ಹಲ್ಲೆ ಆರೋಪ: ಹೆಡ್ ಕಾನ್‌ಸ್ಟೆಬಲ್ ಅಮಾನತು

ವೇಣೂರು: ಡಿವೈಎಫ್‌ಐ ಕಾರ್ಯಕರ್ತ ರಿಯಾಜ್ ಮಾಂತೂರು ಹಾಗೂ ಅವರ ಸಹೋದರನ ಮೇಲೆ ಹಲ್ಲೆ ನಡೆಸಿದ ಆರೋಪದಡಿ ವೇಣೂರು ಪೊಲೀಸ್ ಠಾಣೆಯ ಹೆಡ್ ಕಾನ್‌ಸ್ಟೆಬಲ್ ತಾರಾನಾಥ್ ರವರನ್ನು ಅಮಾನತು ಮಾಡಲಾಗಿದೆ ಎಂದು ದ.ಕ ಪೊಲೀಸ್ ಅಧೀಕ್ಷಕ ಡಾ| ಬಿ.ಆರ್ ರವಿಕಾಂತೇ ಗೌಡ ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ವೃತ್ತ ನಿರೀಕ್ಷಕರಿಗೆ ತನಿಖೆಗೆ ಆದೇಶ ನೀಡಿದ್ದು, ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.
ಧರ್ಮದ ಹೆಸರಿನಲ್ಲಿ ನಿಂದಿಸಿದ್ದಲ್ಲದೆ, ಲಾಕಪ್‌ನಲ್ಲಿ ಕೂಡಿ ಹಾಕಿ ಹಲ್ಲೆ ನಡೆಸಿದ್ದಾರೆಂದು ಆರೋಪಿಸಿ, ಡಿವೈಎಫ್‌ಐ ದ.ಕ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ರವರು ಎಸ್‌ಪಿ ಗೆ ದೂರು ನೀಡಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.