ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಪ್ರಯುಕ್ತ ವಿಶೇಷ ಪೂಜೆ

ನಾಳ :ಇಲ್ಲಿನ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಪ್ರಯುಕ್ತ ವಿಶೇಷ ಪೂಜೆ, ಅಯುಧ ಪೂಜೆ ಹಾಗೂ ವಾಹನಗಳ ಪೂಜೆಯು  ಅ. 18 ರಂದು ವಿಜೃಂಭಣೆಯಿಂದ ನಡೆಯಿತು.

ಜಿಲ್ಲೆಯ ಪ್ರಖ್ಯಾತ ಕಲಾವಿದರಿಂದ “ನರಕಾಸುರ ಮೋಕ್ಷ–ವೀರಮಾರುತಿ”ಎಂಬ ಯಕ್ಷಗಾನ ಪ್ರದರ್ಶನ ನಡೆಯತು. ಈ ಸಂದರ್ಭದಲ್ಲಿ ರಾತ್ರಿಯ ಅನ್ನಸಂತರ್ಪಣೆ ಸೇವಾಕರ್ತರಾದ ಯಶವಂತ ಶೆಟ್ಟಿ ನಾಳ, ಭುವನೇಶ್ವರ ಗೇರುಕಟ್ಟೆ, ಪದ್ಮನಾಭ ಸುವರ್ಣ ಮೆದಿನ ಹಾಗೂ ಭಜನಾ ಸೇವಾಕರ್ತರನ್ನು, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವಸಂತ ಮಜಲು ಸಾಲು ಹೊದಿಸಿ ಸನ್ಮಾನಿಸಿದರು, ಪ್ರಧಾನ ಅರ್ಚಕರಾದ ರಾಘವೇಂದ್ರ ಅಸ್ರಣ್ಣರು ಫಲಪುಷ್ಪ ಪ್ರಸಾದ  ನೀಡುವ ಮೂಲಕ ಅಭಿನಂದಿಸಿದರು.

ವ್ಯವಸ್ಥಾಪನಾ ಸಮಿತಿ ಪದಾಧಿಕಾರಿಗಳು,ಅಭಿವೃದ್ಧಿ ಸಮಿತಿ ಪದಾಧಿಕಾರಿಗಳು, ಭಜನಾ ಮಂಡಳಿಯ ಸರ್ವಸದಸ್ಯರು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.