ಯುವ ವಕೀಲೆ ನೇಣು ಬಿಗಿದು ಆತ್ಮಹತ್ಯೆ

Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ತಾಲೂಕಿನ ಕಣಿಯೂರು ಗ್ರಾಮದವರಾಗಿದ್ದು ಮಂಗಳೂರಿನ ಅಪಾರ್ಟ್‌ಮೆಂಟ್ ಒಂದರಲ್ಲಿ ವಾಸವಾಗಿದ್ದ ಯುವನ್ಯಾಯವಾದಿ ಅಶ್ವಿನಿ ಶೆಟ್ಟಿ(26 .ವ) ಅ. 13 ರಂದು ನೇಣುಬಿಗಿದು ಅತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕಾನೂನು ಪದವಿ ಮುಗಿಸಿದ್ದ ಅವರು ಬೆಳ್ತಂಗಡಿ ವಕೀಲರೊಬ್ಬರ ಕಚೇರಿಯಲ್ಲಿ ಕೆಲಕಾಲ ಇದ್ದು, ಬಳಿಕ ಮಂಗಳೂರಿನ ವಕೀಲರ ಕಚೇರಿಯಲ್ಲಿ ಪ್ರಾಕ್ಟಿಕಲ್ ಅಭ್ಯಾಸ ಮುಂದುವರಿಸಿದ್ದರು. ಆ ಬಳಿಕ ನಗರದ ಹಣಕಾಸು ಸಂಸ್ಥೆಯೊಂದರಲ್ಲಿ ಕೆಲ ಕಾಲ ಉದ್ಯೋಗ ನಡೆಸಿ, ಇದೀಗ ಶಿಪ್ಪಿಂಗ್ ಕಂಪೆನಿಯೊಂದರಲ್ಲಿ ಕಳೆದ ವಾರವಷ್ಟೇ ಇಂಟರ್‌ವ್ಯೂ ಮುಗಿಸಿ ಉದ್ಯೋಗ ಅರ್ಹತೆ ಪಡೆದಿದ್ದರು. ಆದರೆ ಅಲ್ಲಿ ಕೆಲಸಕ್ಕೆ ಇನ್ನಷ್ಟೇ ಸೇರಬೇಕಿತ್ತು.
ಮನೆಯವರಿಗೆ ತಿಳಿಯದೆ ಯುವಕನ ಜೊತೆ ಪ್ರೀತಿ ಆತ್ಮಹತ್ಯೆಗೆ ಕಾರಣ
ಯುವತಿಗೆ ಯುವಕನೊಬ್ಬನ ಜೊತೆ ಪ್ರೇಮ ಸಂಬಂಧವಿತ್ತು. ಈ ವಿಚಾರ ಮನೆಯವರಿಗೆ ಅರಿವಿಲ್ಲದ್ದರಿಂದ ಅವರು ಇನ್ನೊಂದು ಹುಡುಗನನ ಜೊತೆ ನಿಶ್ಚಿತಾರ್ಥಕ್ಕೆ ತಯಾರಿ ನಡೆಸಿದ್ದರು. ಈ ನಡುವೆ ಗೊಂದಲಕ್ಕೊಳಗಾದ ಯುವತಿ ನೇಣಿಗೆ ಶರಣಾಗಿದ್ದಾರೆ ಎಂದು ವದಂತಿ ಹಬ್ಬಿದೆ. ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.