ಬೆಳ್ತಂಗಡಿ: ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ಅ. 6 ರಂದು ಜರುಗಿದ ಆಕಾಶವಾಣಿ ಸಂಗೀತ ಸಮ್ಮೇಳನ -2018 ರಲ್ಲಿ ಖ್ಯಾತ ಸ್ಯಾಕ್ಸೋಫೋನ್ ವಾದಕ, ಆಕಾಶವಾಣಿ ಮತ್ತು ದೂರದರ್ಶನ ಕಲಾವಿದ ಧರ್ಮಸ್ಥಳ ಬಿ ಪ್ರಕಾಶ ದೇವಾಡಿಗ ತನ್ನ ಸ್ಯಾಕ್ಸೋಫೋನ್ ಲೈವ್ ಕಾರ್ಯಕ್ರಮ ನಡೆಸಿಕೊಟ್ಟರು.
ಇವರೊಂದಿಗೆ ಪಕ್ಕ ವಾದ್ಯದಲ್ಲಿ ವಾಯೋಲಿನ್ ವಿದ್ವಾನ್ ಆರ್ ದಯಾಕರ್ ಮೈಸೂರು, ಮೃದಂಗದಲ್ಲಿ ಎಂ.ಆರ್ ಸಾಯಿನಾಥ್ ಬೆಂಗಳೂರು, ಮೋರ್ಸಿಂಗ್ನಲ್ಲಿ ಎಸ್.ವಿ ಬಾಲಕೃಷ್ಣ ಬೆಂಗಳೂರು, ತಂಬೂರದಲ್ಲಿ ಶ್ರೀನಿವಾಸನ್ ವಿಶಾಖಪಟ್ಟಣ ಸಹಕರಿಸಿದರು.
ಇವರ ಕಾರ್ಯಕ್ರಮವು ನವಂಬರ್ 27 ರಂದು ರಾತ್ರಿ 10.00 ಗಂಟೆಯಿಂದ 11.00 ಗಂಟೆಯವರೆಗೆ ಆಕಾಶವಾಣಿಯ ಎಲ್ಲಾ ನಿಲಯಗಳಲ್ಲೂ ದೇಶಾಧ್ಯಂತ ಏಕಕಾಲದಲ್ಲಿ ಮರುಪ್ರಸಾರವಾಗಲಿದೆ.