ಮುಂಡೂರು ಶ್ರೀ ನಾಗಕಲ್ಲುರ್ಟಿ ದೈವಸ್ಥಾನ ದಲ್ಲಿ ನವರಾತ್ರಿ ಮಹೋತ್ಸವ-ಚಂಡಿಕಾ ಹೋಮ

ಮುಂಡೂರು: ಶ್ರೀ ನಾಗಕಲ್ಲುರ್ಟಿ ದೈವಸ್ಥಾನ ಶ್ರೀ ಕ್ಷೇತ್ರ ಮಂಗಳಗಿರಿ ಮುಂಡೂರಿನಲ್ಲಿ ನವರಾತ್ರಿ ಪೂಜಾ ಮಹೋತ್ಸವ ಅ.10ರಿಂದ ಅ.12ರವರಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ಜರುಗಿತು.
ಪ್ರತಿ ದಿನ ಮಧ್ಯಾಹ್ನ ವಿವಿಧ ಭಕ್ತರ ಸೇವಾ ರೂಪದಲ್ಲಿ ಚಂಡಿಕಾ ಹೋಮ, ಸಂಜೆ ವಿವಿಧ ಭಜನಾ ಮಂಡಳಿಗಳಿಂದ ಭಜನಾ ಕಾರ್ಯಕ್ರಮ ಭಕ್ತಿ, ಭಾವದಿಂದ ಜರುಗಿತು. ಅ.18 ರಂದು ಬೆಳಗ್ಗೆ ಶಾಸಕ ಹರೀಶ್ ಪೂಂಜ ಸೇರಿದಂತೆ ಭಕ್ತರಿಂದ ಚಂಡಿಕಾ ಹೋಮ, ಮಹಾಪೂಜೆ, ರಾತ್ರಿ ೮ರಿಂದ ಮಂದಿ ಮುತ್ತೈದೆಯರಿಗೆ ಬಾಗಿನ ಸಮರ್ಪಣೆ, ಆಯುಧ ಪೂಜೆ, ಉದ್ಭವ ಮಹಾಗಣಪತಿ ಮತ್ತು ಶ್ರೀ ದೇವಿ ನಾಗಾಂಬಿಕಾ ತಾಯಿಗೆ ರಂಗಪೂಜೆ ನಡೆಯಲಿದೆ ನಡೆಯಲಿದೆ.
ಆಡಳಿತ ಮೋಕ್ತೇಸರ ರಾಜೀವ ಇವರ ನೇತೃತ್ವದಲ್ಲಿ ಎ, ಬಿ, ಸಿ, ಡಿ ಸ್ವಸಹಾಯ ತಂಡದ ಅಧ್ಯಕ್ಷರಾದ ಸಂತೋಷ್ ಕುಮಾರ್, ಜಯರಾಜ್, ಪ್ರದೀಪ್ ಕುಲಾಲ್, ಶ್ರೀಮತಿ ಪುಷ್ಪಾವತಿ, ಕಾರ್ಯದರ್ಶಿಗಳಾದ ಗುಣಕರ ಕೋಟ್ಯಾನ್, ಶ್ರೀಮತಿ ಸರೋಜ, ಅನೋಜ್, ಹರೀಶ್ ಕುಲಾಲ್, ಸರ್ವ ಸದಸ್ಯರು, ಶ್ರೀ ನಾಗಂಬಿಕಾ ಭಜನಾ ಮಂಡಳಿಯ ಅಧ್ಯಕ್ಷ, ಕಾರ್ಯದರ್ಶಿ ಸದಸ್ಯರು ಇವರ ಸಹಕಾರದಲ್ಲಿ ನಡೆದ ಕಾರ್ಯಕ್ರಮಗಳಲ್ಲಿ ಊರ-ಪರವೂರುಗಳ ಅಪಾರ ಸಂಖ್ಯೆಯಲ್ಲಿ ಭಕ್ತರುಭಾಗವಹಿಸಿ ಧನ್ಯತೆಯನ್ನು ಪಡೆದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.