HomePage_Banner_
HomePage_Banner_
HomePage_Banner_

ಸತೀಶ್ ಗೌಡ ಎಂಬವರ ಫೊಟೋ ಹಾಕಿ ಫೇಸ್‌ಬುಕ್‌ನಲ್ಲಿ ಅವಾಚ್ಯವಾಗಿ ಬೈಯುತ್ತಿದ್ದ ಪ್ರಸನ್ನ ಕುಮಾರ್ ಮುಖವಾಡ ಬಯಲು 

ಬೆಳ್ತಂಗಡಿ : ಸಾಮಾಜಿಕ ಜಾಲತಾಣವಾದ ಫೇಸ್‌ಬುಕ್‌ನಲ್ಲಿ ಪ್ರಸನ್ನ ಕುಮಾರ್ ಎಂಬ ಹೆಸರಿನಲ್ಲಿ ಕೆಟ್ಟ ಸಂದೇಶ ರವಾನಿಸುತ್ತಿರುವ ವ್ಯಕ್ತಿ ನಕಲಿ ಎಂಬುದು ಬಯಲಾಗಿದೆ. ಆತ ಯಾರು ಎಂದು ಸ್ಪಷ್ಟವಾಗಿ ತಿಳಿದು ಬಂದಿರುವುದಿಲ್ಲ.
ಪ್ರಸನ್ನ ಕುಮಾರ್ ಎಂದು ಹೆಸರು ಬಳಕೆ ಮಾಡಿಕೊಂಡು ಪುತ್ತೂರ್‍ದ ಮುತ್ತು ಮುತ್ತು ಮುಂತಾದ ವಿವಿಧ ಫೇಸ್‌ಬುಕ್ ಗ್ರೂಪುಗಳಲ್ಲಿ ಅತ್ಯಂತ ಕೀಳು ಮಟ್ಟದ ಶಬ್ದಗಳಿಂದ ಕಮೆಂಟ್ ಹಾಕುತ್ತಿರುವ ವ್ಯಕ್ತಿ ತನ್ನ ಪೇಸ್‌ಬುಕ್ ಅಕೌಂಟ್‌ನಲ್ಲಿ ಮೈಸೂರಿನ ಜೆಡಿಎಸ್ ಮುಖಂಡ ಸತೀಶ್ ಗೌಡ ಎಂಬವರ ಭಾವಚಿತ್ರ ಬಳಸಿಕೊಂಡಿರುವುದು ಬೆಳಕಿಗೆ ಬಂದಿದೆ.
ಜೆಡಿಎಸ್‌ನ ಮುಂದಾಳು ಮೈಸೂರಿನ ಸತೀಶ್ ಗೌಡರವರ ಭಾವಚಿತ್ರವನ್ನು ತನ್ನ ಫೇಸ್‌ಬುಕ್‌ನಲ್ಲಿ ಹಾಕಿಕೊಂಡಿರುವ ಪ್ರಸನ್ನ ಕುಮಾರ್ ಎಂಬಾತ ಸುದ್ದಿ ಬಿಡುಗಡೆ ಸಂಸ್ಥೆಯೂ ಸೇರಿದಂತೆ ಹಲವರ ಬಗ್ಗೆ ತೀರಾ ಅಕ್ಷೇಪಣಾರ್ಹ ಬರಹ ಪ್ರಕಟಿಸುತ್ತಿದ್ದ. ಮಾನಹಾನಿಗೈಯುವಂತಹ, ತೇಜೋವಧೆ ಮಾಡುವಂತಹ, ಓದಲು ಅಸಹ್ಯವಾಗುವಂತಹ ಕಮೆಂಟ್‌ಗಳನ್ನು ಹಾಕುತ್ತಿದ್ದ. ಈ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಸುದ್ದಿ ಬಳಗದಿಂದ ದೂರು ನೀಡಲಾಗಿತ್ತು. ಮೊದಲಿಗೆ ಈ ಪ್ರಸನ್ನ ಕುಮಾರ್ ಯಾರು ಎಂಬುದು ಗೊತ್ತಾಗಿರಲಿಲ್ಲ. ಫೇಸ್‌ಬುಕ್‌ನಲ್ಲಿ ಆತ ಹಾಕಿಕೊಂಡಿರುವ ಭಾವಚಿತ್ರ ಆತನz ಎಂದು ನಂಬಲಾಗಿತ್ತು. ಟಿಪ್‌ಟಾಪ್ ಡ್ರೆಸ್ ಧರಿಸಿರುವ ಪ್ರಸನ್ನ ಕುಮಾರ್ ಯಾರು ಎಂದು ತಿಳಿದುಕೊಳ್ಳಲು ಪ್ರಯತ್ನ ಮಾಡಲಾಗಿತ್ತಾದರೂ ಪತ್ತೆ ಹಚ್ಚಲು ಸಾಧ್ಯವಾಗಿರಲಿಲ್ಲ.
ಈ ವ್ಯಕ್ತಿ ಯಾರೆಂದು ಗೊತ್ತಾಗುತ್ತಿಲ್ಲ ಎಂದು ವಿವಿಧ ಸಂಘಟನೆಗಳ ಪ್ರಮುಖರು, ಪೊಲೀಸ್ ಇಲಾಖೆಯವರು ಹೇಳಿದ್ದರು. ಆದರೆ, ಫೇಸ್‌ಬುಕ್‌ನಲ್ಲಿ ಪರ-ವಿರೋಧ ಚರ್ಚೆ ಆಗುತ್ತಿದ್ದಾಗ ಪ್ರಸನ್ನ ಕುಮಾರ್ ಎಂಬಾತ ಫೇಕ್ ಅಕೌಂಟ್ ಮೂಲಕ ಸಂದೇಶ ರವಾನಿಸುತ್ತಿದ್ದಾನೆ ಎಂಬುದು ಬಹಿರಂಗಗೊಂಡಿದೆ. ಮೈಸೂರಿನ ಸತೀಶ್ ಗೌಡರವರು ಸ್ವತಃ ಈ ಬಗ್ಗೆ ಸಂದೇಶ ಹಾಕಿ ಪ್ರಸನ್ನ ಕುಮಾರ್ ಹೆಸರಿನ ಫೇಸ್‌ಬುಕ್‌ನಲ್ಲಿ ನನ್ನ ಭಾವಚಿತ್ರ ಹಾಕಲಾಗಿದೆ ಎಂದು ಹೇಳಿದ್ದಾರೆ. ಈ ಮೂಲಕ ಪ್ರಸನ್ನ ಕುಮಾರ್ ಎಂಬ ಹೆಸರಿನ ಫೇಸ್‌ಬುಕ್ ಅಕೌಂಟ್‌ನಲ್ಲಿ ಬೇರೊಬ್ಬರ ಭಾವಚಿತ್ರವನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂಬುದು ಗೊತ್ತಾಗಿದೆ.
ಸತೀಶ್ ಗೌಡ ಮೈಸೂರುರವರು ಲೋ ಪ್ರಸನ್ನ ನೀನು ನಿನ್ನ ಫೋಟೋ ಜತೆ ಬಾ ನಿಮ್ ಅಪ್ಪನ ಮಗ ಆದ್ರೆ ಸುಮ್ಮನೆ ಯಾಕೆ ಬೇಕು ಚರ್ಚೆ ನೀ ಏನು ನಮ್ಮ ಅಪ್ಪಂಗೆ ಹುಟ್ಟಿದ್ದೀಯಾ ನನ್ನ ಫೋಟೋ ಬಳಸೋಕೆ ಎಂದು ಪ್ರಶ್ನಿಸಿದ್ದಾರೆ. ಮಾತ್ರವಲ್ಲದೆ ನನ್ನ ಹೆಸರಿನಲ್ಲಿ ಫೇಕು ಅಕೌಂಟ್ ಮಾಡಿಸಿ ಬಹಳ ನಾಟಕ ಆಡ್ತಾಲ್ರೆ ಅವ ಮತ್ತು ಅವನ ತಮ್ಮ ತಾಕತ್ತು ಇದ್ದರೆ ನೇರವಾಗಿ ಚರ್ಚೆ ಮಾಡಬೇಕು ಎಂದೂ ಸತೀಶ್ ಗೌಡರವರು ಫೇಸ್‌ಬುಕ್‌ನಲ್ಲಿ ಸಂದೇಶ ಹಾಕಿದ್ದಾರೆ. ತಾಕತ್ತು ಇಲ್ವ ನೇರ ಚರ್ಚೆ ಮಾಡೋಕೆ ಎಂದೂ ಸತೀಶ್ ಗೌಡ ಕೇಳಿದ್ದಾರೆ.
ಅದುವರೆಗೆ ಸತೀಶ್ ಗೌಡರವರ ಭಾವಚಿತ್ರ ಹಾಕಿಕೊಂಡು ತಾನು ಪ್ರಸನ್ನ ಕುಮಾರ್ ಎಂದು ಬಿಂಬಿಸಿಕೊಳ್ಳುತ್ತಿದ್ದ ವ್ಯಕ್ತಿ ಸತೀಶ್ ಗೌಡರವರ ಫೊಟೋವನ್ನು ತೆಗೆದು ದೇವರ ಭಾವಚಿತ್ರ ಹಾಕಿ ಕೆಟ್ಟ ಸಂದೇಶಗಳನ್ನು ಕಳುಹಿಸುವ ಚಾಳಿ ಮಂದುವರಿಸಿದ್ದಾನೆ.
ಪ್ರಸನ್ನ ಕುಮಾರ್ ಎಂಬ ಹೆಸರಿನಲ್ಲಿ ಸತೀಶ್ ಗೌಡರವರ ಫೊಟೋ ಹಾಕಿ ತೆರೆಯ ಮರೆಯಲ್ಲಿ ಕಾರ್ಯ ನಿರ್ವಹಿಸುವಾತನೊಂದಿಗೆ ಸುಳ್ಯ ಮತ್ತು ಪುತ್ತೂರಿನ ಆಯ್ದ ಕೆಲವರು ಫೇಸ್‌ಬುಕ್ ಗ್ರೂಪ್‌ನಲ್ಲಿ ಪರಸ್ಪರ ಸಂದೇಶ ವಿನಿಮಯ ಮಾಡಿಕೊಳ್ಳುತ್ತಿದ್ದು ಇವರಿಗೆ ಈತ ಯಾರೆಂದು ಗೊತ್ತಿರುವ ಸಾಧ್ಯತೆ ಇದೆ. ಬೈಗಳ, ಮಹಿಳೆಯರ ಬಗ್ಗೆ ಅವಾಚ್ಯ ಶಬ್ದಗಳ ಬಳಕೆ, ಧರ್ಮ ಮತ್ತು ಪಕ್ಷಗಳ ನಡುವೆ ಸಂಘರ್ಷ ಉಂಟು ಮಾಡುವುದೇ ಆತನ ಟ್ರೇಡ್ ಮಾರ್ಕ್ ಆಗಿರುವ ಮತ್ತು ಅದಕ್ಕಾಗಿಯೇ ಆತ ಮತ್ತು ಆತನ ಕೆಲವು ಸ್ನೇಹಿತರು ಆ ಫೇಸ್‌ಬುಕ್ ಖಾತೆ ಉಪಯೋಗಿ ಸುತ್ತಿರುವ ಹಿನ್ನೆಲೆಯಲ್ಲಿ ಆತನ ವಿರುದ್ಧ ದೂರು ನೀಡಲಾಗಿದೆ. ಪೊಲೀಸ್ ಇಲಾಖೆ ಕಾರ್ಯಾಚರಣೆಗಿಳಿದಿದೆ. ಪ್ರಸನ್ನ ಕುಮಾರ್ ಎಂಬ ಹೆಸರು ಮಾತ್ರವಲ್ಲದೆ ಸುಬೋಧ್ ಶೆಟ್ಟಿ, ಮಂಜುಳಾ ಪುತ್ತೂರು, ಸಂಯುಕ್ತ ಶೆಟ್ಟಿ ಮುಂತಾದ ಫೇಸ್‌ಬುಕ್ ಖಾತೆಗಳು ನಕಲಿಯಾಗಿದೆ ಎಂದು ಈ ಹಿಂದೆ ದೂರು ನೀಡಲಾಗಿತ್ತು. ಯಾರ್‍ಯಾರದ್ದೋ ಹೆಸರಿನಲ್ಲಿ ಯಾರ್‍ಯಾರದ್ದೋ ಫೋಟೋ ಹಾಕಿ ಫೇಸ್‌ಬುಕ್ ಫ್ರೆಂಡ್ ಆಗುವುದಲ್ಲದೆ ಪ್ರಮುಖರನ್ನೊಳಗೊಂಡಿರುವ ಫೇಸ್‌ಬುಕ್ ಪೇಜ್‌ಗಳಲ್ಲಿ ಸೇರಿಕೊಂಡು ಜನಸಾಮಾನ್ಯರ ತೇಜೋವಧೆ ಮಾಡುತ್ತಿರುವ ಇಂತವರ ಬಗ್ಗೆ ಜಾಗ್ರತೆ ವಹಿಸಬೇಕಾಗಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.