ಫ್ರೆಂಡ್ಸ್ ಬೆಳ್ತಂಗಡಿ ತಾಲೂಕು ವತಿಯಿಂದ ಪಿಲಿಗೊಬ್ಬು ಸೀಸನ್-2

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ದಸರಾ ಹಬ್ಬದ ಪ್ರಯುಕ್ತ ಫ್ರೆಂಡ್ಸ್ ಬೆಳ್ತಂಗಡಿ ತಾಲೂಕು ವತಿಯಿಂದ ಪ್ರತಿಷ್ಠಿತ ಪುರಲ್ದ ಅಪ್ಪೆನ ಜೋಕುಲು ರಾಜ್‌ಫ್ರೆಂಡ್ಸ್ ಪೊಳಲಿ ತಂಡದವರಿಗೆ ವಾಣಿ ಶಿಕ್ಷಣ ಸಂಸ್ಥೆಯ ಕ್ರೀಡಾಂಗಣದಲ್ಲಿ ಪಿಲಿಗೊಬ್ಬು- ಸೀಸನ್ 2 ಪಿಲಿನಲಿಕೆ ಕಾರ್ಯಕ್ರಮ ಅ. 16 ರಂದು ಸಂಜೆ ನಡೆಯಿತು.
ಶಾಸಕ ಹರೀಶ್ ಪೂಂಜ ದೀಪಬೆಳಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಸಂದರ್ಭ ಜಯಕರ್ನಾಟಕ ಸಂಘಟನೆ ಅಧ್ಯಕ್ಷ ಪುಷ್ಪರಾಜ್ ಶೆಟ್ಟಿ, ಯುವ ಉದ್ಯಮಿ ರಾಜೇಶ್ ಶೆಟ್ಟಿ ನವಶಕ್ತಿ ಗುರುವಾಯನಕೆರೆ, ಸುದ್ದಿಬಿಡುಗಡೆ ವ್ಯವಸ್ಥಾಪಕ ಮಂಜುನಾಥ ರೈ, ಜಯಕರ್ನಾಟಕ ರಾಜ್ಯ ಸಂಘಟಕ ಮನೋಹರ್, ಲಾಯಿಲ ಗ್ರಾ.ಪಂ ಸದಸ್ಯ ಮೋಹನ್‌ದಾಸ್, ಈಶ್ವರ ಭೈರ, ವಕೀಲರ ಸಂಘದ ಕ್ರೀಡಾಕಾರ್ಯದರ್ಶಿ ದಿನೇಶ್ ಶೆಟ್ಟಿ ಲಾಯಿಲ, ದಿನೇಶ್ ಕೊಯ್ಯೂರು, ನ್ಯಾಯವಾದಿ ನವೀನ್ ಗೌಡ, ಅಜಿತ್ ಕುಮಾರ್ ಜೈನ್, ಲೋಕೋಪಯೋಗಿ ಗುತ್ತಿಗೆದಾರರಾದ ವಿಶ್ವನಾಥ ಲಾಯಿಲ ಮತ್ತು ಪ್ರಶಾಂತ್ ಪ್ರತಿಮ ನಿಲಯ, ನಡ ಗ್ರಾ.ಪಂ ಉಪಾಧ್ಯಕ್ಷ ಗಣೇಶ್ ಗೌಡ, ಶಶಿರಾಜ್ ಶೆಟ್ಟಿ ಗುರುವಾಯನಕೆರೆ, ಸುದ್ದಿ ಬಿಡುಗಡೆ ಜಾಹೀರಾತು ವಿಭಾಗದ ತುಕಾರಾಮ್, ರಾಜೇಶ್ ಶೆಟ್ಟಿ ಲಾಯಿಲ ರಾಜ್‌ಫ್ರೆಂಡ್ಸ್ ತಂಡದ ಉಸ್ತುವಾರಿ ರಂಜಿತ್ ಶೆಟ್ಟಿ ಪೊಳಲಿ, ಇವರು ಉಪಸ್ಥಿತರಿದ್ದರು. ಕಿಶೋರ್ ಕುಮಾರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ರಾಜ್‌ಫ್ರೆಂಡ್ಸ್ ತಂಡದ ಯಜಮಾನ ರಾಜ್‌ಮಾರ್ಲ ಅವರನ್ನು ಇಡೀ ತಂಡದ ಪರವಾಗಿ ಶಾಲು ಹೊದಿಸಿ ಸನ್ಮಾನಿಸಲಾಯಿತು. ಬಳಿಕ ವಿಶಾಲವಾದ ವೇದಿಕೆಯಲ್ಲಿ ಸುಮಾರು 40 ಕ್ಕೂ ಅಧಿಕ ಹುಲಿ ವೇಷಧಾರಿ ಗಳಿಂದ ಆಕರ್ಷಕವಾದ ಪಿಲಿಗೊಬ್ಬು ಮೂಡಿಬಂತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.