ನದಿಯಲ್ಲಿ ತುಂಬಿದ ಹೂಳು: ಶಿಶಿಲ ದೇವರ ಮೀನುಗಳಿಗೆ ಅಪಾಯ

Advt_NewsUnder_1
Advt_NewsUnder_1
Advt_NewsUnder_1

ಶಿಶಿಲ : ಕಳೆದ ಎರಡು ತಿಂಗಳುಗಳಿಂದ ಸತತವಾಗಿ ಸುರಿದ ಮಳೆಗೆ ಶಿಶಿಲದ ಕಪಿಲಾ ನದಿಯಲ್ಲಿ ಪ್ರವಾಹ ತುಂಬಿ ಹರಿದು ಈಗ ಪೂರ್ತಿ ಹೂಳು ತುಂಬಿ ಹೋಗಿದ್ದು, ಮತ್ಸ್ಯತೀರ್ಥ ಎಂದೇ ಖ್ಯಾತಿ ಗಳಿಸಿರುವ ಇಲ್ಲಿಯ ದೇವರ ಮೀನುಗಳಿಗೆ ಅಪಾಯ ತಂದೊಡ್ಡಿದೆ.
ಶಿಶಿಲ ದೇವಸ್ಥಾನದ ಬಳಿಯ ದೇವರ ಗುಂಡಿಯಲ್ಲಿ ಅಪಾರ ಸಂಖ್ಯೆಯಲ್ಲಿ ಪೆರುವೊಲು ಜಾತಿಯ ಮೀನುಗಳಿದ್ದು, ಇದು ದೇವರ ಮೀನುಗಳೆಂದು ಭಕ್ತರ ನಂಬಿಕೆಯಿದೆ. ಎಷ್ಟೇ ಪ್ರವಾಹ ಬಂದು ನದಿಯಲ್ಲಿ ನೀರು ಹರಿದರೂ ಈ ಮೀನುಗಳು ಇಲ್ಲಿಂದ ಹೋಗುವುದಿಲ್ಲ.
ಈ ಹಿಂದೆ ಬೇಸಿಗೆ ಕಾಲದಲ್ಲಿ ನದಿಯಲ್ಲಿ ನೀರಿನ ಹರಿವು ಕಡಿಮೆಯಾದಾಗ ಬಿಸಿಲಿನ ಝಳಕ್ಕೆ ನೀರಿನ ಉಷ್ಣತೆ ಏರಿಕೆಯಾಗಿ ಮೀನುಗಳಿಗೆ ಉಸಿರಾಟಕ್ಕೆ ತೊಂದರೆಯಾಗಿ ಅವುಗಳು ಚಡಪಡಿಸುತ್ತಿದ್ದವು. ಆದರೆ ಈ ಬಾರಿ ಸಾಕಷ್ಟು ಮಳೆ ಬಂದರೂ ನೀರಿನ ಹರಿವು ಕಡಿಮೆಯಿದೆ. ಜೊತೆಗೆ ಪ್ರವಾಹದ ಜೊತೆಗೆ ಬಾರಿ ಪ್ರಮಾಣದಲ್ಲಿ ಹೂಳು ಹರಿದು ಬಂದು ದೇವಸ್ಥಾನದ ಮೀನ ಗುಂಡಿಯಲ್ಲಿ ತುಂಬಿ ಹೋಗಿದೆ.
ಇದರಿಂದಾಗಿ ಮೀನ ಗುಂಡಿಯಲ್ಲಿ ನೀರು ನಿಲ್ಲುವುದು ಕಡಿಮೆಯಾಗಿದ್ದು, ಭಕ್ತರು ಆತಂಕ ವ್ಯಕ್ತಪಡಿಸಿದ್ದಾರೆ. ಇದರ ಬಗ್ಗೆ ಜಿಲ್ಲಾಡಳಿತ ನದಿಯ ಹೂಳು ತೆಗೆದು ನೀರು ನಿಲ್ಲುವ ವ್ಯವಸ್ಥೆ ಮಾಡಬೇಕು ಎಂದು ಭಕ್ತರು ಆಗ್ರಹಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.