ರಾವಣ ಸಿಂಪಡಿಸಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣಗಳನ್ನು ದರೋಡೆಗೈದ ಪ್ರಕರಣ ಹೊಸಂಗಡಿ ಗ್ರಾಮದಲ್ಲಿ ಅ.24 ರ ರಾತ್ರಿ ಸಂಭವಿಸಿದೆ.
ಹೊಸಂಗಡಿ ಗ್ರಾಮದ ಮಸ್ಕಲ ಮನೆ ಲೀಲಾ ಕಾಟೇಜ್ ಕರುಣಾಕರ ಕೋಟ್ಯಾನ್ ಹಾಗೂ ಶ್ರೀಮತಿ ಲೀಲಾ ದಂಪತಿ ಅ.24 ರಂದು ರಾತ್ರಿ ಊಟ ಮಾಡಿ 11 ಗಂಟೆಗೆ ಮಲಗಿದ್ದರು. ಬೆಳಿಗ್ಗೆ 6.00ಗಂಟೆಯ ಸುಮಾರಿಗೆ ಕರುಣಾಕರವರ ಪತ್ನಿ ಲೀಲಾರವರು ಎದ್ದು ಗಮನಿಸಿದಾಗ ಮನೆಯ ಹಿಂಬದಿಯ ಬಾಗಿಲು ತೆರವುಗೊಂಡಿರುವುದು ಗೋಚರವಾಗಿದೆ. ಮನೆಯ ಹಿಂಬದಿಯ ಬಾಗಿಲಿನ ಚಿಲಕ ಮುರಿದು ಒಳನುಗ್ಗಿದ ಕಳ್ಳರು ಮಲಗಿದ್ದ ಮನೆಮಂದಿ ಮುಖಕ್ಕೆ ಅದ್ಯಾವುದೋ ಅರಿವಳಿಕೆಯ ದ್ರಾವಣ ಸಿಂಪಡಿಸಿ ಗಾಢ ನಿದ್ರೆಗೆ ಜಾರುವಂತೆ ಮಾಡಿದ್ದಾರೆ. ಈಗಾಗಿ ಮಲಗಿದ್ದ ಕೋಣೆಯಲ್ಲಿಯೇ ಇದ್ದ ಕಬ್ಬಿಣದ ಗಾಡ್ರೇಜ್‌ನ ಲಾಕರ್ ಒಡೆಯುವಾಗಲೂ ದಂಪತಿಗೆ ಗೊತ್ತೇ ಆಗಲಿಲ್ಲ. ಗಾದ್ರೇಜ್‌ನ ಬಾಗಿಲು ಮುರಿದು ಸುಮಾರು 40 ಗ್ರಾಂ ತೂಕದ ಚಿನ್ನದ ಸರ, 40 ಗ್ರಾಂ ತೂಕದ ಚಿನ್ನದ ನೆಕ್ಲೆಸ್, 20 ಗ್ರಾಂ ತೂಕದ ಚಿನ್ನದ ಬಳೆ,24 ಗ್ರಾಂ ತೂಕದ ಮುತ್ತಿನ ಚಿನ್ನದ ಸರ, 4 ಗ್ರಾಂ ತೂಕದ ಚಿನ್ನದ ಉಂಗುರ, 8 ಗ್ರಾಂ ತೂಕದ ಒಂದು ಜೊತೆ ಚಿನ್ನದ ಬೆಂಡೋಲೆ ಸೇರಿದಂತೆ ರೂ. 2 ಸಾವಿರ ನಗದನ್ನು ದೋಚಿ ಪರಾರಿಯಾಗಿದ್ದಾರೆ. ನಗದು ಸೇರಿದಂತೆ ದರೋಡೆಗೈಯ್ಯಲಾದ ಒಟ್ಟು ಮೌಲ್ಯ ಅಂದಾಜು ರೂ. 2.74 ಸಾವಿರ ಅಂದಾಜಿಸಲಾಗಿದ್ದು, ವೇಣೂರು ಠಾಣಾ ಪೊಲೀಸರು ಸ್ಥಳಕ್ಕೆ ಆಗಮಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.