HomePage_Banner_
HomePage_Banner_
HomePage_Banner_

ರೆಖ್ಯಾ: ನೀರು ಪಾಲಾದ ವ್ಯಕ್ತಿಯ ಮೃತದೇಹ ಪತ್ತೆ

Advt_NewsUnder_1
ಶೀನ

ರೆಖ್ಯಾ: ಮೀನು ಹಿಡಿಯಲೆಂದು ನೇತ್ರಾವತಿ ನದಿಯಲ್ಲಿ ಗಾಳ ಹಾಕುತಿದ್ದ ವ್ಯಕ್ತಿಯೋರ್ವ ನದಿಯಲ್ಲಿ ಹೆಚ್ಚಳಗೊಂಡ ನೀರಿನ ಸೆಳೆತಕ್ಕೆ ಸಿಲುಕಿ ಕೊಚ್ಚ್ಚಿಹೋದ ಘಟನೆ ನಡೆದಿದ್ದು, ಇವರ ಮೃತದೇಹ ಅ.10 ರಂದು ಉಪ್ಪಿನಂಗಡಿ ಗ್ರಾಮದ ಮಠ ಎಂಬಲ್ಲಿ ಪತ್ತೆಯಾಗಿದೆ.
ಬಜತ್ತೂರು ಗ್ರಾಮದ ವಳಾಲು ತೂಗು ಸೇತುವೆಯ ಸಮೀಪ ಹಲವಾರು ಮಂದಿ ಅ.9ರಂದು ಸಂಜೆ ನದಿ ಮೀನಿಗೆ ಗಾಳಹಾಕುತ್ತಿದ್ದ ವೇಳೆ ನದಿಯ ಮಧ್ಯಭಾಗಕ್ಕೆ ಹೋಗಿ, ಗಾಳ ಎಸೆದು ಹಿಂದಿರುಗುತ್ತಿದ್ದ ವ್ಯಕ್ತಿಯೋರ್ವ, ನದಿಯಲ್ಲಿ ನೀರಿನ ಮಟ್ಟ ಹೆಚ್ಚಳಗೊಂಡ ಪರಿಣಾಮ ನೀರಿನ ಸೆಳೆತಕ್ಕೆ ಸಿಲುಕಿ ಕಣ್ಮರೆಯಾಗಿರುವುದನ್ನು ನೋಡಿರುವುದಾಗಿ ಸ್ಥಳೀಯರು ತಿಳಿಸಿದ್ದರು. ಈ ಮಧ್ಯೆ ರೆಖ್ಯಾ ಗ್ರಾಮದ ನಿವಾಸಿ ಸೀನ(55.ವ) ರವರು ಅ.9 ರಂದು ಸಂಜೆಯಿಂದ ನಾಪತ್ತೆಯಾಗಿರುವುದಾಗಿ ಅವರ ಮಗ ಶಿವಶಂಕರ್ ಪೊಲೀಸರಿಗೆ ದೂರು ನೀಡಿದ್ದರು.
ಈ ಹಿನ್ನಲೆಯಲ್ಲಿ ಮುಳುಗು ತಜ್ಞ ಹಾಗೂ ಈಜುಗಾರ ಬಂದಾರು ಮಹಮ್ಮದ್ ಹಾಗೂ ಪುತ್ತೂರು ಅಗ್ನಿಶಾಮಕ ದಳದ ಕೆ.ಪ್ರವೀಣ್ ಕುಮಾರ, ರುಕ್ಮಯ ಗೌಡ, ಆನಂದ, ಮೋಹನ, ಜಾದವ, ಶ್ರೀಧರ ನಾಯ್ಕ, ಕೃಷ್ಣ, ಜಾಲಿಬೇರ ರವರ ಸಹಾಯದಿಂದ ನದಿಯಲ್ಲಿ ಶೋಧ ಕಾರ್ಯಾಚರಣೆ ನಡೆಸಿದಾಗ ಮಠ ಎಂಬಲ್ಲಿ ನದಿ ಕಿನಾರೆಯಲ್ಲಿ ಸೀನ ರವರ ಮೃತದೇಹ ಪತ್ತೆಯಾಗಿದೆ. ಈ ಸಂಬಂಧ ಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲಾಗಿದೆ.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.