HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

ಕೋಳಿ ಮತ್ತು ಮೀನು ಸಾಕಾಣಿಕೆಯ ಬಗ್ಗೆ ಮಾಹಿತಿ ಮತ್ತು ಪ್ರಾತ್ಯಕ್ಷಿಕೆ

ಬೆಳ್ತಂಗಡಿ: ಕಾರ್ಮಿಕ ಗೃಹ ನಿರ್ಮಾಣ ಸಹಕಾರಿ ಸಂಘ ಬೆಳ್ತಂಗಡಿ ಇದರ ನೇತೃತ್ವದಲ್ಲಿ ಇತ್ತೀಚೆಗೆ ಬೆಳ್ತಂಗಡಿಯಲ್ಲಿ ಕೋಳಿ ಮತ್ತು ಮೀನು ಸಾಕಾಣಿಕೆಯ ಬಗ್ಗೆ ಮಾಹಿತಿ ಮತ್ತು ಪ್ರಾತ್ಯಕ್ಷಿಕೆ ನಡೆಯಿತು.
ಮಂಗಳೂರು ಕೃಷಿ ವಿಜ್ಞಾನ ಕೇಂದ್ರದ ಅಧಿಕಾರಿ ಗಣೇಶ್ ಪ್ರಸಾದ್ ಪ್ರಧಾನ ಸಂಪನ್ಮೂಲ ವ್ಯಕ್ತಿಯಾಗಿದ್ದು ತರಬೇತಿ ನೀಡಿದರು. ಮೀನು ಸಾಕಾಣೆ ಮಾಡುವ ಮುಖಾಂತರ ಗ್ರಾಮೀಣ ಪ್ರದೇಶದ ಜನರು ತಮ್ಮ ಜಮೀನಿನಲ್ಲಿ ಇರುವ ಕೆರೆಗಳನ್ನು ಸದುಪಯೋಗ ಪಡಿಸಿಕೊಂಡು ವಿವಿಧ ತಳಿಯ ಮೀನುಗಳನ್ನು ಸಾಕಾಣೆ ಮಾಡಿಕೊಂಡು ಆರ್ಥಿಕ ಅಭಿವೃದ್ದಿಯನ್ನು ಸಾಧಿಸಬಹುದು. ಹಾಗೂ ಕೃಷಿ ವಿಜ್ಙಾನ ಕೇಂದ್ರದಲ್ಲಿ ಅಭಿವೃದ್ದಿಗೊಂಡ ಸ್ವರ್ಣಧಾರ ಕೋಳಿ ಬೇಗ ಬೆಳವಣಿಗೆ ಹೊಂದುವ ಮತ್ತು ರೋಗ ನಿರೋಧಕ ಶಕ್ತಿಯನ್ನು ಹೊಂದಿದ್ದು ಸ್ವ-ಸಹಾಯ ಸಂಘದ ಸದಸ್ಯರು ಈ ಕೋಳಿ ಮರಿಗಳನ್ನು ಸಾಕುವ ಮುಖಾಂತರ ಅಭಿವೃದ್ದಿ ಹೊಂದಲು ಸಾದ್ಯವಿದೆ ಹಾಗೂ ಯುವಜನರು ಹೆಚ್ಚಿನ ಮುತುವರ್ಜಿವಹಿಸಿ ಹೊಸ ತಂತ್ರಜ್ಞಾನವನ್ನು ಅಳವಡಿಸುವುದರಿಂದ ಆರ್ಥಿಕ ಅಭಿವೃದ್ದಿಯನ್ನು ಹೊಂದಬಹುದು ಎಂದು ಅವರು ತಮ್ಮ ಉಪನ್ಯಾಸದಲ್ಲಿ ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಕಾರ್ಮಿಕರ ಗೃಹ ನಿರ್ಮಾಣ ಸಹಕಾರಿ ಸಂಘದ ನಿರ್ದೇಶಕರುಗಳಾದ ಶಿವಕುಮರ್ ಎಸ್.ಎಮ್, ಸುಕನ್ಯಾ ಹರಿದಾಸ್, ಸುಜಿತ್ ರಾವ್ ಉಪಸ್ಥಿತರಿದ್ದು ಮಾಃಇತಿ ಕಾರ್ಯಾಗಾರ ಸಂಘಟಿಸಿದರು. ಕಾರ್ಮಿಕರ ಗೃಹ ನಿರ್ಮಾಣ ಸಕಾರಿ ಸಂಘದ ಸ್ವ-ಸಹಾಯ ಸಂಘಗಳ ಸಂಚಾಲಕ ಸಂಜೀವ ಆರ್, ಸಂಘದ ಸಿಬ್ಬಂದಿಗಳಾದ ವಿಜಯಲಕ್ಷೀ, ಉಷಾ, ಪದ್ಮಾವತಿ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.