ಧಾರ್ಮಿಕ ಭಾವನೆಗಳನ್ನು ಗೌರವಿಸಬೇಕು

ಶ್ರವಣ್ ಗೌಡ  ಉಜಿರೆ

ಶಬರಿಮಲೆಗೆ ಸ್ತ್ರೀ ಪ್ರವೇಶದ ಬಗ್ಗೆ ಸುಪ್ರೀಂ ಕೋರ್ಟು ನೀಡಿರುವ ತೀರ್ಪು ಕೋಟ್ಯಾಂತರ ಅಯ್ಯಪ್ಪನ ಭಕ್ತಾದಿಗಳಿಗೆ ನಿರಾಶೆ ತಂದಿದೆ.  ಈ ಬಗ್ಗೆ ಕೇರಳ ಸೇರಿದಂತೆ ದಕ್ಷಿಣ ರಾಜ್ಯಗಳಲ್ಲಿ ವ್ಯಾಪಕ ಪ್ರತಿಭಟನೆ ನಡೆಯುತ್ತಿದೆ. ಈ ಮದ್ಯೆ ಅಸಮಾನತೆ, ಲಿಂಗ ತಾರತಮ್ಯ ಇತ್ಯಾದಿ ಹೇಳಿಕೆಗಳ ಮೂಲಕ ಅಯ್ಯಪ್ಪನ ಕ್ಷೇತ್ರದ ಬಗ್ಗೆ ವ್ಯವಸ್ಥಿತ ಅಪಪ್ರಚಾರ ಮಾಡಲಾಗಿದೆ. ಕಮ್ಯುನಿಸ್ಟ್ ಸರ್ಕಾರ ಕೂಡ ಈ ಬಗ್ಗೆ ಬೇರೆಯೇ ಧೋರಣೆ ಹೊಂದಿದೆ. ಆದರೆ, ವಿಶ್ವದಲ್ಲೆ ಎಲ್ಲಾ ಜಾತಿ ಮತ ಪಂಥಗಳ ಎಲ್ಲೆ ಮೀರಿ ಪ್ರವೇಶ ಕಲ್ಪಿಸಿದ ದೇಗುಲ ಶಬರಿಮಲೆ.  ವಿಶ್ವದಲ್ಲೆ ಭಕ್ತ ಹಾಗೂ ದೇವರನ್ನ ಒಂದೇ ಹೆಸರಿನಿಂದ ( ಸ್ವಾಮಿ)  ಕರೆಯಲ್ಪಡುವ ಏಕಮಾತ್ರ ಕ್ಷೇತ್ರ ಎಂದರೆ  ಶಬರಿಮಲೆ.
ಸನಾತನ  ಹಿಂದೂ ಧರ್ಮದ ಮೂಲ ಆಚಾರಗಳನ್ನ ಮೂಲ ಪದ್ದತಿಗಳನ್ನ ಇಂದೂ ಉಳಿಸಿಕೊಂಡು ಆಚರಿಸಲ್ಪಡುತಿರುವ ಕ್ಷೇತ್ರ ಶಬರಿಮಲೆ ತಂದೆ-ತಾಯಿಯ ನಂತರ ನಮ್ಮ ಸಂಸ್ಕೃತಿಯಲ್ಲಿ ಗುರುವಿಗೆ ಸ್ಥಾನ.  ಗುರುವನ್ನು ಮಾರ್ಗದರ್ಶಕ ಎನ್ನುತ್ತೇವೆ, ಇನ್ನೂ ಶಾಸ್ತ್ರಗಳಲ್ಲಿ ಗುರುವನ್ನು ಮೋಕ್ಷಕ್ಕೆ ದಾರಿ ತೋರುವವ, ಸನ್ಮಾರ್ಗದಲ್ಲಿ ನಡೆಸುವವ ಎಂದು ಕರೆಯಲಾಗಿದೆ. ಈ “ಗುರು” ಎಂಬ ಪದದ ಮಹತ್ವವನ್ನು ತನ್ನ ವ್ರತ ಅನುಷ್ಟಾನದಾದಿಯಾಗಿ ಅಂತ್ಯದವರೆಗೂ ಸಾರಿದ ಕ್ಷೇತ್ರಶಬರಿಮಲೆ.”ತತ್ವಮಸಿ”(ಆತ್ಮ ಪರಮಾತ್ಮ ಎರೆಡೂ ಒಂದೇ)ಎಂಬಾ ಸಿದ್ದಾಂತವನ್ನ ಕ್ಷೇತ್ರದ ಘೋಷವಾಕ್ಯವನ್ನಾಗಿ ಸಾರಿದ ನೆಲೆ ಶಬರಿಮಲೆ. ಕೋಟ್ಯಾನುಭಕ್ತರ ಧಾರ್ಮಿಕ ವಿಷಯವನ್ನ ಯಾವುದೋ 4 ಜನ ನ್ಯಾಯಾಧೀಶರು ಕೂತು 800ವರ್ಷಗಳ ಸಂಪ್ರದಾಯಕ್ಕೆ ತಿಲಾಂಜಲಿ ಇಟ್ಟಿದ್ದು, ಒಪ್ಪಿಕೊಳ್ಳಲು ಅಯ್ಯಪ್ಪನ ಭಕ್ತರಿಗೆ ಕಷ್ಟವಾಗುತ್ತದೆ.

ಶಬರಿಮಲೆಗೆ ಮಹಿಳೆಯರ ಪ್ರವೇಶವಿಲ್ಲವೆಂದು “ಅಸಮಾನತೆಯ” ಅಪಪ್ರಚಾರವನ್ನ ವ್ಯವಸ್ಥಿತವಾಗಿ ಮಾಡಲಾಗಿದೆ. ವಿಶ್ವದ ಎರಡನೇ ಅತಿದೊಡ್ಡ ಯಾತ್ರಾಸ್ಥಳವಾದ ಶಬರಿಮಲೆಗೆ(ಹಜ್ ಯಾತ್ರೆ ಮೊದಲನೆಯದು) ಈ ಹಿಂದೆ ಕೂಡ ಕ್ರೈಸ್ತ ಮಿಷನರಿಗಳು ಶಬರಿಮಲೆಯನ್ನ ಸೈಂಟ್ ಥೋಮಸ್ ಬೆಟ್ಟ ಎಂದು ಕರೆದು ವಿವಾದ ಎಬ್ಬಿಸಿದ್ದನ್ನು,ತದನಂತರ ವ್ಯಾಟಿಕನ್ ಪೋಪ್ ಮಧ್ಯೆ ಪ್ರವೇಶಿಸಿ ಸೈಂಟ್ ಥಾಮಸ್ ಭಾರತಕ್ಕೆ ಬರಲೇ ಇಲ್ಲ ಎಂದು ಹೇಳಿಕೆ ನೀಡಿದ ಮೇಲೆ ಮಿಷನರಿಗಳು ತೆಪ್ಪಗಾಗಿದ್ದನ್ನು,1950ರ ಸಮಯದಲ್ಲಿ ಕಮ್ಯುನಿಸ್ಟ್ ವಾದಿಗಳು ಶಬರಿಮಲೆ ಕ್ಷೇತ್ರಕ್ಕೆ ಬೆಂಕಿಹಚ್ಚಿ, ವಿಗ್ರಹ ದ್ವಂಸ ಮಾಡಿದನ್ನು ನೆನೆಪಿಸಬಹುದು. ಇಂದೂ ಕೂಡ ಕೆಲವು ಮಹಿಳೆಯರನ್ನು ಮುಂದಿಟ್ಟುಕೊಂಡು ಕ್ಷೇತ್ರದ ಪಾವಿತ್ರ್ಯತೆಗೆ ದಕ್ಕೆ ತರುವ ಕೆಲಸ ನಿರಂತರವಾಗಿ ನಡೆಯುತ್ತಿದೆ.

ಇನ್ನೂ ಶಬರಿಮಲೆಗೆ ಮಹಿಳೆಯರ ಪ್ರವೇಶ ಹಿಂದಿನಿಂದಲೂ ಇದ್ದು 10-50ವರ್ಷ ಒಳಗಿನ ವಯಸಿನ ಮಿತಿಯವರಿಗೆ ಮಾತ್ರ ಪ್ರವೇಷ ನಿರಾಕರಿಸಲಾಗಿದೆ.
ವಿಶೇಷವೆಂದರೆ ಭಾರತದಲ್ಲಿ 3500 ಕ್ಕೂ ಅಧಿಕ ಅಯ್ಯಪ್ಪ ದೇಗುಲಗಳಿವೆ. ಅದರಲ್ಲೂ 90% ದಕ್ಷಿಣ ಭಾರತದಲ್ಲಿದೆ. (ಹೆಚ್ಚಾಗಿ ಕೇರಳ ತಮಿಳುನಾಡಿನಲ್ಲಿವೆ)
ಅಷ್ಟೂ ದೇಗುಲಗಳಿಗೂ ಎಂದಿಗೂ ಮಹಿಳಾ ಪ್ರವೇಶ ನಿರಾಕರಿಸಿಲ್ಲ.

ಅಯ್ಯಪ್ಪನಿಗೆ ಸಂಬಂಧಿಸಿದ ಪ್ರಮುಖ 5 ಕ್ಷೇತ್ರಗಳಿವೆ (ಶಬರಿಮಲೆಯನ್ನು ಒಳಗೊಂಡು) ಅವುಗಳನ್ನ ಪಂಚಶಾಸ್ತಾರ ಕ್ಷೇತ್ರಗಳೆನ್ನುತ್ತಾರೆ.  ಶಬರಿಮಲೆಯಲ್ಲಿ ನಡೆವ ಆಚರಣೆಗಳು ಇಲ್ಲಿಯೂ ನಡೆಯುತ್ತದೆ ಮತ್ತು ಶಬರಿಮಲೆ ಶಾಸ್ತಾ ಕ್ಷೇತ್ರ ಹೊರತುಪಡಿಸಿ ಉಳಿದ ಎಲ್ಲಾ ನಾಲ್ಕು ಶಾಸ್ತಾ ಕ್ಷೇತ್ರಗಳಿಗೆ ಮಹಿಳಾ ಪ್ರವೇಶವಿದೆ ಅಂದ ಮೇಲೆ ಲಿಂಗ ತಾರತಮ್ಯವೆಲ್ಲಿದೆ.? ಲಿಂಗ ತಾರತಮ್ಯವಿದ್ದರೆ ಉಳಿದ ಕ್ಷೇತ್ರಕ್ಕೂ ನಿಷೇಧಿಸಬೇಕಿತ್ತಲ್ಲವೆ? ಉಳಿದೆಲ್ಲಕಿಂತ ಶಬರಿಮಲೆ ಭಿನ್ನ. ಹೇಗೆಂದರೆ ಶಬರಿಮಲೆ ಅಯ್ಯಪ್ಪನು ಶಬರಿಮಲೆಯಲ್ಲಿ “ನೈಷ್ಟಿಕ ಬ್ರಹ್ಮಚಾರಿ” ರೂಪದಲ್ಲಿ ನೆಲೆಸಿರುವುದರಿಂದ 41 ದಿನಗಳ ಕಾಲ ಮಂಡಲ ವ್ರತವನ್ನಾಚರಿಸಿ, ಅಷ್ಟಾಂಗ ಬ್ರಹ್ಮಚರ್ಯ ಪಾಲನೆ ಮಾಡುವುದು ಕಡ್ಡಾಯ, ಇದು ಆ ಕ್ಷೇತ್ರದ ಮೂಲ ಸಂಪ್ರದಾಯ ಮತ್ತು ಋತುಮತಿಯಾದ ಮಹಿಳೆಯರಿಗೆ 41ದಿನಗಳ ಕಾಲ ಸಾಧ್ಯವಿಲ್ಲದ ಮಾತು. ಪುರುಷರಾಗಲಿ, ಮಹಿಳೆಯರಾಗಲಿ 41 ದಿನ ಮಂಡಲ ಕಾಲ ಆಚರಿಸಬೇಕಾಗಿರುವುದು ಕಡ್ಡಾಯ.

ವಿಸ್ತಾರವಾಗಿ ಹೇಳುವುದಾದರೆ, ಒಂದು ಮಂಡಲ ಕಾಲ ಅಂದರೆ 27 ನಕ್ಷತ್ರಗಳ ಒಂದೂವರೆ ಸುತ್ತು ಮಂಡಲವಾಗಿ ತಿರುಗುವುದೇ ಒಂದು ಮಂಡಲ ಕಾಲ. ಹೆಚ್ಚು ಕಡಿಮೆ 41ದಿನ. ಇಷ್ಟು ದಿನಗಳ ಕಾಲ ಅಷ್ಟಾಂಗ ಬ್ರಹ್ಮಚರ್ಯ ವ್ರತವನ್ನಾಚರಿಸುವುದು ಕಡ್ಡಾಯ ಹಾಗೂ ಅನೇಕ ಶತಮಾನಗಳಿಂದ ಆಚರಿಸಿಕೊಂಡು ಬಂದಿರುವ ಸಂಪ್ರದಾಯ. ಅಲ್ಲದೇ 41 ದಿನಗಳ ಕಾಲ ಬ್ರಹ್ಮಚರ್ಯ ಆಚರಿಸದೇ ಅಯ್ಯಪ್ಪನನ್ನು ದರ್ಶಿಸಿದರೆ ಆ ಯಾತ್ರೆಯೇ ನಿಶ್ಫಲ ಹಾಗೂ ಬ್ರಹ್ಮಚರ್ಯ ಭಂಗವಾದ ತಪ್ಪಿಗೆ ಯಾವುದೇ ಪ್ರಾಯಶ್ಚಿತವಿಲ್ಲ ಎಂದು ಶಾಸ್ತಾರತತ್ವಗಳಲ್ಲಿ ಹೇಳಲಾಗಿದೆ( ವ್ರತಾನುಷ್ಟಾನ ಹಾಗೂ ಅದರ ನೀತಿ ನಿಯಮ ತತ್ವಗಳ ಬಗ್ಗೆ ಅಯ್ಯಪ್ಪನು ನಿರ್ದೇಶಿಸಿದ್ದು, ಅದನ್ನ ಶಾಸ್ತಾರತತ್ವಗಳು ಅಥವಾ ಭೂತನಾಥಾಭ್ಯುದಯ ಎಂದು ಕರೆಯಲಾಗಿದೆ).

ಇನ್ನೂ ಮಂಡಲವ್ರತ ಧೀರ್ಘಕಾಲದ ವ್ರತವಾದ್ದರಿಂದರಿಂದ ಋತುಮತಿಯಾಗುವ ಸ್ತ್ರೀಯರಿಗೆ ಕಷ್ಟಸಾಧ್ಯ. ಕಾರಣ,ಪುರುಷರೂ ಕೂಡ ಮಂಡಲ ಕಾಲ ಆಚರಿಸುವಾಗ ವೀರ್ಯ ನಷ್ಟವಾಗ ಬಾರದೆಂಬದನ್ನು ನಿಯಮವಿದೆ. (productivity)
ಇನ್ನೂ ಮಹಿಳೆಯರಲ್ಲೂ ಕೂಡ ಆ ಸಮಯದಲ್ಲಿ ಅಂಡಾಣುಗಳು ನಷ್ಟಹೊಂದುತ್ತವೆ ಮತ್ತು ಋತುಮತಿಯಾಗುವ ಸಮಯ ಆಕೆಗೆ ಕ್ಲ್ಲಿಷ್ಟ ಸಮಯವು ಹೌದು, ದೈಹಿಕವಾಗಿ ಕೂಡ ವೇದನೆ ನೀಡುವಂತದ್ದು. ಈ ಸಮಯದಲ್ಲಿ ಬ್ರಹ್ಮಚರ್ಯದಂತಹ ಕಠಿಣವ್ರತ ಆಕೆಗೆ ಸಾಧ್ಯವಾಗಲಾರದು.  ಬ್ರಹ್ಮಚರ್ಯ ಆಚರಿಸುವಾಗ ವೀರ್ಯ ನಷ್ಟ ಹೊಂದಬಾರದೆಂಬ ನಿಯಮವಿದೆ, ಹೀಗೆ ಆಚರಿಸಲ್ಪಡುವ ಕಠಿಣ ಬ್ರಹ್ಮಚರ್ಯದಿಂದ ಕೆಳಮುಖವಾಗಿ ಚಲಿಸಲ್ಪಡುವ ವೀರ್ಯಾಣುಗಳು ಮೇಲ್ಮುಖವಾಗಿ ಚಲಿಸತೊಡಗಿ ತೇಜಸ್ಸು, ನಂತರದಲ್ಲಿ ಒಜಸ್ಸುಗಳು ವ್ರದ್ದಿಯಾಗುತ್ತದೆ, ಮಾನಸಿಕ ಹಾಗೂ ಶಾರೀರಿಕ ಶಾಂತಿ ಲಭಿಸುತ್ತದೆ. ಆದರೆ ಮಹಿಳೆಯರಲ್ಲಿ ಕಠಿಣ ಬ್ರಹ್ಮಚರ್ಯ ಆಚರಣೆಯಿಂದ (ಕಷ್ಟಸಾಧ್ಯ) ಅದು ನೇರವಾಗಿ ಆಕೆಯ ಗರ್ಭವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ, ಅಂಡಾಣುಗಳ ಉತ್ಪಾದನೆ ನಿಲ್ಲುತ್ತದೆ.ಹೆಣ್ತನದ ಪರಿಪೂರ್ಣತೆ ತಾಯ್ತನದಲ್ಲಿ ಎನ್ನುತ್ತಾರೆ. ತಾಯ್ತನವನ್ನ ಕಳಕೊಳ್ಳಲೂ ಯಾರು ತಯಾರಿರುವುದಿಲ್ಲ.  ಇದು ವೈಜ್ಞಾನಿಕವಾಗಿಯೂ ಸತ್ಯ.  ಈ ಕಾರಣದಿಂದಾಗಿ ಶಬರಿಮಲೆಗೆ 10-50 ವರುಷ ಪ್ರಾಯದವರಿಗೆ ಪ್ರವೇಶವಿಲ್ಲ, ಉಳಿದಂತೆ ಎಲ್ಲಾ ಅಯ್ಯಪ್ಪ ಸ್ವಾಮಿ ಕ್ಷೇತ್ರ ಕ್ಕೆ ಪ್ರವೇಶವಿದೆ, ಆ ಕ್ಷೇತ್ರದ ಮೂಲ ಸಂಪ್ರದಾಯ, ಆಚರಣೆಗಳನ್ನ ನಾವು ತಿಳಿದುಕೊಂಡು ಅದನ್ನ ಉಳಿಸಿಕೊಳ್ಳಬೇಕು.
ಇನ್ನೂ ಶಬರಿಮಲೆಗೆ ಮಹಿಳೆಯರಿಗೆ ಪ್ರವೇಶ ಕಲ್ಪಿಸಿದ ಕೂಡಲೇ ಸಮಾನತೆ ಬಂದು ಬಿಡುತ್ತದೆಯೇ?? ಕಾನೂನು ತರುವುದಾದರೇ ಎಲ್ಲಾ ಧರ್ಮಗಳಿಗೂ ತರಲಿ ಅಲ್ಲವೇ.. ಮಸೀದಿ, ದರ್ಗಾಗಳಿಗೂ ಮಹಿಳಾ ಪ್ರವೇಶವಿಲ್ಲ ಯಾಕೆ ಶಬರಿಮಲೆಯ ವಿಷಯದಲ್ಲಿ ಉತ್ಸುಖರಾದವರೂ  ಈ ಬಗ್ಗೆ ಚಕಾರ ಎತ್ತುತ್ತಿಲ್ಲ??
ಚರ್ಚಿನ ಪಾದ್ರಿಗಳ ಅಥವಾ ಬಿಷಪ್ ಗಳ ಸ್ಥಾನಮಾನವನ್ನ ಮಹಿಳೆಯರಿಗೂ ಕಲ್ಪಿಸಿ ಕೊಡಲು ಯಾರು ಯಾಕೆ ಪ್ರಶ್ನೆ ಮಾಡ್ತಾ ಇಲ್ಲಾ? ಸಮಾನತೆ ಲಿಂಗ ತಾರತಮ್ಯ ಎಂದಾದರೆ ಎಲ್ಲಾ ಸಮಾಜಿಕ, ರಾಜಕೀಯ ಹಾಗೂ ಎಲ್ಲಾ ವಿಭಾಗಗಳಲ್ಲಿ ಮಹಿಳೆಯರಿಗೆ 50% ಮೀಸಲಾತಿ ನೀಡಿ ಅಸಮಾನತೆಯನ್ನ ಸುಪ್ರಿಂ ಕೋರ್ಟ್ ಬಗೆಹರಿಸಬಹುದಲ್ಲವೆ? ಶಬರಿಮಲೆ ವಿಚಾರವಾಗಿ ನ್ಯಾಯಾಲಯದ ಪಂಚಪೀಠದಲ್ಲಿ ನಾಲ್ವರು ಪುರುಷ ಮತ್ತು ಏಕೈಕ ಮಹಿಳಾ ನ್ಯಾಯಮೂರ್ತಿ ಮಾತ್ರ ಇದ್ದಿದ್ದು ಸಮಾನತೆಯೇ? ನಾವು ಸುಲಭವಾಗಿ ಹೇಳಿಬಿಡ್ತೇವೆ, ಸಂಪ್ರದಾಯ ಕಟ್ಟಳೆ ಆಚರಣೆ ಎಲ್ಲಾ ಹಿಂದಿನ ಕಾಲದವರ ಕಥೆ ಎಂದು. ಆದರೆ ಅದರ ಹಿಂದೆಲ್ಲ ವೈಜ್ಞಾನಿಕ ಹಿನ್ನಲೆಯಿದೆ.
ಎಷ್ಟೆ ತಂತ್ರಜ್ಞಾನ ಬಂದಿದ್ದರೂ ಕೇವಲ ಕೈಯಿಂದಲೇ ತಂತ್ರಜ್ಞಾನ ಮೀರಿಸುವಂತ ನಿರ್ಮಾಣಗಳನ್ನ ನಮ್ಮವರು ಮಾಡಿದ್ದಾರೆ, ಅದೇನೆ ಇರಲಿ.. ಆದರೂ ಶಬರಿಮಲೆ ತೀರ್ಪಿನ ವಿರುದ್ಧ ಪ್ರತಿಭಟನೆ ಆಗ್ತಾ ಇದೆ. ಅದರಲ್ಲಿ ಲಕ್ಷಾಂತರ ಮಹಿಳೆಯರೇ ಭಾಗವಹಿಸಿಸುತ್ತಿದ್ದಾರೆ ಅಂದರೆ ಆ ಭಾವನೆಗೂ ನಾವು ಗೌರವ ಕೊಡಬೇಕು, ಹಾಗಾಗಿ ಹಿಂದೂ ಧರ್ಮದ ಮೂಲ ಆಚರಣೆಗಳನ್ನ ಉಳಿಸಿಕೊಂಡು ಹೋಗುವುದು ನಮ್ಮ ಕರ್ತವ್ಯ. ಶಬರಿಮಲೆಗೆ ಪ್ರವೇಶ ಮಾಡಿಯೇ ಸಿದ್ದ ಎನ್ನುವ ಕೆಲವು ಮಹಿಳೆಯರದ್ದು  ಕೇವಲ ಹೋರಾಟವೇ ವಿನ:  ಭಕ್ತಿಯಿಂದಲ್ಲ. ಪ್ರವೇಶ ಕಲ್ಪಿಸಿದ ಕೂಡಲೇ ಸಮಾನತೆ ಉಂಟಾಗುತ್ತದೆ ಎನ್ನುವುದೂ ಕೂಡ ಅಷ್ಟೇ ಮೂರ್ಖತನ. ಎಲ್ಲ ಧರ್ಮಗಳಲ್ಲೂ ಮಸೀದಿ ಇರಲಿ, ಚರ್ಚ್ ಇರಲಿ ಅಥವಾ ಮಂದಿರವೇ ಇರಲಿ ಅವುಗಳ ಆಚಾರ ವಿಚಾರಗಳಲ್ಲಿ  ಮೂಗು ತೂರಿಸುವ ಮುನ್ನ, ಅದರ ಹಿನ್ನಲೆಗಳನ್ನು ಅರಿತುಕೊಳ್ಳಬೇಕು. ಧಾರ್ಮಿಕ ಭಾವನೆಗಳನ್ನು ಗೌರವಿಸಬೇಕು. ನಾವು ಧಾರ್ಮಿಕ ತತ್ವದಡಿಯಲ್ಲೆ ಬೆಳೆದು ಬಂದವರು, ಇನ್ನಾದರೂ ಸುಪ್ರೀಂ ಕೋರ್ಟ್ ಈ ಬಗ್ಗೆ ಮರುಪರಿಶೀಲನೆ ನಡೆಸಿ ಕೋಟ್ಯಾನುಕೋಟಿ ಭಕ್ತರ ಭಾವನೆಗಳನ್ನ ಗೌರವಿಸಿ , ಉಳಿಸಲಿ ಎಂದು ಮನವಿ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.