ಬೆಳ್ತಂಗಡಿ ವಕೀಲರ ಸಂಘದಿಂದ ಸುಪ್ರಿಂ ಕೋರ್ಟ್ ನ್ಯಾಯಾಧೀಶರ ಭೇಟಿ : ಕಟ್ಟಡ ಅನುದಾನಕ್ಕೆ ಮನವಿ

ಖಾಸಗಿ ಕಾರ್ಯಕ್ರಮದ ನಿಮಿತ್ತ ತನ್ನ ಹುಟ್ಟೂರಿಗೆ ಆಗಮಿಸಿರುವ ಸುಪ್ರಿಂ ಕೋರ್ಟ್ ನ ನ್ಯಾಯಾಧೀಶ ಅಬ್ದುಲ್ ನಜೀರ್ ಸಾಬ್ ಅವರನ್ನು ಬೆಳ್ತಂಗಡಿಯ ವಕೀಲರ ಸಂಘದ ಪದಾದಿಕಾರಿಗಳು ಮೂಡಬಿದಿರೆಯ ಅವರ ನಿವಾಸದಲ್ಲಿ ಭೇಟಿ ಮಾಡಿದರು.
ಈ ಸಂದರ್ಭದಲ್ಲಿ ಬೆಳ್ತಂಗಡಿ ನ್ಯಾಯಾಲಯಕ್ಕೆ ನೂತನ ಕಟ್ಟಡವನ್ನು ಮಂಜೂರುಗೊಳಿಸಲು ಮನವಿ ಮಾಡಲಾಯಿತು. ಅದೇ ರೀತಿ ವಕೀಲರ ಸಂಘದ ನೂತನ ಕಟ್ಟಡದ ರಚನೆಗಾಗಿ ಮಂಜೂರಾಗಿರುವ ಅನುದಾನದ ಸಂಬಂಧ ಶೀಘ್ರ ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಯಿತು. ನಿಯೋಗದಲ್ಲಿ ಸಂಘದ ಅದ್ಯಕ್ಷ ಸೇವಿಯರ್ ಪಾಲೇಲಿ, ಪ್ರಧಾನ ಕಾರ್ಯದರ್ಶಿ ಮನೋಹರ ಕುಮಾರ್, ಉಪಾದ್ಯಕ್ಷ ಶ್ರೀನಿವಾಸ ಗೌಡ ಮತ್ತು ಹಿರಿಯ ವಕೀಲರ ಸಮಿತಿ ನಿಕಟ ಪೂರ್ವ ಅದ್ಯಕ್ಷ ಪ್ರಸಾದ್ ಕೆ. ಎಸ್ ಇದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.