ನ್ಯಾಯತರ್ಪು: ವಿದ್ಯಾರ್ಥಿ ಸಮುದ್ರ ಪಾಲು; ಮೃತದೇಹ ಪತ್ತೆ

ನ್ಯಾಯತರ್ಪು: ಮಂಗಳೂರಿನ ಪಣಂಬೂರು ಬೀಚ್ ನಲ್ಲಿ ಸಮುದ್ರಸ್ನಾನಕ್ಕೆಂದು ತೆರಳಿದ ಯುವಕ ನೀರು ಪಾಲಾದ ಘಟನೆ ಅ.1 ರಂದು ನಡೆದಿದೆ. ಮೇಲಂತಬೆಟ್ಟು ಪ್ರಥಮ ದರ್ಜೆ ಪದವಿ ಕಾಲೇಜಿನ ದ್ವಿತೀಯ ವರ್ಷದ ಬಿ.ಕಾಂ.ವಿದ್ಯಾರ್ಥಿ, ನ್ಯಾಯತರ್ಪು ಗ್ರಾಮದ ಕಜೆ ನಿವಾಸಿ ಶ್ರೀಮತಿ ಬೇಬಿ ಮತ್ತು ಕೇಶವ ಪೂಜಾರಿ ದಂಪತಿ ಪುತ್ರ ಸುಧಾರಾಜ್ (19.ವ) ನೀರು ಪಾಲಾದ ದುರ್ದೈವಿ.

ಸುಧಾರಾಜ್ ರವರು ಎಂದಿನಂತೆ ಅ.13 ರಂದು ಬೆಳಿಗ್ಗೆ ಕಾಲೇಜ್ ಗೆಂದು ತೆರಳಿದ್ದು,  ಸುಮಾರು 10 ಜನ ಸಹಪಾಠಿ ಗೆಳೆಯರೊಂದಿಗೆ ಸೇರಿ ಮಂಗಳೂರಿನ ಪಣಂಬೂರು ಸಮುದ್ರಕ್ಕೆ ಸ್ಥಾನ ಮಾಡಲೆಂದು ಹೋಗಿ ಸಮುದ್ರಕ್ಕೆ ಇಳಿದಿರುತ್ತಾರೆ. ಈ ಸಮಯದಲ್ಲಿ ತೆರೆಯ ಆರ್ಭಟ ಜೊರಾಗಿದ್ದ ಕಾರಣ, ವಿದ್ಯಾರ್ಥಿ ನೀರಿನ ಸೆಳೆತಕ್ಕೆ ಸಿಕ್ಕಿ ಸಾವನ್ನಪ್ಪಿದ್ದಾರೆ. ಸಹಪಾಠಿಗಳು ಹಾಗೂ ಮೀನುಗಾರರು  ಪ್ರಾಣರಕ್ಷಣೆಗೆ ಎಷ್ಟೇ ಪ್ರಯತ್ನಿಸಿದರೂ ಫಲಕಾರಿಯಾಗಲಿಲ್ಲ. ಬಾಲಕನ ಮೃತದೇಹ ಪತ್ತೆಗಾಗಿ ಶೋಧ ಕಾರ್ಯಾಚರಣೆ ನಡೆದಿದ್ದು, ಅ.14 ರಂದು ಸಂಜೆ ಮೃತದೇಹ ಪತ್ತೆಯಾಗಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.