HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

ಶಿವರಾಮ ಶಿಶಿಲ ಮನೆಯಲ್ಲಿ ಅಮೃತ ಸಂಭ್ರಮ

ಶಿವರಾಮ ಶಿಶಿಲ ಅವರನ್ನು ಮಕ್ಕಳು, ಅಳಿಯಂದಿರು, ಮೊಮ್ಮಕ್ಕಳ ಪರವಾಗಿ ಸನ್ಮಾನಿಸಿ ಅಭಿನಂದಿಸಲಾಯಿತು

 ಶಿಶಿಲ: ಶಿವರಾಮ ಶಿಶಿಲ ಅವರ ಜೀವನ ಪರಿಪೂರ್ಣತೆಯ ಸಾಕ್ಷಿ. ಅವರ ಚಿತ್ರಕಲೆಯಲ್ಲಿ ಸಹಜ ಅಭಿವ್ಯಕ್ತಿ ಭಾವಬಿಂದುಗಳು ಫತಿಫಲಿಸುವುದನ್ನು ಕಾಣಲು ಸಾಧ್ಯವಾಗುತ್ತದೆ. ವಿದ್ಯೆಯ ಅಭಿವ್ಯಕ್ತಿತ್ವ ಆತನ ವಿನಯಶೀಲತೆಯಿಂದ ಗೊತ್ತಾಗುತ್ತದೆ ಎಂಬುದಕ್ಕೆ ಶಿವರಾಮ ಶಿಶಿಲರೂ ಒಂದು ಸಾಕ್ಷಿ. ಅವರದು ಇಡೀ ಸಮಾಜವನ್ನೇ ಮನೆಯಾಗಿಸಿಕೊಂಡಿರುವ ವಿಶಾಲತೆಯ ಬಹೂದಕ ವ್ಯಕ್ತಿತ್ವ ಎಂದು ಮುಂಬೈ ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದ ನಿವೃತ ಮುಖ್ಯಸ್ಥ ಡಾ. ತಾಳ್ತಜೆ ವಸಂತ ಕುಮಾರ ಹೇಳಿದರು.
ರಾಷ್ಟ್ರಪ್ರಶಸ್ತಿ ಪುರಸ್ಕೃತ ವಿಶ್ರಾಂತ ಶಿಕ್ಷಕ, ಕವಿ ಸಾಹಿತಿ, ಬರಹಗಾರ ಶಿವರಾಮ ಶಿಶಿಲ ಅವರ ಶಿಶಿಲದ ಬರ್ಗುಳ ಮನೆಯಲ್ಲಿ ಅ. 21 ರಂದು ನಡೆದ ಶಿವರಾಮ ಶಿಶಿಲ ಅಮೃತ ಸಂಭ್ರಮ ಕಾರ್ಯಕ್ರಮದಲ್ಲಿ ಅವರು ಅಭಿನಂದನಾ ಭಾಷಣ ಮಾಡುತ್ತಿದ್ದರು.
ಶಿವರಾಮ ಶಿಶಿಲರ ಬಗೆಗಿನ ಅವರ ಶಿಷ್ಯವೃಂದದವರ ಅಭಿಪ್ರಾಯಗಳಲ್ಲಿ ಸಹಜವಾದ ಕರುಣಾಪೂರ್ವಕ ದೃಷ್ಟಿಕೋನ ಇತ್ತು. ಇನ್ನೊಬ್ಬರಿಗೆ ಶಿಸ್ತು ಹೇಳಿಕೊಡಬೇಕಾದ ವ್ಯಕ್ತಿ ಅದನ್ನು ಮೊದಲು ಪಾಲಿಸಿರಬೇಕು. ಅಂತಹಾ ಅರ್ಹತೆ ಉಳ್ಳವರಲ್ಲಿ ಶಿಶಿಲರು ಒಬ್ಬರಾಗಿದ್ದಾರೆ ಎಂದು ತಾಳ್ತಜೆ ವಿಶ್ಲೇಶಿಸಿದರು.
ಶಿವರಾಮ ಶಿಶಿಲರ ಬಗ್ಗೆ ಸಾಕ್ಷ್ಯಚಿತ್ರ ಚಿತ್ರೀಕರಿಸಿದ ಶಕ್ತಿಪ್ರಸಾದ್ ಅಭ್ಯಂಕರ ಮತ್ತು ಶಿವರಾಮ ಶಿಶಿಲ 75 ರ ಸಂಭ್ರಮ ಸಮಿತಿಯಲ್ಲಿ ಉತ್ತಮ ಕೆಲಸ ನಿರ್ವಹಿಸಿದ ದನಕರ ಅವರನ್ನು ಗುರುತಿಸಲಾಯಿತು.
ಸಮಾರಂಭದಲ್ಲಿ ಶಿವರಾಮ ಶಿಶಿಲರ ಪುತ್ರ ಡಾ. ಪ್ರಕಾಶ್ಚಂದ್ರ ಶಿಶಿಲ ಸ್ವಾಗತಿಸಿದರು. ಶಿಕ್ಷಕ ಲ| ಅಜಿತ್ ಕುಮಾರ್ ಕೊಕ್ರಾಡಿ ಕಾರ್ಯಕ್ರಮ ನಿರೂಪಿಸಿದರು. ಶಿವರಾಮ ಶಿಶಿಲರ ಅಳಿಯ ಜಿತು ನಿಡ್ಲೆ ವಂದನಾರ್ಪಣೆಗೈದರು.
ರಂಗ್ ಮಾಂತ್ರಿಕ ಬಿರುದಾಂಕಿತ ಜೀವನ್ ರಾಮ್ ತಂಡದವರಿಂದ ಸಾಂಸ್ಕೃತಿಕ ಸಂಭ್ರಮ:
ಸಮಾರಂಭದಂಗವಾಗಿ ಆಳ್ವಾಸ್ ರಂಗ ಅಧ್ಯಯನ ಕೇಂದ್ರ ಮೂಡಬಿದಿರೆ ಇವರು ರಂತ ಮಾತ್ರಿಕ ಬಿರುದಾಂಕಿತ ಜೀವನ್‌ರಾಂ ಸುಳ್ಯ ನಿರ್ದೇಶಕನದಲ್ಲಿ ರಂಗ ಗೀತೆ, ಜನಪದ ಗೀತೆ, ಜಾದೂ, ಮಿಮಿಕ್ರಿ ಪ್ರಸ್ತುತಿಗೊಂಡಿತು. ಜೀವನ್‌ರಾಂ ರ ಪುತ್ರ ಬಾಲ ಕಲಾವಿದ ಮನುಜ ನೇಹಿಗಾ ಅಭಿನಯಿಸಿದ ೧೦ ವಿಭಿನ್ನ ಪ್ರತಿಭೆಗಳ ಅನಾವರಣ ಮನೋಜ್ಞವಾಗಿ ಮೂಡಿಬಂದರೆ, ಜೀವನ್‌ರಾಂ ನಿರ್ದೇಶನದಲ್ಲಿ ರಾಷ್ಟ್ರೀಯ ರಂಗ ಪ್ರಶಸ್ತಿ ಪಡೆದ 10 ನಿಮಿಷದ ಸಣ್ಣ ನಾಟಕ “ದೇವ ವೃದ್ಧರು” ಪ್ರದರ್ಶನಗೊಂಡು ನಿಜ ಜೀವನದ ಇನ್ನೊಂದು ಮುಖಃ ಅನಾವರಣಗೊಂಡಿತು.
ಸಮರಂಭದದ ಕೊನೆಗೆ ಕಲಾ ತಂಡವನ್ನು ಅಭಿನಂದಿಸಲಾಯಿತು. ಸಮಾರಂಭದಲ್ಲಿ ನಾಡಿನ ಪ್ರಸಿದ್ಧ ಕವಿಗಳು, ಸಾಹಿತಿಗಳು, ಪ್ರಾಂಶುಪಾಲರುಗಳು, ಉಪನ್ಯಾಸಕರು- ಶಿಕ್ಷಕರುಗಳು, ರಾಜ್ಯಮಟ್ಟದ ಉನ್ನತ ಅಧಿಕಾರಿಗಳು, ಶಿಷ್ಯರು ಭಾಗಿಯಾಗಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.