ನನಗೆ ಯಾವ ಕಾರಣಕ್ಕೆ ಟಿಕೇಟು ನಿರಾಕರಿಸಲಾಗಿದೆ ಎಂದು ಪಕ್ಷದ ನಾಯಕರು ತಿಳಿಸಬೇಕು: ಜನಾರ್ದನ ಬಂಗೇರ

Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಬೆಳ್ತಂಗಡಿ ಪಟ್ಟಣ ಪಂಚಾಯತು ಚುನಾವಣೆಯಲ್ಲಿ ನನ್ನ ಸ್ವಕ್ಷೇತ್ರ 8ನೇ ವಾರ್ಡ್‌ನಲ್ಲಿ ಹಿಂದುಳಿದ ವರ್ಗ ಎ ಮೀಸಲಾತಿ ಇದ್ದರೂ ನನ್ನನ್ನು ಕಡೆಗಣಿಸಲಾಗಿದೆ. ಪಕ್ಷಕ್ಕಾಗಿ ಹಗಲಿರುಳು ದುಡಿದರೂ ಹಣವಂತರಿಗೆ, ಪ್ರಚಾರಕ್ಕಾಗಿ ದುಡಿಯುವವರಿಗೆ ಮಣೆಹಾಕುತ್ತಿರುವುದು ಬೇಸರ ತಂದಿದೆ. ಈ ಹಿನ್ನಲೆಯಲ್ಲಿ ನಾನು ಪಕ್ಷೇತರ ಆಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದೇನೆ ಎಂದು ನ.ಪಂ ಮಾಜಿ ನಾಮನಿದೇಶನ ಸದಸ್ಯ ಜನಾರ್ದನ ಬಂಗೇರ ಮೂಡಾಯಿಗುತ್ತು ಹೇಳಿದರು.
ಅವರು ಅ.19 ರಂದು ಬೆಳ್ತಂಗಡಿ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಮಾಜಿ ಶಾಸಕ ವಸಂತ ಬಂಗೇರ ನನ್ನ ರಾಜಕೀಯ ಗುರುಗಳಾಗಿದ್ದು, ಅವರೊಂದಿಗೆ ಗುರುತಿಸಿಕೊಂಡು ಅವರ ಬೆಂಬಲಿಗನಾಗಿ ಕೆಲಸ ಮಾಡುತ್ತಿದ್ದೇನೆ. ಅವರ ಸೋಲು-ಗೆಲುವುಗಳಲ್ಲಿ ಅವರ ಜೊತೆಗಿದ್ದು, ಹಿಂಬಾಲಿಸಿದ್ದೇನೆ. ಕಳೆದ ಹತ್ತು ವರ್ಷಗಳಿಂದ ಕಾಂಗ್ರೆಸ್‌ನಲ್ಲಿ ಸಕ್ರೀಯವಾಗಿ ಕೆಲಸ ಮಾಡುತ್ತಿದ್ದೇನೆ. ಪಟ್ಟಣ ಪಂಚಾಯತದ ನಾಮನಿರ್ದೇಶಿತ ಸದಸ್ಯನಾಗಿ ಹತ್ತು ಹಲವು ಅಭಿವೃದ್ಧಿಗಾಗಿ ಧ್ವನಿ ಎತ್ತಿದ್ದೇನೆ. ಹಲವಾರು ಸಂಘ-ಸಂಸ್ಥಗಳಲ್ಲಿ ಸಕ್ರೀಯವಾಗಿ ದುಡಿದು, ನಾಡು, ನುಡಿಗಾಗಿ ಹೋರಾಟ ನಡೆಸಿದ್ದೇನೆ ಎಂದು ತಿಳಿಸಿದರು.
ಕಳೆದ ಬಾರಿಯ ಚುನಾವಣೆಯಲ್ಲಿ 9ನೇ ವಾರ್ಡ್‌ನಲ್ಲಿ ಕೇಳಿದಾಗ ನನಗೆ ಅವಕಾಶ ನಿರಾಕರಿಸಲಾಗಿತ್ತು. ಆಗ ಪಕ್ಷದ ನಾಯಕರ ಮಾತಿಗೆ ಬೆಲೆಕೊಟ್ಟು ಮೌನವಾಗಿದ್ದೆ. ಈ ಬಾರಿ ನನ್ನ ಸ್ವಕ್ಷೇತ್ರದಲ್ಲಿ ಮೀಸಲಾತಿ ಪ್ರಕಾರ ಅವಕಾಶ ಇದ್ದುದರಿಂದ ಮಾಜಿ ಶಾಸಕರು ನಾಮಪತ್ರ ಹಾಕಲು ಹೇಳಿದ್ದರು. ಅದರಂತೆ ನಾಮಪತ್ರ ಹಾಕಿದ್ದೇನೆ. ಆದರೆ ಪಕ್ಷದಿಂದ ಬಿ ಫಾರಂ ನೀಡಿಲ್ಲ. ನನ್ನನ್ನು ಕರೆದು ಮಾತನಾಡಿಸಿಲ್ಲ. ನನಗೆ ಯಾವ ಕಾರಣಕ್ಕೆ ನನಗೆ ಟಿಕೇಟು ನಿರಾಕರಿಸಲಾಗಿದೆ ಎಂದು ಪಕ್ಷದ ನಾಯಕರು ಸ್ವಷ್ಟಪಡಿಸಬೇಕು ಎಂದು ಒತ್ತಾಯಿಸಿದರು.
ತಾನು ಕಾಂಗ್ರೆಸ್ ಬಿಡುವುದಿಲ್ಲ. ವಸಂತ ಬಂಗೇರರ ಬೆಂಬಲಿಗನಾಗಿಯೇ ಇರುತ್ತೇನೆ ಎಂದು ಸ್ವಷ್ಟಪಡಿಸಿದ ಅವರು ಯಾವುದೇ ಕಾರಣಕ್ಕೂ ಚುನಾವಣೆಯಿಂದ ಹಿಂದೆ ಸರಿಯುವುದಿಲ್ಲ. ಕಾಂಗ್ರೆಸ್‌ನಿಂದ ಉಚ್ಚಾಟಿಸಿದರೆ ನನಗೆ ಯಾವುದೇ ಸಮಸ್ಯೆಯಿಲ್ಲ ಎಂದು ತಿಳಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.