ರಿಕ್ಷಾ ಚಾಲಕ ಬಾಬು ಗೌಡರಿಂದ ಮತ್ತೊಂದು ಪ್ರಾಮಾಣಿಕತೆ ಮೆರೆದ ಘಟನೆ

ಬೆಳ್ತಂಗಡಿ: 55 ಸಾವಿರ ರೂ. ನಗದು ಸಹಿತ ಬಹುಮುಖ್ಯವಾದ ದಾಖಲೆಪತ್ರಗಳಿದ್ದ ಪರ್ಸ್ ಕಳೆದುಕೊಂಡಿದ್ದ ಕೆಎಸ್‌ಆರ್‌ಟಿಸಿ ನಿವೃತ ಬಿಎಚ್ ಮಹಮ್ಮದ್ ಧರ್ಮಸ್ಥಳ ಇವರಿಗೆ ಬಿದ್ದು ಸಿಕ್ಕಿದ ಪರ್ಸ್ ಮರಳಿಸಿ ಬೆಳ್ತಂಗಡಿಯ ರಿಕ್ಷಾ ಚಾಲಕ ಬಾಬು ಗೌಡ ಅವರು ಮತ್ತೊಮ್ಮೆ ಪ್ರಾಮಾಣಿತೆ ಮೆರೆದಿದ್ದಾರೆ.
ಬಾಬು ಗೌಡ ಅವರು ಕರ್ತವ್ಯದಲ್ಲಿರುವ ವೇಳೆ ಬಿದ್ದು ಸಿಕ್ಕಿದ ಮುಹಮ್ಮದ್ ಅವರ ಪರ್ಸ್‌ನಲ್ಲಿ 5500 ರೂ. ನಗದು, ಎಟಿಎಂ ಕಾರ್ಡ್, ಡ್ರೈವಿಂಗ್ ಲೈಸನ್ಸ್, ಆಧಾರ್ ಕಾರ್ಡ್, ಹೆಲ್ತ್ ಕಾರ್ಡ್, ಪಾನ್ ಕಾರ್ಡ್ ಮೊದಲಾದ ದಾಖಲೆಗಳು ಇದ್ದವು. ಪರ್ಸ್ ಮರಳಿಸುವ ಸಂದರ್ಭ ಸುರೇಶ್ ಹೊಳ್ಳ ಚಾಮುಂಡೇಶ್ವರಿ ಎಂಟರ್ ಪ್ರೈಸಸ್ ಹಾಗು ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ನಿವೃತ ಕಾರ್ಯನಿರ್ವಹಣಾಧಿಕಾರಿ ಜೀವಂಧರ್ ಜೈನ್ ಉಪಸ್ಥಿತರಿದ್ದರು

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.