ಬೈಕ್ ಸ್ಕಿಡ್ ಆಗಿ ಸಹಸವಾರ ಮೃತ್ಯು

ಬೆಳ್ತಂಗಡಿ: ಇಲ್ಲಿಯ ಚರ್ಚ್ ರೋಡ್ ಸಮೀಪ ಅ.7 ರಂದು ಬೈಕ್ ಸ್ಕಿಡ್ ಆಗಿ ಬಿದ್ದು ಗಂಭೀರ ಗಾಯಗೊಂಡ ಸಹ ಸವಾರ ಕಲ್ಲಗುಡ್ಡೆ ನಿವಾಸಿ ಕಿಶೋರ್ ಕುಲಾಲ್(32ವ) ಅವರು ಚಿಕಿತ್ಸೆ ಫಲಕಾರಿಯಾಗದೆ ಅ.9 ರಂದು ಮಂಗಳೂರಿನ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.
ಇವರು ತನ್ನ ಸಹೋದರ ಕಿರಣ್ ಕುಲಾಲ್ ಜೊತೆ ಬೈಕ್‌ನಲ್ಲಿ ಬರುತ್ತಿದ್ದ ವೇಳೆ ನಿಯಂತ್ರಣ ತಪ್ಪಿದ ಬೈಕ್ ರಸ್ತೆಗೆ ಮಗುಚಿ ಬಿದ್ದಿತ್ತು. ಬೈಕ್‌ನ ಹಿಂಬದಿ ಕುಳಿತ್ತಿದ್ದ ಕಿಶೋರ್ ಕುಲಾಲ್ ರಸ್ತೆಗೆ ಬಿದ್ದು, ತಲೆಗೆ ಗಂಭೀರ ಏಟು ತಗಲಿದ್ದು ಕೂಡಲೇ ಅವರನ್ನು ಚಂದ್ರರಾಜ್ ಮತ್ತಿತರರು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಅ,9 ರಂದು ಆಸತ್ರೆಯಲ್ಲಿ ಮೃತಪಟ್ಟರೆನ್ನಲಾಗಿದೆ. ಇವರು ಮೂರು ವರ್ಷಗಳ ಕಾಲ ಗುಜರಾತ್‌ನಲ್ಲಿ ವೆಲ್ಡಿಂಗ್ ವೃತ್ತಿಯನ್ನು ಮಾಡಿಕೊಂಡಿದ್ದು, ಅಲ್ಲಿ ಕೆಲಸ ಬಿಟ್ಟು ಮದ್ದಡ್ಕದಲ್ಲಿ ಈ ವೃತ್ತಿಯನ್ನು ನಡೆಸುತ್ತಿದ್ದರು. ಮೇಲಂತಬೆಟ್ಟು ಕಲ್ಲಗುಡ್ಡೆ ಮಂಜುಶ್ರೀ ನಗರದ ಶೀನ ಮೂಲ್ಯ ಮತ್ತು ಗುಣವತಿ ದಂಪತಿಯ ಹಿರಿಯ ಪುತ್ರನಾಗಿರುವ ಕಿಶೋರ್ ಕುಲಾಲ್ ಅವರಿಗೆ ಮದುವೆ ನಿಶ್ಚಿತಾರ್ಥವಾಗಿದ್ದು, ಡಿ.23 ಕ್ಕೆ ಅವರ ಮದುವೆ ನಡೆಸಲು ದಿನ ನಿಗದಿಗೊಳಿಸಲಾಗಿತ್ತು. ಇವರು ಭಜನಾ ಮಂಡಳಿ ಸೇರಿದಂತೆ ಅನೇಕ ಸಂಘ-ಸಂಸ್ಥೆಗಳಲ್ಲಿ ಸಕ್ರೀಯರಾಗಿದ್ದರು. ಮೃತರು ತಂದೆ, ತಾಯಿ, ಸಹೋದರ, ಸಹೋದರಿ ಬಂಧು ವರ್ಗದವರನ್ನು ಅಗಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.