ಮಾಲಾಡಿ: 108 ವಾಹನದಲ್ಲಿ ಹೆರಿಗೆ

Advt_NewsUnder_1
Advt_NewsUnder_1
Advt_NewsUnder_1

ಮಾಲಾಡಿ ಗ್ರಾಮದ ಉರ್ಲಾ ಮನೆಯ ವಿನುತ ವೇಗಸ್ ರವರು ತುಂಬು ಗರ್ಭಿಣಿಯಾಗಿದ್ದು, ಇವರಿಗೆ ಅ.19 ರಂದು ರಾತ್ರಿ ವೇಳೆ ತೀವ್ರ ಪ್ರಸವ ವೇದನೆ ಕಾಣಿಸಿಕೊಂಡು,  ಅವರನ್ನು ಮನೆಯಿಂದ ಬಂಟ್ವಾಳ ಸರ್ಕಾರಿ ಆಸ್ಪತ್ರೆಗೆ  ಉಜಿರೆ 108 ಆ್ಯಂಬುಲೆನ್ಸ್ ನಲ್ಲಿ ಸಾಗಿಸುವ ಸಂದರ್ಭ ಮಾರ್ಗ ಮಧ್ಯೆ ಹೆಣ್ಣು ಶಿಶುವಿಗೆ ಜನ್ಮ ನೀಡಿದ್ದಾರೆ.

ತಾಯಿ ಮಗು ಆರೋಗ್ಯದಿಂದ ಇದ್ದು, ಅವರನ್ನು ಬಂಟ್ವಾಳ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. 108 ಉಜಿರೆ ಆಂಬ್ಯುಲೆನ್ಸ್ ಪೈಲಟ್ ಶ್ರೀಧರ್ ಮತ್ತು ಇಎಂಟಿ ಡೆನ್ನಿಸ್ ರವರ ಸಹಕಾರದೊಂದಿಗೆ ಈ ಹೆರಿಗೆ ನಡೆಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.