HomePage_Banner_
HomePage_Banner_

ಮಡಂತ್ಯಾರಿನಲ್ಲಿ ಶ್ರೀ ದುರ್ಗಾ ಟೆಕ್ಸ್‌ಟೈಲ್ಸ್ ಉದ್ಘಾಟನೆ

ಮಡಂತ್ಯಾರು: ಉಜಿರೆ, ಬೆಳ್ತಂಗಡಿ, ಬಂಟ್ವಾಳದಲ್ಲಿ ಯಶಸ್ವಿಯಾಗಿ ಕಾರ್ಯಾಚರಿಸುತ್ತಿರುವ ಶ್ರೀ ದುರ್ಗಾ ಟೆಕ್ಸ್‌ಟೈಲ್ಸ್ ಮತ್ತು ರೆಡಿಮೇಡ್ಸ್ ಇದರ ನಾಲ್ಕನೇ ಮಳಿಗೆ `ಶ್ರೀ ದುರ್ಗಾ ಟೆಕ್ಸ್‌ಟೈಲ್ಸ್’  ಮಡಂತ್ಯಾರು ಮುಖ್ಯ ರಸ್ತೆಯ ಬಳಿಯ ಪೊಂಪೈ ಆರ್ಕೇಡ್‌ನಲ್ಲಿ ಅ.13 ರಂದು ಶುಭಾರಂಭಗೊಂಡಿತು.
ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಯು. ವಿಜಯರಾಘವ ಪಡ್ವೆಟ್ನಾಯ ಅವರು ನೂತನ ಸಂಸ್ಥೆಯನ್ನು ದೀಪ ಬೆಳಗಿಸಿ ಮಾತನಾಡಿ, ಮನುಷ್ಯನ ಸೌಂದರ್ಯ ಹೆಚ್ಚಲು ವಿವಿಧ ವಿನ್ಯಾಸದ ಬಟ್ಟೆಗಳು ಅಗತ್ಯವಾಗಿದ್ದು, ಮೋಹನ ಚೌಧರಿಯವರು ಉಜಿರೆಯಲ್ಲಿ ಪ್ರಥಮವಾಗಿ ಈ ಜವುಳಿ ಉದ್ಯಮವನ್ನು ಆರಂಭಿಸಿದರು. ಅವರ ಸೇವಾ ಮನೋಭಾವದಿಂದ ಈ ಸಂಸ್ಥೆ ಜನಸ್ನೇಹಿಯಾಗಿ ಬೆಳೆದು ಗ್ರಾಹಕರನ್ನು ಆಕರ್ಷಿಸುದರ ಜೊತೆಗೆ ಆನೇಕ ಶಾಖೆಗಳು ಆರಂಭಕ್ಕೆ ಕಾರಣವಾಗಿದೆ. ಈ ಉದ್ಯಮ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಮಡಂತ್ಯಾರು ಸೇಕ್ರೆಡ್ ಹಾರ್ಟ್ ಚರ್ಚ್‌ನ ಧರ್ಮಗುರು ರೆ|ಫಾ| ಬಾಸಿಲ್‌ವಾಸ್ , ದ.ಕ ಮತ್ತು ಉಡುಪಿ ಜಿಲ್ಲಾ ಜಮಿಯತುಲ್ ಫಲಾಹ್‌ನ ನಿಕಟಪೂರ್ವ ಅಧ್ಯಕ್ಷ ಹಾಜಿ ಅಬ್ದುಲ್ ಲತೀಫ್ ಸಾಹೇಬ್ , ಮಾಲಾಡಿ ಗ್ರಾ.ಪಂ ಅಧ್ಯಕ್ಷ ಬೇಬಿ ಸುವರ್ಣ, ಪಾರೆಂಕಿ ಮಹಿಷಮರ್ದಿನಿ ದೇವಸ್ಥಾನದ ಆಡಳಿತ ಮೊಕ್ತೇಸರ ಬಿ.ರಾಜಶೇಖರ ಶೆಟ್ಟಿ ಭಂಡಾರಿಗುಡ್ಡೆ , ಕಟ್ಟಡ ಮಾಲಕ ಜೈಸನ್ ರೊಡ್ರಿಗಸ್, ಪಾರೆಂಕಿ ದೇವಸ್ಥಾನದ ಪ್ರಧಾನ ಅರ್ಚಕ ಶ್ರೀಧರ ಭಟ್, ಮಡಂತ್ಯಾರಿನ ರೆ|ಫಾ| ಜಾರ್ಜ್ ಆಕಾಶದೀಪ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ಸಂಸ್ಥೆಗೆ ಶುಭ ಹಾರೈಸಿದರು.
ಸಂಸ್ಥೆಯ ಮಾಲಕ ಮೋಹನ ಚೌಧರಿ ಅವರು ಪ್ರಸ್ತಾವಿಕವಾಗಿ ಮಾತನಾಡಿ ಕಳೆದ ಮೂರು ವರ್ಷದ ಹಿಂದೆ ಉಜಿರೆಯಲ್ಲಿ ನಮ್ಮ ಸಂಸ್ಥೆ ಆರಂಭಗೊಂಡಿದ್ದು, ಅಲ್ಲಿ ಜನರ ಪ್ರೀತಿ, ವಿಶ್ವಾಸ ದೊರಕಿದ್ದರಿಂದ ಸಂಸ್ಥೆ ಬೆಳೆಯಿತು. ಮಡಂತ್ಯಾರಿನಲ್ಲಿಯೂ ಸಂಸ್ಥೆಯನ್ನು ಆರಂಭಿಸುವಂತೆ ಆನೇಕರು ಒತ್ತಾಯಿಸಿ, ಬೆಂಬಲ ನೀಡಿದ್ದರಿಂದ ಇಂದು ಈ ಸಂಸ್ಥೆ ಆರಂಭಗೊಂಡಿದೆ ಎಂದು ಸಹಕರಿಸಿದ ಮಡಂತ್ಯಾರು ಜನತೆಗೆ ಅಭಿನಂದನೆ ಸಲ್ಲಿಸಿ, ಊರಿನ ಜನರ ಜೊತೆ ನಮ್ಮ ಸಂಸ್ಥೆ ಯಾವಗಲೂ ಇರುತ್ತದೆ ಎಂದು ಹೇಳಿದರು.
ಮಾಲಕ ಮೋಹನ ಚೌಧರಿ ಸ್ವಾಗತಿಸಿ, ಜನಜಾಗೃತಿ ವೇದಿಕೆಯ ಯೋಜನಾಧಿಕಾರಿ ತಿಮ್ಮಯ್ಯ ನಾಯ್ಕ ಕಾರ್ಯಕ್ರಮ ನಿರೂಪಿಸಿ, ಜೇಸಿ ನಿಕಟಪೂರ್ವಾಧ್ಯಕ್ಷ ಸಂತೋಷ್ ಪಿ. ಕೋಟ್ಯಾನ್ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.