ಸಹಕಾರ ನಿರ್ವಹಣೆ ಉನ್ನತ ಡಿಪ್ಲೊಮ: ಬೆಳ್ತಂಗಡಿಯ ಇಬ್ಬರಿಗೆ ರ್‍ಯಾಂಕ್

ಬೆಳ್ತಂಗಡಿ: ಪ್ರಾದೇಶಿಕ ಸಹಕಾರ ನಿರ್ವಹಣಾ ಸಂಸ್ಥೆ ಬೆಂಗಳೂರು ವತಿಯಿಂದ ಆತ್ಮಶಕ್ತಿ ವಿವಿದೋಧ್ಧೇಶ ಸಹಕಾರಿ ಸಂಘ ಬೆಂದೂರ್‌ವೆಲ್ ಮಂಗಳೂರು ಸಹಯೋಗದಲ್ಲಿ ಸಹಕಾರ ನಿರ್ವಹಣೆಯಲ್ಲಿ ಉನ್ನತ ಡಿಪ್ಲೋಮ( ಹೆಚ್‌ಡಿಸಿಎಮ್) ದೂರ ಶಿಕ್ಷಣದ ಪರೀಕ್ಷೆಯಲ್ಲಿ ಪದ್ಮುಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಿಬಂದಿ ಅಂಕಿತಾ.ಬಿ ದ್ವಿತೀಯ ಸ್ಥಾನ ಮತ್ತು ಬಂಗಾಡಿ ಸಹಕಾರಿ ವ್ಯವಸಾಯಿಕ ಸಂಘದ ಸಿಬಂದಿ ರಮಾನಂದ.ಕೆ ತೃತೀಯ ಸ್ಥಾನ ಗಳಿಸಿದ್ದಾರೆ.
ಸಂಸ್ಥೆಯು ಸಹಕಾರಿ ಸಂಘದ ಸಿಬಂದಿಗಳ ಪದೋನ್ನತಿಗೆ ಅಗತ್ಯವಿರುವ ಎಚ್‌ಡಿಸಿಎಂ ಕೋರ್ಸನ್ನು ದೂರ ಶಿಕ್ಷಣದ ಮೂಲಕ ನೀಡುತ್ತಿದೆ. ದಕ್ಷಿಣ ಕನ್ನಡ ಮತ್ತು ಉಡುಪಿಯ 72 ಮಂದಿ 12ನೇ ಅಧಿವೇಶನದಲ್ಲಿ ಪರೀಕ್ಷೆ ಬರೆದಿದ್ದು, 53 ಮಂದಿ ಉನ್ನತ ಶ್ರೇಣಿ ಮತ್ತು 19 ಮಂದಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ.
ಮಂಗಳೂರಿನ ಆತ್ಮಶಕ್ತಿ ವಿವಿದೋಧ್ಧೇಶ ಸಹಕಾರಿ ಸಂಘದ ಸಹಯೋಗದೊಂದಿಗೆ ಆರ್‌ಐಸಿಎಂ ಇವರಿಂದ ಕರಾವಳಿ ಭಾಗದ ವಿದ್ಯಾರ್ಥಿಗಳಿಗೆ ಮುಂದಿನ ಅಧಿವೇಶನದ ಸಹಕಾರ ನಿರ್ವಹಣೆಯಲ್ಲಿ ಉನ್ನತ ಡಿಪ್ಲೋಮ ದೂರ ಶಿಕ್ಷಣ ನೋಂದಣಿ ನಡೆಯುತ್ತಿದ್ದು, ಮುಂದಿನ ತಿಂಗಳಿನಿಂದ ತರಗತಿ ನಡೆಯಲಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.