ಕೊಡಗು ನೆರೆಸಂತ್ರಸ್ಥರಿಗೆ ಬಂಗಾಡಿ ಸಹಕಾರಿ ವ್ಯವಸಾಯಿಕ ಸಂಘದಿಂದ 3.50 ರೂ.ಲಕ್ಷ ದೇಣಿಗೆ

ಬಂಗಾಡಿ: ಕೊಡಗು ನೆರೆಸಂತ್ರಸ್ಥರಿಗೆ ಬಂಗಾಡಿ ಸಹಕಾರಿ ವ್ಯವಸಾಯಿಕ ಸಂಘದ ಸದಸ್ಯರು ನೀಡಿದ ದೇಣಿಯ ರೂ.3.50 ಲಕ್ಷದ ಚೆಕ್ಕನ್ನು ಸಂಘದ ಅಧ್ಯಕ್ಷರಾದ ಎನ್.ಲಕ್ಷ್ಮಣ ಗೌಡ ಇವರು ಕರ್ನಾಟಕ ಸರಕಾರದ ಸಹಕಾರ ಸಚಿವರಾದ ಬಂಡೆಪ್ಪ ಕಾಶೆಂಪೂರ್ ಇವರಿಗೆ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಸಹಕಾರ ಸಂಘಗಳ ನಿಬಂಧಕರಾದ ಎಂ.ಕೆ ಅಯ್ಯಪ್ಪ,ದ.ಕ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ಅಧ್ಯಕ್ಷರಾದ ಎಮ್.ಎನ್ ರಾಜೇಂದ್ರ ಕುಮಾರ್, ಮೈಸೂರು ವಲಯ ಸಹಕಾರ ಸಂಘಗಳ ಜಂಟಿ ನಿಬಂಧಕರಾದ ನಿಂಗಣಯ್ಯ ಮತ್ತು ಸಹಕಾರ ಸಂಘಗಳ ಉಪನಿಬಂಧಕರಾದ ಸಲಿಂ ಮತ್ತು ದ.ಕ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ನಿರ್ದೇಶಕರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.