ದೈಹಿಕ ಶಿಕ್ಷಣ ಶಿಕ್ಷಕ ಜೋಸೆಫ್ ಪಿ.ವಿ ಸ್ವಯಂ ನಿವೃತಿ

ಬೆಳ್ತಂಗಡಿ: ನೇಲ್ಯಡ್ಕ ಶಾಲೆಯಲ್ಲಿ ಕಳೆದ 6 ವರ್ಷಗಳಿಂದ ದೈಹಿಕ ಶಿಕ್ಷಣ ಶಿಕ್ಷಕರಾಗಿದ್ದ ಜೋಸೆಫ್ ಅವರು ಇತ್ತೀಚೆಗೆ ಸ್ವಯಂ ನಿವೃತಿ ಪಡೆದಿದ್ದಾರೆ.
1984ರಲ್ಲಿ ನೆರಿಯ ಸರಕಾರಿ ಶಾಲಾ ದೈಹಿಕ ಶಿಕ್ಷಣ ಶಿಕ್ಷಕರಾಗುವ ಮೂಲಕ ವೃತ್ತಿ ಕ್ಷೇತ್ರಕ್ಕೆ ಕಾಲಿರಿಸಿದ ಅವರು ಪುಂಜಾಲಕಟ್ಟೆ, ಮೂಡಬಿದ್ರೆ, ಕಾರ್ಕಳ, ಬೈಂದೂರು, ಅರಸಿನಮಕ್ಕಿ ಇಲ್ಲೆಲ್ಲಾ ಕರ್ತವ್ಯ ಸಲ್ಲಿಸಿದ್ದಾರೆ.
ಅತ್ಯುತ್ತಮ ಸಂಘಟಕ ಹಾಗೂ ಕಾರ್ಯಕ್ರಮ ಉದ್ಘೋಷಕರಾಗಿರುವ ಜೋಸೆಫ್ ಅವರು, ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಕಾರ್ಕಳ ಬೆಳ್ತಂಗಡಿ ತಾ. ಅಧ್ಯಕ್ಷರಾಗಿ ಹಿಂದೆ ಸೇವೆ ಸಲ್ಲಿಸಿದ್ದಾರೆ. ಜಿಲ್ಲಾಧ್ಯಕ್ಷರೂ ಆಗಿದ್ದ ಅವರು ರಾಜ್ಯ ಸಮಿತಿ ಗೌರವಾಧ್ಯಕ್ಷರೂ ಆಗಿದ್ದರು. ವಾಲಿಬಾಲ್ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ತೀರ್ಪುಗಾರರು, ಕಬಡ್ಡಿ, ಕೊಕ್ಕೋ, ತ್ರೋಬಾಲ್ ರಾಷ್ಟ್ರೀಯ ತೀರ್ಪುಗಾರರು, ಅಥ್ಲೆಟಿಕ್ಸ್ ರಾಷ್ಟ್ರೀಯ ತೀರ್ಪುಗಾರರಾಗಿ ಅನೇಕ ಕ್ರೀಡಾಕೂಟಗಳನ್ನು ಯಶಸ್ವಿಯಾಗಿ ನಿರ್ವಹಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ.
ಭಾರತ್ ಸೇವಾದಳದ ಜಿಲ್ಲಾ ಸಂಘಟಕರಾಗಿದ್ದಾಗ ಅತ್ಯುತ್ತಮ ಸಂಘಟಕ ಎಂಬ ರಾಜ್ಯಪ್ರಶಸ್ತಿ ಪಡೆದಿದ್ದಾರೆ. ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಹಾಗೂ ಪಂದ್ಯಾವಳಿಗಳ ಯಶಸ್ವಿ ನಿರ್ಣಾಯಕ ಕರ್ತವ್ಯಕ್ಕಾಗಿ ಅನೇಕ ಪ್ರಶಸ್ತಿಗಳನ್ನು ಅವರು ತಮ್ಮದಾಗಿಸಿಕೊಂಡವರಾಗಿದ್ದಾರೆ. ಅವರ ಪತ್ನಿ ಕಡಬದ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಕಿಯಾಗಿದ್ದಾರೆ. ಒರ್ವ ಪುತ್ರ ವಿದೇಶದಲ್ಲಿದ್ದರೆ, ಮತ್ತೊಬ್ಬರು ಶಿಕ್ಷಣ ಪಡೆಯುತ್ತಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.