ಪೊಲೀಸ್‌ಗೆ ಹಲ್ಲೆ ನಡೆಸಿ ಕರ್ತವ್ಯಕ್ಕೆ ಅಡ್ಡಿ: ಆರೋಪಿಗೆ 5 ವರ್ಷ ಕಠಿಣ ಸಜೆ 10 ಸಾವಿರ ರೂ. ದಂಡ

Advt_NewsUnder_1
Advt_NewsUnder_1
Advt_NewsUnder_1

ಗೇರುಕಟ್ಟೆ: ಪುತ್ತೂರು ತಾಲೂಕು ಚಿಕ್ಕಮುಡ್ನೂರು ಗ್ರಾಮದ ಜಿಡೆಕಲ್ಲು ಎಂಬಲ್ಲಿ 2015 ಏಪ್ರಿಲ್ 17  ರಂದು ಕರ್ತವ್ಯನಿರತ ಪೊಲೀಸರು ಮೇಲೆ ಹಲ್ಲೆ ನಡೆಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಪ್ರಕರಣದ ಆರೋಪಿ ಗೇರುಕಟ್ಟೆ ಕಜೆ ನಿವಾಸಿ ಉಮರ್ ಫಾರೂಕ್ ಅವರಿಗೆ5 ವರ್ಷ ಕಠಿಣ ಸಜೆ ಮತ್ತು 10 ಸಾವಿರ ರೂ.ದಂಡ ವಿಧಿಸಿ 5 ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶರು ಅ. 6 ರಂದು ತೀರ್ಪು ನೀಡಿದ್ದಾರೆ.
ಆರೋಪಿ ವಿರುದ್ಧ ದಾಖಲಾಗಿದ್ದ ಸೆಕ್ಷನ್ 307 ಐಪಿಸಿ ಯಲ್ಲಿ ಸೂಕ್ತ ಸಾಕ್ಷ್ಯಾಧಾರಗಳಿಲ್ಲದೆ ಆರೋಪ ಮುಕ್ತಗೊಂಡಿದ್ದರೆ, ಇನ್ನೊಂದು ಸೆಕ್ಷನ್ 333 ಐಪಿಸಿಯಲ್ಲಿ 5 ವರ್ಷ ಕಠಿಣ ಸಜೆ, 10 ಸಾವಿರ ರೂ ದಂಡ, ದಂಡ ತೆರಲು ತಪ್ಪಿದಲ್ಲಿ ಹೆಚ್ಚುವರಿ 1 ವರ್ಷ ಸಜೆ ಮತ್ತು 504 ಐಪಿಸಿ ಯಲ್ಲಿ 1 ವರ್ಷ ಸಾದಾ ಸಜೆ ಹಾಗೂ 2 ಸಾವಿರ ರೂ. ದಂಡ, ಅದನ್ನು ತೆರಲು ತಪ್ಪಿದಲ್ಲಿ ಹೆಚ್ಚುವರಿ 3 ತಿಂಗಳ ಸಜೆ ಅನುಭವಿಸಬೇಕಾಗಿ ತಿರ್ಪಿನಲ್ಲಿ ಶಿಕ್ಷೆ ಪ್ರಕಟಿಸಲಾಗಿದೆ.
ಘಟನೆ ವಿವರ:
ಪುತ್ತೂರು ತಾ. ಚಿಕ್ಕಮುಡ್ನೂರು ಗ್ರಾಮದ ಜಿಡೆಕಲ್ ಎಂಬಲ್ಲಿ 3 ವರ್ಷಗಳ ಹಿಂದೆ ಜೋಹರರವರ ವಾಸದ ಮನೆಯಲ್ಲಿ ಅವರ ಮಗಳು ತಸ್ಮಿಯಾ ರವರಿಗೆ ಆರೋಪಿ ಹಲ್ಲೆ ನಡೆಸಿ ಕೊಲೆ ನಡೆಸಲು ಯತ್ನಿಸುತ್ತಿರುವ ಬಗ್ಗೆ ಜೋಹರ ಠಾಣೆಗೆ ಮಾಡಿದ ಕರೆ ಮಾಹಿತಿ ನೀಡಿದಂತೆ ಪೊಲೀಸ್ ಸಿಬಂದಿಗಳಾದ ನಾರಾಯಣ ಮತ್ತು ವಿಶ್ವನಾಥ್ ರೈ ಧಾವಿಸಿದ್ದರು. ಈ ವೇಳೆ ತಸ್ಮಿಯಾ ಅವರ ಕಡೆಗೆ ಆರೋಪಿಯು ಕಬ್ಬಿಣದ ರಾಡಿನಿಂದ ಬೀಸುತ್ತಾ ದಾಳಿ ನಡೆಸುತ್ತಿದ್ದರು.
ಈ ವೇಳೆ ತಡೆಯಲು ಬಂದಿದ್ದ ಫೊಲೀಸ್ ನಾರಾಯಣ ಅವರ ತಲೆಗೆ ಆರೋಪಿ ಹೊಡೆದಾಗ ತಪ್ಪಿಸಿಕೊಳ್ಳುವ ಭರದಲ್ಲಿ ಕೈಗೆ ಪೆಟ್ಟು ಬಿದ್ದು ಮೂಳೆ ಮುರಿತಕ್ಕೊಳಗಾಗಿ ಗಂಭೀರ ಸ್ವರೂಪದ ಗಾಯಗೊಂಡಿದ್ದರು.
ಈ ಸಂಬಂಧ ಆರೋಪಿಯನ್ನು ಬಂಧಿಸಿ ಕಲಂ 504333307 ಅನ್ವಯ ಕೇಸು ದಾಖಲಿಸಿಕೊಳ್ಳಲಾಗಿತ್ತು. ಪ್ರಕರಣದ ಹಿನ್ನೆಲೆಯಲ್ಲಿ ಆರೋಪಿಯನ್ನು ಆಗಿನ ಪೊಲೀಸ್ ಸರ್ಕಲ್ ಇನ್ಸ್‌ಪೆಕ್ಟರ್ ಮಂಜಯ್ಯ ಬಂಧಿಸಿದ್ದರು. ಈಗಿನ ಪೊಲಿಸ್ ನಿರೀಕ್ಷಕರಾದ ಮಹೇಶ್ ಪ್ರಸಾದ್ ತನಿಖೆ ನಡೆಸಿ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.