ಬೆಳ್ತಂಗಡಿ ಸಾರ್ವಜನಿಕ ಶ್ರೀ ಶಾರದೋತ್ಸವ

ಬೆಳ್ತಂಗಡಿ:ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ ಬೆಳ್ತಂಗಡಿ ವತಿಯಿಂದ ಅ.15 ರಿಂದ 18ರ ವರೆಗೆ ಬೆಳ್ತಂಗಡಿ ಶ್ರೀ ಗುರುನಾರಾಯಣ ವಾಣಿಜ್ಯ ಸಂಕೀರ್ಣದ ಸಭಾಭವನದಲ್ಲಿ ಜರುಗಲಿರುವ 40ನೇ ವರ್ಷದ ಶ್ರೀ ಶಾರದೋತ್ಸವ ಕಾರ್ಯಕ್ರಮವನ್ನು ಇಂದು (ಅ.15)  ಬಿ.ಸತೀಶ್ ರಾವ್ ಕುತ್ಯಾರು ದೀಪ ಪ್ರಜ್ವಲಿಸುವ ಮೂಲಕ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿಯ ಅಧ್ಯಕ್ಷ ಶ್ರೀಕೇಶ ಕೋಟ್ಯಾನ್, ಉಪಾಧ್ಯಕ್ಷ ಅಭಿನಂದನ್ ಹರೀಶ್ ಕುಮಾರ್,  ಕಾರ್ಯದರ್ಶಿ ಬಿ ಹೆಚ್ ರಾಜು ಸುದೆಮುಗೇರು, ಅರ್ಚಕ ಬಿ ಗಣೇಶ್ ಐತಾಳ್ ಪಂಜುರ್ಪು,  ಸಮತಿಯ ಗೌರವ ಸಲಹೆಗಾರರಾದ  ಮುಗುಳಿ ನಾರಾಯಣ ರಾವ್,  ಗಣೇಶ್ ಪೈ ಬೆಳ್ತಂಗಡಿ, ಜಗದೀಶ್ ಪೈ ಬೆಳ್ತಂಗಡಿ, ಬಾಬು ಆರ್ ಗೌಡ ಹುಣ್ಸೆಕಟ್ಟೆ, ಪದ್ಮಕುಲಾಲ್ ಸಂಜಯನಗರ, ಜನಾರ್ಧನ ಸುದೆಮುಗೇರು, ಜಿ.ವಿ ಹರೀಶ್ ಸವಣಾಲು, ಜನಾರ್ದನ ಬಂಗೇರ ಮೂಡಾಯಿಗುತ್ತು ಮೊದಲಾದವರು ಉಪಸ್ಥಿತರಿದ್ದರು.
ಬೆಳಿಗ್ಗೆ ಶ್ರೀ ಶಾರದಾ ದೇವಿಯ ಮೂರ್ತಿ ಪ್ರತಿಷ್ಠೆ , ಕುಂಕುಮಾರ್ಚನೆ, ಮಹಾಪೂಜೆ, ಪ್ರಸಾದ ವಿತರಣೆ , ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.