HomePage_Banner_
HomePage_Banner_
HomePage_Banner_

ತಣ್ಣೀರುಪಂತ: ಪೊಸೊಂದೋಡಿ ಶ್ರೀಧರ ಗೌಡರಿಗೆ ಸಮಗ್ರ ಕೃಷಿ ಅಭಿವೃದ್ಧಿ ಪ್ರಶಸ್ತಿ

Advt_NewsUnder_1

ತಣ್ಣೀರುಪಂತ : ಅ.13 ರಂದು ಶಿವಮೊಗ್ಗದಲ್ಲಿ ನಡೆದ ಕೃಷಿಮೇಳದಲ್ಲಿ ಶ್ರೀಧರ ಗೌಡ ಪೊಸಂದೋಡಿ ಅವರಿಗೆ ಜಿಲ್ಲಾ ಮಟ್ಟದ ಪ್ರಗತಿಪರ ರೈತ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಇವರ ಕೃಷಿ ಕ್ಷೇತ್ರದಲ್ಲಿನ ಸಾಧನೆ ಗುರುತಿಸಿ ದಕ್ಷಿಣ ಕನ್ನಡ ಜಿಲ್ಲೆಯ ಪ್ರಗತಿಪರ ರೈತ ಪ್ರಶಸ್ತಿಯನ್ನು ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ಶಿವಮೊಗ್ಗ ಇದರ ಸಹಯೋಗ ದೊಂದಿಗೆ ಡಾ| ಟಿ.ಹೆಚ್.ಗೌಡ ವಿಸ್ತರಣಾ ನಿರ್ದೇಶಕರು ಡಾ.ಎಂ.ಕೆ ನಾಯ್ಕ್ ಕುಲಪತಿಗಳು ಹಾಗೂ ವಿವಿಧ ಜಿಲ್ಲೆಯ ನಿರ್ದೇಶಕರುಗಳು ಈ ಸಂಧರ್ಭದಲ್ಲಿ ಉಪಸ್ಥಿತರಿದ್ದರು.
ಶ್ರೀಧರ ಗೌಡ ಪೊಸೊಂದೋಡಿಯವರು 2000-2001 ನೇ ಸಾಲಿನ ಭತ್ತ ಕೃಷಿಯಲ್ಲಿ ತಾಲೂಕು ಮಟ್ಟದಲ್ಲಿ ಪ್ರಥಮ ಪ್ರಶಸ್ತಿ ಪಡೆದಿರುತ್ತಾರೆ. 2015-16ನೇ ಸಾಲಿನಲ್ಲಿ ಹೈನುಗಾರಿಕೆ ವಿಭಾಗದಲ್ಲಿ ತಾಲೂಕು ಮಟ್ಟದ ಪ್ರಶಸ್ತಿ ಪಡೆದಿರುತ್ತಾರೆ. ಬೆಳ್ತಂಗಡಿ ತೋಟ ಗಾರಿಕೆ ವಿಭಾಗದಲ್ಲಿ 2018-19 ನೇ ಸಾಲಿನಲ್ಲಿ ತಾಲೂಕು ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಸುಮಾರು 25  ವರ್ಷಗಳಿಂದ ಗುಣಮಟ್ಟದ ಹಾಲು ಸಂಗ್ರಹದಲ್ಲಿ ಪ್ರತಿ ವರ್ಷ ಪ್ರಶಸ್ತಿ ಪಡೆಯುತ್ತಿದ್ದು, 2017-18 ರ ವರೆಗೆ ಉತ್ತಮ ಗುಣಮಟ್ಟದ ಹಾಲು ಸಂಗ್ರಹದಲ್ಲಿ 5ನೇ ಸ್ಥಾನ ಪ್ರಶಸ್ತಿಯನ್ನು ಪಡೆದಿದ್ದಾರೆ. ದಿನಾ ಒಂದಕ್ಕೆ ಸರಾಸರಿ 100 ಲೀಟರ್ ಹಾಲು ತಣ್ಣೀರುಪಂಥ ಸಂಘಕ್ಕೆ ನೀಡುತ್ತಿದ್ದಾರೆ.
ಅಲ್ಲದೇ ತನ್ನ ಕೃಷಿ ಜಮೀನಿನಲ್ಲಿ ವಿವಿಧ ಬಗೆಯ ಅಡಿಕೆ, ತೆಂಗು, ಕಾಳು ಮೆಣಸು, ಕೊಕ್ಕೊ, ತರಕಾರಿ, ಗೇರುಬೀಜ, ಹಾಗೂ ಕೆಲವೊಂದು ಗಿಡಗಳಿಗೆ ಕಸಿಕಟ್ಟುವ ಮೂಲಕ ಕೃಷಿಯಲ್ಲಿ ಹೆಚ್ಚಿನ ಇಳುವರಿಯನ್ನು ಪಡೆಯಲು ಪ್ರಯತ್ನಿಸುತ್ತಿದ್ದಾರೆ. 1 ಎಕ್ರೆ ಜಮೀನಿನಲ್ಲಿ ಉತ್ತಮ ಗುಣಮಟ್ಟದ ಹುಲ್ಲಿನ ತಳಿಗಳಾದ ಸಂಪೂರ್ಣ ತಳಿ, ಬಿ.ಹೆಚ್-8, ಗೋಟಮಾಲ, ಹಾಗೂ ಸಿಒ-3 ಹುಲ್ಲುಗಳನ್ನು ಬೆಳೆದು ಹೈನುಗಾರಿಕೆಯಲ್ಲಿ ಹೆಚ್ಚಿನ ಆದಾಯ ಪಡೆಯಲು ಪ್ರಯತ್ನಿಸುತ್ತಿದ್ದಾರೆ. ದೇಶಿತಳಿ, ಜರ್ಸಿ, ಹಾಸ್ಟಿನ್, ಮತ್ತು ಮಿಶ್ರತಳಿ ಗೋವುಗಳನ್ನು ಸಾಕುತ್ತಿದ್ದಾರೆ. ಹಾಗೂ ಅಪ್ಪಟ ಸಾವಯವ ಕೃಷಿಗೆ ಒತ್ತು ನೀಡುತ್ತಿದ್ದಾರೆ.
1 ಎಕ್ರೆ ಪ್ರದೇಶದಲ್ಲಿ ಮುಂದಿನ ವರುಷಗಳಲ್ಲಿ ಭತ್ತದ ಕೃಷಿ ಮಾಡುವ ಉದ್ದೇಶವಿದೆ ಹಾಗೂ ಮೀನು ಕೃಷಿ, ಮತ್ತು ನಾಟಿ ಕೋಳಿ ಸಾಕಣೆ, ಜೇನು ಕೃಷಿಯನ್ನು ಉತ್ತಮ ಗುಣಮಟ್ಟದಲ್ಲಿ ಮಾಡುವ ಉದ್ಧೇಶವಿದೆ ಎಂದು ಸಂತೋಷದಿಂದ ಹೇಳಿಕೊಳ್ಳುತ್ತಾರೆ.
ಸಹೋದರ ದುಗ್ಗಪ್ಪ ಗೌಡ ನವ ಚೇತನ ಕೃಷಿ ಉತ್ಪಾದಕ ತೋಟಗಾರಿಕಾ ಕಂ. ಕಲ್ಲೇರಿ ಇದರ ಅಧ್ಯಕ್ಷರಾಗಿರುತ್ತಾರೆ. ಇನ್ನೋರ್ವ ಸಹೋದರ ದಿನೇಶ್ ಗೌಡ ಕೃಷಿ ಸಮಾಜ ಖಜಾಂಚಿ ಯಾಗಿದ್ದು ಸಾಥ್ ನೀಡುತ್ತಿದ್ದಾರೆ.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.