ಇಂದಬೆಟ್ಟು: ಸ್ನಾನಕ್ಕೆಂದು ನದಿಗಿಳಿದ ಯುವಕ ನೀರುಪಾಲು

ಇಂದಬೆಟ್ಟು: ಸ್ನಾನಕ್ಕೆಂದು ನೇತ್ರಾವತಿ ನದಿಗೆ ಇಳಿದಿದ್ದ ಯುವಕ ನೀರುಪಾಲಾದ ಘಟನೆ ಅ.19 ರಂದು ನಡೆದಿದೆ. ಇಂದಬೆಟ್ಟು ಗ್ರಾಮದ ಪುತ್ರಬೆಟ್ಟು ನಿವಾಸಿ ಸಂಜೀವಗೌಡ ರವರ ಪುತ್ರ ಪ್ರತೀಕ್ ಗೌಡ(19.ವ) ನೀರುಪಾಲಾದ ದುರ್ದೈವಿ.
ಸಂಜೀವ ಗೌಡರವರ ನಾಲ್ವರು ಪುತ್ರರಲ್ಲಿ ಮೂರನೆಯವರಾದ ಪ್ರತೀಕ್ ಡಿಪ್ಲೋಮ ವ್ಯಾಸಾಂಗ ಮಾಡುತ್ತಿದ್ದರು. ಇವರು ಅ.19 ರಂದು ಮದ್ಯಾಹ್ನ ಮನೆ ಸಮೀಪದಲ್ಲಿರುವ ನೇತ್ರಾವತಿ ನದಿಗೆ ಸ್ನಾನಕ್ಕೆಂದು ತೆರಳಿದ್ದು, ಈ ಸಂದರ್ಭ ನೀರಿನಲ್ಲಿ ಮುಳುಗಿದ್ದಾರೆ. ಜೊತೆಗಿದ್ದವರು ಅವರನ್ನು ರಕ್ಷಿಸುವಲ್ಲಿ ವಿಫಲರಾಗಿದ್ದಾರೆ. ಸ್ಥಳೀಯರು, ಮನೆಯವರು, ಅಗ್ನಿಶಾಮಕ ದಳದವರು, ಮುಳುಗು ತಜ್ಞರು ನದಿಯಲ್ಲಿ ಶೋಧಕಾರ್ಯ ಮುಂದುವರಿಸಿದ್ದಾರೆ. ನದಿಯಲ್ಲಿ ನೀರಿನ ಹರಿವು ಜಾಸ್ತಿ ಇದ್ದುದರಿಂದ ಸಂಜೆ ವೇಳೆ ಹುಡುಕಾಟ ಸ್ಥಗಿತಗೊಳಿಸಲಾಗಿತ್ತು. ಈ ಸಂಬಂಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.