ಗುರುವಾಯನಕೆರೆಯಲ್ಲಿ ಮಕ್ಕಳ ಶಿಬಿರ

Advt_NewsUnder_1
Advt_NewsUnder_1
Advt_NewsUnder_1

ಗುರುವಾಯನಕೆರೆ: ಶ್ರೀ ರಾಜರಾಜೇಶ್ವರಿ ಭಜನಾ ಮಂಡಳಿ ಹಾಗೂ ಶ್ರೀ ವಿವೇಕಾನಂದ ಬಾಲಗೋಕುಲದ ವತಿಯಿಂದ ಗುರುವಾಯನಕೆರೆ ನಮ್ಮಮನೆ ಹವ್ಯಕ ಭವನದಲ್ಲಿ ಅ.7 ರಿಂದ 8ರ ವರೆಗೆ ಎರಡು ದಿನಗಳ ಮಕ್ಕಳ ಶಿಬಿರ ನಡೆಯಿತು. ಶಿಬಿರದ ಉದ್ಘಾಟನೆಯನ್ನು ಹಿರಿಯರಾದ ಕಾಂತಜೆ ಈಶ್ವರ ಭಟ್ ನೆರವೇರಿಸಿದರು.

ಮುಖ್ಯ ಅತಿಥಿಗಳಾಗಿ  ಗೋವಿಂದ ಭಟ್, ಕೃಷ್ಣ ಭಟ್ ಅತಿಥಿಗಳಾಗಿ ಭಾಗವಹಿಸಿದ್ದರು. ಶಿಬಿರದ ಸಂಪನ್ಮೂಲ ವ್ಯಕ್ತಿಗಳಾಗಿ ಶ್ರೀಮತಿ ಜಯಶ್ರೀ, ಶ್ರೀಮತಿ ಪೂರ್ಣಿಮಾ, ದಯಾನಂದ  ಭಾಗವಹಿಸಿದ್ದರು. ಶಿಬಿರದಲ್ಲಿ ಭಜನೆ, ಕುಣಿತ ಭಜನೆ, ಯೋಗ, ರಂಗೋಲಿ, ಆರೋಗ್ಯ ಮಾಹಿತಿ, ಔಷಧಿ ಸಸ್ಯಗಳ ಗುರುತಿಸುವಿಕೆ, ದೇಶ ಭಕ್ತಿಗೀತೆ, ಒಳಾಂಗಣ ಆಟಗಳ ಕಲಿಸಿಕೊಡಲಾಯಿತು. ಆರೋಗ್ಯ ಸಹಾಯಕಿ ಶ್ರೀಮತಿ ಜಯಂತಿ ಆರೋಗ್ಯ ಮಾಹಿತಿ ನೀಡಿದರು. ಸುಮಾರು ಅರುವತ್ತು ಮಂದಿ ಮಕ್ಕಳು ಭಾಗವಹಿಸಿ ಈ ಶಿಬಿರದ ಪ್ರಯೋಜನ ಪಡೆದುಕೊಂಡರು.

ಸಮಾರೋಪದ ಅಧ್ಯಕ್ಷತೆವಹಿಸಿ ಮಾತನಾಡಿದ ಪೃಥ್ವಿ ಗೋವಿಂದ ಭಟ್, ಇಂತಹ ಶಿಬಿರದಲ್ಲಿ ಭಾಗವಹಿಸುವುದರಿಂದ ನಮ್ಮ ಸಂಸ್ಕೃತಿಯ ಬಗ್ಗೆ ತಿಳಿದುಕೊಳ್ಳಬಹುದು ಎಂದು ನುಡಿದರು. ಇನ್ನೋರ್ವ ಅತಿಥಿ ಪ್ರಕಾಶ್ ಕಾಮತ್ ಮಾತನಾಡಿ, ಮಕ್ಕಳು ತಮ್ಮ ವಿದ್ಯಾಭ್ಯಾಸದಲ್ಲಿ ಮುಂದೆ ಬರಲು ಯೋಗ, ಭಜನೆ ಇತ್ಯಾದಿಗಳು ಅಗತ್ಯ. ಇಂತಹ ಶಿಬಿರಗಳಿಂದ ಮಕ್ಕಳಲ್ಲಿ ಮಾನಸಿಕ ಬೆಳವಣಿಗೆ ಉತ್ತಮಗೊಳ್ಳುತ್ತದೆ ಎಂದು ನುಡಿದರು. ರಾಮದಾಸ್ ಪೈ, ವೇದವ್ಯಾಸ ಶಿಶು ಮಂದಿರದ ಅಧ್ಯಕ್ಷೆ ರಚನಾ ಕಾಶಿನಾಥ್, ಮಕ್ಕಳ ಪೋಷಕರು, ವೇದವ್ಯಾಸ ಶಿಶು ಮಂದಿರದ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

ಮಕ್ಕಳ ಸಾಂಸ್ಕ್ರತಿಕ ಕಾರ್ಯಕ್ರಮದ ನಿರೂಪಣೆಯನ್ನು ಶಿಬಿರಾರ್ಥಿ ಮನೋಜ್ ನಡೆಸಿಕೊಟ್ಟರು. ಸಭಾ ಕಾರ್ಯಕ್ರಮದಲ್ಲಿ ಶಿಬಿರಾರ್ಥಿಗಳಾದ ಯಶ್ವಿತ್, ಬಿಂದು, ವಿನು ಪ್ರಾರ್ಥಿಸಿ, ಶಿಬಿರಾರ್ಥಿ ಪರೀಕ್ಷಿತ್ ಸ್ವಾಗತಿಸಿ, ರಾಜಗೋಪಾಲ್ ಭಟ್  ಪ್ರಸ್ತಾವಣೆಗೈದರು. ಶ್ರೀಮತಿ ಪೂರ್ಣಿಮಾ ನಿರೂಪಿಸಿ,. ದಯಾನಂದ ಧನ್ಯವಾದವಿತ್ತರು. ಶ್ರೀಮತಿ ಶೋಭಾ, ಶ್ರೀಮತಿ ಶೈಲಜಾ, ಶ್ರೀಮತಿ ಪ್ರಿಯದರ್ಶಿನಿ, ಶ್ರೀಮತಿ ರಾಧಿಕಾ ಪೈ, ಶ್ರೀಮತಿ ಕವಿತಾ, ಶ್ರೀಮತಿ ಸುಮಿತ್ರಾ ಇವರು ಸಹಕರಿಸಿದರು.

 

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.